ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮಾಡಿದ್ದಾನೆ. ಕಾರಣ ಈ ಹೋತದ ವೃಷಣಗಳನ್ನು ಕೂಡಲೇ ಇಂದ್ರನಿಗೆ ಕೊಡಿಸಿರಿ; ಹವಿರ್ದ್ರವ್ಯವೆಂದು ಕಲ್ಪಿಸಿದ ಈ ಹೋತವು, ವೃಷಣವಿಲ್ಲದಂತಾದರೆ ನಿಮಗೆ ಪರಮಾನಂದವಾಗುವುದು. ನಿಮ್ಮನ್ನು ಸಂತೋಷಗೊಳಿಸಲು ಯಾವ ಮಾನವರು ನಿಮಗೆ ವೃಷಣವಿಲ್ಲದ ಹೋತನ್ನು ಅರ್ಪಿಸುವರೋ ಅವರಿಗೂ ನಿಮ್ಮಿಂದ ಅಕ್ಷಯಫಲಪ್ರಾಪ್ತಿಯಾಗಲಿ.”
ಅಗ್ನಿಯ ನುಡಿಯನ್ನು ಕೇಳಿ ಪಿತೃದೇವತೆಗಳು ಒಂದಾಗಿ ಹೋತದ ವೃಷಣಗಳನ್ನು ಕಿತ್ತು ಇಂದ್ರನಿಗೆ ಜೋಡಿಸಿದರು. ಇಂದ್ರನೇ ಅಂದಿನಿಂದ ಮೇಷವ್ಯಷಣನಾದನು. ಇದಕ್ಕೆ ಗೌತಮನ ಪ್ರಭಾವ, ತಪೋಬಲ ಕಾರಣವೆಂದೆನ್ನ ಬಹುದು. (ಬಾಲಕಾಂಡ/೪೯).

ಉತ್ತರಕಾಂಡ/೩೦

ಬ್ರಹ್ಮದೇವನು ಇಂದ್ರನಿಗೆ ವೈಷ್ಣವ ಯಾಗವನ್ನು ಮಾಡಲು ಪ್ರೇರಿಸಿದನು. ಈ ಸಂಗತಿಯನ್ನು ಅಗಸ್ತ್ಯೃಷಿಯಂ ರಾಮನಿಗೆ ವಿವರಿಸುವಾಗ, ಇಂದ್ರನಿಗೆ ಗೌತಮನಿಂದ ದೊರೆತ ಶಾಪದ ಉಲ್ಲೇಖವು ಬಂದಿದೆ. ರೂಪಗುಣಸಂಪನ್ನೆಯಾದ ಅಹಲ್ಯೆಯು ಬ್ರಹ್ಮನಿಂದ ನಿರ್ಮಿತಳಾಗಿದ್ದಳು. ಗೌತಮನು ಜಿತೇಂದ್ರಿಯನಾಗಿದ್ದನು. ಆತನ ಉಗ್ರತಪಶ್ಚರೈಯನ್ನು ಕಂಡು ಬ್ರಹ್ಮನು ಅಹಲ್ಯೆಯನ್ನು ಮೊದಲು ಗೌತಮನ ಬಳಿ ಠೇವಣಿ ಎಂದು, ನಂತರ ಪತ್ನಿಯೆಂದೂ ಆತನಿಗೆ ಅರ್ಪಿಸಿದನು. ಇದನ್ನರಿತ ಇಂದ್ರಾದಿ ದೇವತೆಗಳು ನಿರಾಶೆಗೊಂಡರು. ಇಂದ್ರನಂತೂ ಮನಸ್ಸಿನಲ್ಲಿ ಅಹಲ್ಯೆಯನ್ನು ತನ್ನ ಪತ್ನಿ ಎಂದೇ ಬಗೆದಿದ್ದನು. ಕಾಮಾಸಕ್ತನಾದ ಆತನ ಮನಸ್ಸು ಉಲ್ಬಣಗೊಂಡಿತು. ಗೌತಮನು ಆಶ್ರಮದಲ್ಲಿರದ ಸಮಯವನ್ನು ಸಾಧಿಸಿ, ಕಾಮಾಂಧನಾದ, ಕುಪಿತನಾದ ಇಂದ್ರನು ಅಹಲ್ಯೆಯನ್ನು ಬಲಾತ್ಕರಿಸಿದನು. ಇದನ್ನು ಅರಿತ ಗೌತಮನು ಇಂದ್ರನನ್ನು ಶಪಿಸಿದನು.


           ಯಸ್ಮಾನ್ಮೇ ಘರ್ಷಿತಾ ಪತ್ನೀ ತ್ವಯಾ ವಾಸವ ನಿರ್ಭಯಾತ್ |
           ತಸ್ಮಾತ್ತ್ವಂ ಸಮರೇ ಶಕ್ರ ಶತ್ರುಹಸ್ತಂ ಗಮಿಷ್ಯಸಿ ‖೩೨‖
           ಅಯಂ ತು ಭಾವೋ ದುರ್ಬುದ್ಧೇ ಯಸ್ತ್ವಯೇಹ ಪ್ರವರ್ತಿತಃ |
          ಮಾನುಷೇಷ್ವಪಿ ಲೋಕೇಷು ಭವಿಷ್ಯತಿ ನ ಸಂಶಯಃ ‖೩೩‖
          ತತ್ರಾರ್ಧಂ ತಸ್ಯ ಯಃ ಕರ್ತಾ ತ್ವಯ್ಯರ್ಧಂ ನಿಪತಿಷ್ಯತಿ |
          ನ ಚ ತೇ ಸ್ಥಾವರಂ ಸ್ಥಾನಂ ಭವಿಷ್ಯತಿ ನ ಸಂಶಯಃ ‖೩೪‖