ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೬೫


ಕೊಡುವದನ್ನು ತಡೆದಳು ಎಂಬುದು ಸ್ಪಷ್ಟವಿದೆ. ಹೀಗಿದ್ದರೂ ಯುದ್ಧಕಾಂಡದಲ್ಲಿಯ ಉಲ್ಲೇಖದಂತೆ ವೇದವತಿಯ ಶಾಪದ ಸ್ಮರಣೆಯು ರಾವಣನಿಗಾಗಿದೆ. ಆತನು ಅದಕ್ಕೆ ಶಾಪವೆಂದಿದ್ದಾನೆ; ಆದ್ದರಿಂದ ವೇದತಿಯ ಉದ್ಗಾರಗಳು ಶಾಪ-ಸಮವಿದ್ದರೂ ಅವುಗಳನ್ನು ಶಾಪವಾಣಿ ಎಂದು ಗೃಹಿಸಬೇಕೆ? ಇದನ್ನು ನಿರ್ಧರಿಸುವದು ಕಠಿಣವಿದೆ. ಅವಳ ಉದ್ಗಾರದಲ್ಲಿಯ ಉತ್ತರಾರ್ಧವು ಮಾತ್ರ ಪೂರ್ಣವಾಗಿ ಸತ್ಯಕ್ರಿಯೆಯಾಗಿದೆ.
ವೇದವತಿಯಂತೆ, ಉಮಾ, ನಂದಿಕೇಶ್ವರ, ರಂಭಾ ಮತ್ತು ವರುಣಕನ್ಯೆಯರ ಉದ್ಗಾರಗಳ ಸ್ಮರಣ ರಾವಣನಿಗಾಯಿತು.

೪೪. ಅನರಣ್ಯ < ರಾವಣ

ಉತ್ತರಕಾಂಡ/೧೯

ಅನರಣ್ಯನು ರಾವಣನಿಗೆ ಕೊಟ್ಟ ಶಾಪದ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಾನೆ:
'ಮರುತ್ತ' ರಾಜನನ್ನು ಜಯಿಸಿದ ನಂತರ ರಾವಣನು, "ನನ್ನೊಡನೆ ಯುದ್ಧ ಮಾಡಿರಿ; ಇಲ್ಲವೇ ಪರಾಜಯವನ್ನು ಒಪ್ಪಿಕೊಳ್ಳಿರಿ!" ಎಂದು ಆಹ್ವಾನಿಸುತ್ತ ಅನೇಕ ಪಟ್ಟಣಗಳತ್ತ ಹೋದನು. ದುಷ್ಯಂತ, ಸುರಥ, ಗಾಧಿ, ಗಯ ಮೊದಲಾದ ರಾಜರು ತಮ್ಮ ಮತ್ತು ರಾವಣನ ಬಲಾಬಲಗಳನ್ನು ಅರಿತು ತಮ್ಮ ಪರಾಭವವನ್ನು ಒಪ್ಪಿಕೊಂಡರು. ಆ ಸಮಯದಲ್ಲಿ ಅಯೋಧ್ಯೆಯಲ್ಲಿ ಇಕ್ಷ್ವಾಕುಕುಲೋತ್ಪನ್ನನಾದ 'ಅನರಣ್ಯ' ರಾಜನು ಆಳುತ್ತಿದ್ದನು. ರಾವಣನು ಯುದ್ದಕ್ಕೆ ಆಹ್ವಾನಿಸಿದಾಗ ಆತನು ಅದನ್ನು ಸ್ವೀಕರಿಸಿದನು. ಕಾಳಗದಲ್ಲಿ ಅನರಣ್ಯನು ರಾವಣನ ಮೇಲೆ ಬಾಣಗಳ ಮಳೆಗರೆದನು; ಆದರೆ ಇದರಿಂದ ರಾವಣನಿಗೆ ಕೊಂಚವೂ ಅಪಾಯ ಆಗಲಿಲ್ಲ; ಅದರ ಬದಲು ರಾವಣನ ಹಸ್ತಪ್ರಹಾರದಿಂದ ಅನರಣ್ಯನು ರಥದಿಂದ ನೆಗೆದು ಭೂಮಿಗೆ ಬಿದ್ದನು. ಆಗ ರಾವಣನು ಅಪಹಾಸದಿಂದ "ನನ್ನೊಡನೆ ದ್ವಂದ್ವಕ್ಕೆ ನಿಲ್ಲುವವರು ಈ ತ್ರಿಲೋಕಗಳಲ್ಲಿ ಯಾರೂ ಇಲ್ಲ; ವಿಷಯಲೋಲುಪನಾಗಿದ್ದ ನೀನು ನನ್ನ ಬಲದ, ಸಾಮರ್ಥ್ಯದ ಸಂಗತಿಯನ್ನು ಕೇಳಿಲ್ಲವೆಂದು ತೋರುತ್ತದೆ" ಎಂದನು. ಆಗ ಮುಮುರ್ಷೂ ಅನರಣ್ಯನು- "ಆತ್ಮಪ್ರಶಂಸೆಯನ್ನು ಮಾಡಿ ಕೊಳ್ಳುವಂಥ ನಿನ್ನಿಂದ ನನಗೆ ಮೃತ್ಯು ಬಾರದೇ ಸಾಕ್ಷಾತ್ ಕಾಲನೇ ನನ್ನನ್ನಾ ವರಿಸಿದ್ದಾನೆ. ನೀನು ಕೇವಲ ನಿಮಿತ್ತಮಾತ್ರನಾಗಿರುವೆ. ನಾನು ಯುದ್ಧದಿಂದ ಕಾಲುತೆಗೆದಿಲ್ಲ; ಯುದ್ಧಕಾಲದಲ್ಲಿಯೇ ನೀನು ನನ್ನನ್ನು ವಧಿಸುತ್ತಿರುವೆ. ನಿನ್ನ