ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಥಗಾರಿಕೆ : ಆಕರ-ಪಠ್ಯ - ನಿರ್ವಹಣೆ / ೮೫

ಅದನ್ನು ಆಡಿತೋರಿಸುವ ಕಲಾವಿದನು ಅದನ್ನು ಗಮನಿಸಿ, ಅಳವಡಿಸ ಬೇಕಾಗುತ್ತದೆ. ನಮ್ಮ ಪ್ರಸಿದ್ಧ ಕಥಾನಕವಾದ 'ಕೋಟಿಚೆನ್ನಯ'ವನ್ನು ತೆಗೆದುಕೊಂಡರೆ, ಅದು ಪಾಡ್ಡನದ ಮೂಲದಲ್ಲಿರುವುದಕ್ಕಿಂತ ಭಿನ್ನವಾಗಿ ಪ್ರಸಂಗ ಕೃತಿಯಲ್ಲಿ, ರಂಗದಲ್ಲಿ ಇದೆ. ಇದಕ್ಕೆ ಮೂಲ ದಿ| ಪಂಜೆ ಮಂಗೇಶರಾಯರ ಕೃತಿ. ಇಲ್ಲಿ ಕೋಟಿಚೆನ್ನಯರ ಪಾತ್ರಗಳು ಪಾಡ್ಡನ ದಲ್ಲಿರುವುದಕ್ಕಿಂತ ಹೆಚ್ಚು ಉಜ್ವಲವಾಗಿದೆ. (ಈ ಮಾಹಿತಿ ನೀಡಿದವರು ಶ್ರೀ ಅಮೃತ ಸೋಮೇಶ್ವರರು). ಕಲಾವಿದನು ನೀಡುವ ಅರ್ಥಗಾರಿಕೆಯ ಚಿತ್ರಣಕ್ಕೆ ಪಂಜೆಯವರ ಕೃತಿ ಮತ್ತು ಪ್ರಸಂಗ ಕೃತಿಗಳೂ ಮುಖ್ಯ ಆಕರ ಹೊರತು ಪಾಡ್ಡನವು ಮುಖ್ಯ ಆಕರವಲ್ಲ.

ಕಥಾನಕವೊಂದನ್ನು, ನಿರ್ಧಿಷ್ಟ ವಿಚಾರ,ಆಶಯಗಳನ್ನು ಅಭಿವ್ಯಕ್ತಿಸುವ ಉದ್ದೇಶದಿಂದ ರೂಪಿಸಿ ಅಳವಡಿಸಿದ ಪ್ರಸಂಗಗಳೆಷ್ಟೊ ಆಧುನಿಕ ಕಾಲದಲ್ಲಿ ಬಂದಿವೆ. ವರ್ಣಾಂತರ, ಜಾತಿ ವಿನಾಶಗಳ ಸಂದೇಶ ಇರುವ 'ಅಮರೇಂದ್ರ ಪದವಿಜಯಿ' (ಕೆ. ಎಂ. ರಾಘವ ನಂಬಿಯಾರ್), ವ್ಯಕ್ತಿಯು ತನ್ನ ಆವರಣಗಳೆಂಬ ಕವಚಗಳನ್ನು ಮೀರಿ ಬೆಳೆಯುವ ಆಶಯದ 'ಸಹಸ್ರ ಕವಚ ಮೋಕ್ಷ', 'ಸರ್ವದಮನ'ನಾಗಿದ್ದ ಕ್ರೌರ್ಯಾ ಸ್ವಭಾವದ ಭರತನು, ಅದನ್ನು ಮೀರಿ ಬೆಳೆಯುವ ಚಿತ್ರಣದ 'ಭುವನ ಭಾಗ್ಯ, ಪೌರಾಣಿಕ ವಿಶ್ವರೂಪಾಚಾರ್ಯನನ್ನೂ, ತುಳುನಾಡಿನ ಕಲ್ಕುಡ ನನ್ನೂ ಬೆಸೆಯುವ 'ವೀರಕಲ್ಕುಡ', 'ಮಣ್ಣಿನ ಮಗನ ತುಡಿತದ ಆಶಯದ 'ಭೌಮಾಸುರ' (ಅಮೃತಸೋಮೇಶ್ವರ)- ಇಂತಹ ಪ್ರಸಂಗ ಗಳಲ್ಲಿ ಸೈದ್ಧಾಂತಿಕ ಉದ್ದೇಶಗಳಿಗಾಗಿ ಕತೆಯ ಬದಲಾವಣೆ, ಹೊಸ ವ್ಯಾಖ್ಯಾನಗಳಿವೆ. ಇಲ್ಲಿ ಅರ್ಥದಾರಿಯ ಜವಾಬ್ದಾರಿ ಹೆಚ್ಚಿನದು. ಅವನ ಅಭಿವ್ಯಕ್ತಿಯ ಸ್ವಂತಿಕೆ ಮತ್ತು ಭಿನ್ನ ಆಕರಗಳನ್ನು ಬಳಸುವ ಸ್ವಾತಂತ್ರ ವನ್ನು ಒಪ್ಪಿಯೂ, ಪ್ರಸಂಗದ ಉದ್ದೇಶವನ್ನು ಗಮನಿಸಿ ಅರ್ಥಗಾರಿಕೆ ಯನ್ನು ರಚಿಸಬೇಕಾಗುತ್ತದೆ. ಇದೊಂದು ಬಗೆಯ ನೂತನ 'ಪುರಾಣ ಭಂಜನ' ಮತ್ತು 'ಪುನರ್ನಿರ್ಮಾಣದ'ದ ಪ್ರಕ್ರಿಯೆಯಾಗಿದೆ. ಇದು ಸಾಂಪ್ರದಾಯಿಕ ಪ್ರಸಂಗಗಳ ಪ್ರದರ್ಶನದಲ್ಲೂ ನಡೆಯುತ್ತಲೇ ಇರು ವಂತಹದೇ ಆದರೂ, ಪ್ರಸಂಗವೇ ಆ ಉದ್ದೇಶ ಉಳ್ಳದ್ದಾಗಿದ್ದಾಗ ಅಲ್ಲಿ ಅವಕಾಶವೂ ಹೆಚ್ಚು, ಹೊಣೆಯೂ ಹೆಚ್ಚು.

ಇಲ್ಲಿ ಹಿಂದೆ ಹೇಳಿದ, "ಕಥಾಸರಣಿ-ಹಂದರ-ಚೌಕಟ್ಟುಗಳ ಪರಿಕಲ್ಪನೆ ಯನ್ನು ನೆನಪಿಸಿಕೊಳ್ಳಬಹುದು. ಕಥಾಸರಣಿ ಕತೆಯ ಸ್ಥೂಲವಾದ ನಡೆ