ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಈ ರೀತಿ ನಡೆದರೆ, ಮಾತೆಗೆ ದುಃಖವನ್ನು ಕೊಟ್ಟ ಕಾರಣಕ್ಕಾಗಿ, ಅದು ಅಧರ್ಮವೆಂದೆನಿಸಿ ಸಿಂಧುಪತಿಯಾದ ಸಮುದ್ರನಿಗೆ ಬ್ರಹ್ಮಹತ್ಯೆಯ ಪಾಪವು ತಗುಲಿತು. ಅದೇ ರೀತಿ ರಾಮನೇ, ಲೋಕಕುಖ್ಯಾತ ನರಕವು ನಿನಗೆ ಪ್ರಾಪ್ತವಾಗುವುದು."
ಇದಕ್ಕೆ ಶಾಪವೆಂದೆನ್ನಬೇಕೆ? ಪ್ರತ್ಯಕ್ಷದಲ್ಲಿ ಶಾಪವನ್ನು ಕೊಟ್ಟಿಲ್ಲ. ಹೀಗಿದ್ದರೂ ಶಾಪದ ಸ್ವರೂಪವು ಸ್ಪಷ್ಟವಾಗಿದೆ.
ಇದು ಕಟ್ಟಳೆಯ ಶಾಪ. ಕಟ್ಟಳೆಯನ್ನು ಅಲಕ್ಷಿಸಿದ್ದರೂ ಶಾಪದ ಪರಿಣಾಮವು ಆಗಲಿಲ್ಲ; ಇದರಿಂದ ಒಂದು ಸುಗತಿಯು ಮನಸ್ಸಿನಲ್ಲಿ ಬರುತ್ತದೆ. ಶಾಪ ಕೊಡುವ ಅರ್ಹತೆಯು ಕೌಸಲ್ಯೆಗೆ ಇರಲಿಲ್ಲ; ಅಥವಾ ಪುತ್ರನ ವಿಯೋಗವನ್ನು ಸಹಿಸುವದು, ಯಾವ ಪರಿಸ್ಥಿತಿಯಲ್ಲಿಯೂ ಕೌಸಲ್ಯೆಗೆ ಸಾಧ್ಯವಿರಲಿಲ್ಲ; ಕಾರಣ ಆಕೆಯು ಅತ್ಯಂತ ತೀಕ್ಷ್ಣವಾದ ಶಬ್ದಗಳಲ್ಲಿ ತನ್ನ ಮನೋಗತವನ್ನು ವ್ಯಕ್ತಪಡಿಸಿದ್ದಾಳೆಂದು ತಿಳಿಯಬೇಕಾಗುತ್ತದೆ.

೨೦. ದಶರಥ < ಕೈಕೇಯಿ, ಭರತ

ಅಯೋಧ್ಯಾಕಾಂಡ/೪೨

ವನವಾಸಕ್ಕೆ ತೆರಳಿದ ಶ್ರೀರಾಮನ ರಥದ ಧೂಳಿಯು ದೃಷ್ಟಿಪಥದಲ್ಲಿರುವವರೆಗೂ ದಶರಥರಾಜನು ಅದರತ್ತ ನೆಟ್ಟದಿಟ್ಟಿಯುಳ್ಳವನಾಗಿ ನಿಂತಿದ್ದನು. ನಂತರ ಖಿನ್ನನಾಗಿ ನೆಲಕ್ಕೆ ಉರುಳಿದನು. ಕೌಸಲ್ಯೆಯು ಆತನನ್ನು ಎಬ್ಬಿಸಿ ಬಲತೋಳನ್ನು ಹಿಡಿದುಕೊಂಡು ನಗರದತ್ತ ಮರಳಿದಳು. ಆಗ ಕೈಕೇಯಿಯು ದಶರಥನ ಎಡದಲ್ಲಿದ್ದಳು.
ಕ್ಷುಬ್ಧಮನಸ್ಸಿನಿಂದ ದಶರಥನು ಕೈಕೇಯಿಗೆ ಈ ರೀತಿ ಎಂದನು:


           ಕೈಕೇಯಿ ಮಾಮಕಾಂಗಾನಿ ಮಾ ಸ್ಪ್ರಾಕ್ಷೀಃ ಪಾಪನಿಶ್ಚಯೇ |
           ನ ಹಿ ತ್ವಾಂ ದ್ರುಷ್ಟುಮಿಚ್ಛಾಮಿ ನ ಭಾರ್ಯಾ ನ ಚ ಬಾಂಧವೀ ‖೬‖
           ಯೇ ಚ ತ್ವಾಮನುಜೀವಂತಿ ನಾಹಂ ತೇಷಾಂ ನ ತೇ ಮಮ |
           ಕೇವಲಾರ್ಥಪರಾಂ ಹಿ ತ್ವಾಂ ತ್ಯಕ್ತಧರ್ಮಾಂ ತ್ಯಜಾಮ್ಯಹಮ್ ‖೭‖
           ಅಗೃಹ್ಣಾಂ ಯಶ್ಚ ತೇ ಪಾಣೆಮಗ್ನಿಂ ಪರ್ಯಣಯಂ ಚ ಯತ್ |
           ಅನುಜಾನಾಮಿ ತತ್ಸರ್ವಮಸ್ಮಿಲ್ಲೋಕೇ ಪರತ್ರ ಚ ‖೮‖
           ಭರತಶ್ಚೇತ್ಪ್ರತೀತಃ ಸ್ಯಾದ್ರಾಜ್ಯಂ ಪ್ರಾಪ್ಯೇತದವ್ಯಯಮ್ |
           ಯನ್ಮೇ ಸ ದದ್ಯಾತ್ಪಿತ್ರರ್ಥಂ ಮಾ ಮಾಂ ತದ್ ದತ್ತಮಾಗಮತ್ ‖೯‖