ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೬೧


ಕುಬೇರನನ್ನು ಜಯಿಸಿದ ನಂತರ ರಾವಣನು ಕುಬೇರನ ಪುಷ್ಪಕ ವಿಮಾನದಲ್ಲಿ ಸಂಚರಿಸುತ್ತ ಒಂದು ಪರ್ವತದ ಮೇಲೆ ಬಂದು ಇಳಿದನು. ಇಷ್ಟದಂತೆ ಸಂಚರಿಸುವ ಆ ವಿಮಾನವು ಆ ಪರ್ವತದ ಮೇಲೆ ಬಂದು ನಿಂತು ಬಿಟ್ಟಿತು. ಕುಬೇರನೊಡನಿದ್ದ ವಿಮಾನದ ಸಂಬಂಧವು ಕಡಿದುಹೋಗಿದ್ದರಿಂದ ಹೀಗಾಗಿರಬಹುದೆಂದು ಮಾರೀಚನಿಗೆ ಅನಿಸಿತು. ಅದೇ ಸಮಯದಲ್ಲಿ ಕಪ್ಪು ಮತ್ತು ಕಂದುಬಣ್ಣದಿಂದ ಕೂಡಿದ, ದೃಢಕಾಯ, ಕುಳ್ಳ, ಮುಂಡಿಸಿದ ತಲೆಯುಳ್ಳ, ಚೋಟುಬಾಹುಗಳಿದ್ದ, ಪ್ರಚಂಡ ಹಾಗೂ ಭಯಂಕರನೆನಿಸುವ ಶಂಕರನ ಸೇವಕನಾದ ನಂದೀಶ್ವರನು ವಾನರರೂಪವನ್ನು ಧರಿಸಿ ರಾವಣನ ಮುಂದೆ ನಿಂತು, ಮುಂದೆ ಹೋಗಲು ಅಡ್ಡಿ ಮಾಡಿದನು. 'ಪರ್ವತದ ಮೇಲೆ ಶಂಕರನ ಕ್ರೀಡೆ ನಡೆಯುತ್ತಿರಲು ಅಲ್ಲಿ ಯಾರಿಗೂ ಪ್ರವೇಶವಿಲ್ಲ!' ಎಂದು ಹೇಳಿದನು. 'ಈ ಶಂಕರನು ಯಾರು?' ಎಂದು ರಾವಣನು ಉದ್ಧಟನಾಗಿ ಕೇಳಿದನು. ಕೈಯಲ್ಲಿ ಝಳಪಿಸುವ ತ್ರಿಶೂಲವಿದ್ದ ನಂದಿಯು ಪ್ರತಿಶಂಕರನಂತೆ ವಿರಾಜಿಸುತ್ತಿದ್ದನು. ರಾವಣನ ಉದ್ಧಟತನವನ್ನು ಸಹಿಸದೇ ಆತನು ಕ್ರುದ್ಧನಾದನು. ಆ ರಾಕ್ಷಸನಿಗೆ ಈ ರೀತಿ ಅಂದನು-


            ಯಸ್ಮಾದ್ವಾನರರೂಪಂ ಮಾಮವಜ್ಞಾಯ ದಶಾನನ |
            ಅಶನೀಪಾತಸಂಕಾಶಮಪಹಾಸಂ ಪ್ರಯುಕ್ತವನ್ ‖೧೬‖
            ತಸ್ಮಾನ್ಮದ್ವೀರ್ಯಸಂಯುಕ್ತಾ ಮದ್ರೂಪಸಮತೇಜಸಃ |
            ಉತ್ಪತ್ಸ್ಯಂತಿ ವರ್ಧಾರ್ಥಂ ಹಿ ಕುಲಸ್ಯ ತವ ವಾನರಾಃ ‖೧೭‖
            ನಖದಂಷ್ಟ್ರಾಯುಧಾಃ ಕ್ರೂರಾ ಮನಃಸಂಪಾತರಂಹಸಃ |
            ಯುರ್ದಧೋನ್ಮತ್ತಾ ಬಲೋದ್ರಿಕ್ತಾಃ ಶೈಲಾ ಇವ ವಿಸರ್ಪಿಣಃ ‖೧೮‖
            ತೇ ತವ ಪ್ರಬಲಂ ದರ್ಪಮುತ್ಸೇಧಂ ಚ ಪೃಥಗ್ವಿಧಮ್ |
            ವ್ಯಪನೇಷ್ಯಂತಿ ಸಂಭೂಯ ಸಹಾಮಾತ್ಯಸುತಸ್ಯ ಚ ‖೧೯‖
            ಕಿಂ ತ್ವಿದಾನೀಂ ಮಯಾ ಶಕ್ಯಂ ಹಂತುಂ ತ್ವಾಂ ಹೇ ನಿಶಾಚರ |
            ನ ಹಂತವ್ಯೋ ಹತಸ್ತ್ವಂ ಹಿ ಪೂರ್ವಮೇವ ಸ್ವಕರ್ಮಭಿಃ ‖೨೦‖


"ಎಲೈ ದಶಾನನನೇ, ವಾನರರೂಪವನ್ನು ಧರಿಸಿದ ನನ್ನ ಅವಜ್ಞೆ ಮಾಡಿ ಸಿಡಿಲಿನಂತೆ ಆರ್ಭಟಿಸಿ ಅವಮರ್ಯಾದೆಯಾಗಿ ನಕ್ಕಿರುವೆ; ಆದ್ದರಿಂದ ನನ್ನ ವೀರ್ಯವನ್ನು ಹೊಂದಿದ, ನನ್ನ ಹಾಗೆ ಪ್ರಭೆಯುಳ್ಳ, ರೂಪವಂತ ವಾನರರು ನಿನ್ನ ಕುಲದ ಸಂಹಾರಕ್ಕಾಗಿ ಹುಟ್ಟುವರು. ಎಲೈ ಕ್ರೂರನೇ, ತಮ್ಮ ಉಗುರುಗಳನ್ನು