ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾಗ, ಕೈಕೇಯಿ ಅತಿಕರ, ಭಯಂಕರ ಶಬ್ದಗಳಿಂದ ಈ ರೀತಿ ಅಂದಳು: ಯದಿ ದತ್ತಾ ವ ರಾಜನ್ನುನಃ ಪ್ರತ್ಯನುತಪ್ಸೇ | ಧಾರ್ಮಿಖತ್ವಂ ಕಥಂ ವೀರ ಪೃಥ್ವಿವ್ಯಾಂ ಕಥಯಿಷ್ಯಸಿ ॥೩೯॥ “ಹೇ ರಾಜನೆ, ವರವನ್ನು ಕೊಟ್ಟಾದನಂತರ ಪುನಃ ಈಗ ಪಶ್ಚಾತ್ತಾಪ ಪಡುತ್ತಿರುವೆ; ಹೀಗಾದರೆ, ನಿನ್ನ ಧಾರ್ಮಿಕತೆಯನ್ನು ಈ ಪೃಥ್ವಿಯಲ್ಲಿಯ ಜನರು ಪ್ರಶಂಸಿಸುವದೆಂತು? ಯಾರ ಕೃಪೆಯಿಂದ ನೀನು ಬದುಕಿ ಉಳಿದಿರುವೆಯೋ, ಯಾರು ನಿನ್ನನ್ನು ಕಾಪಾಡಿದರೋ, ಅವಳಿಗೆ ಕೊಟ್ಟ ವಚನಗಳನ್ನು ಮುರಿಯುವಿಯಾ? ಯೋ ದತ್ವಾ ವರಮವ ಪುನರನ್ಯಾನಿ ಭಾಷಸೇ |೪೨ “ವರಗಳನ್ನು ಕೊಟ್ಟಾದನಂತರ ನೀನು ವಿಪರೀತವಾಗಿ ನುಡಿಯುತ್ತಿರು ವುದರಿಂದ ನಿನ್ನ ಕುಲದಲ್ಲಿಯ ರಾಜರ ಹೆಸರಿಗೆ ಕಲಂಕವನ್ನು ತರುತ್ತಿರುವೆ” ನನ್ನ ಮಾತನ್ನು ಸಮರ್ಥಿಸಲು ಅವಳು 'ಅಲರ್ಕ' ಮತ್ತು 'ಶೈಬ್ಯ' ರಾಜರ ಉದಾಹರಣೆಗಳನ್ನು ಕೊಟ್ಟು ಅವರು ತಮ್ಮ ಮಾತಿಗೆ ಹೇಗೆ ತಪ್ಪಲಿಲ್ಲವೆಂಬುದನ್ನು ದಶರಥನಿಗೆ ತಿಳಿಸಿ ಹೇಳಿದಳು. ದಶರಥರಾಜನು ದೀನವಕುಲ ಸ್ವರದಲ್ಲಿ ಅವಳಿಗೆ- “ಹಿತಕರವೆಂದು ತೋರುವ ಈ ಅನರ್ಥವನ್ನು ನಿನಗೆ ಯಾರು ಉಪದೇಶಿಸಿದರು? ಪಿಶಾಚಿಯು ಕರುಳನ್ನು ಕಿವುಚುವಂತಹ ಈ ನಿನ್ನ ಮಾತುಗಳನ್ನು ನನ್ನ ಮುಮದೆ ನುಡಿಯಲು ನಿನಗೆ ನಾಚಿಕೆಯೆನಿಸಬಾರದಿತ್ತೇ? ನಿನ್ನ ಈ ವರ್ತನೆಯಲ್ಲಿ ನನಗೆ ವಿಪರೀತ ವೆಂದೆನಿಸುತ್ತದೆ” ಎಂದನು. ಕುತೋ ವಾ ತೇ ಭಯಂ ಜಾತಂ ಯಾ ತ್ವಮೇವು ವಿಧಂ ವರಮ್ ||೫೮॥ ರಾಷ್ಟೇ ಭರತಮಾಸೀನಂ ವೃಣೇಷೇ ರಾಘವಂ ವನೇ | ವಿರಮ್ಯತೇನ ಭಾವೇನ ತ್ವಮೇತನಾನೃತೇನ ಚ 11೫೯ “ಭರತನಿಗೆ ರಾಜ್ಯವನ್ನು ಕೊಟ್ಟು ರಾಮನನ್ನು ವನವಾಸಕ್ಕಟ್ಟುವ ವರವನ್ನು ನೀನು ಬೇಡಿಕೊಳ್ಳಲು, ನಿನಗೆ ಯಾವ ಭಯವು ಎಲ್ಲಿಂದ ತೋರಿತು? ಪತಿಯ ಬಗ್ಗೆ, ಭರತನ ಬಗ್ಗೆ ಮತ್ತು ಜನರ ಬಗ್ಗೆ ಪ್ರೀತಿವಿಶ್ವಾಸಗಳನ್ನಿಟ್ಟುಕೊಳ್ಳುವದು