ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಕರ್ತವ್ಯವೆಂದೆನಿಸುತ್ತಿದ್ದರೆ ನೀನು ಈ ಅನೃತಮಾರ್ಗವನ್ನು ಬಿಟ್ಟುಬಿಡು” ಎಂದು ದಶರಥನು ನುಡಿದನು. ಅಯೋಧ್ಯಾಕಾಂಡ/೧೩ ರಾಮನಿಂದ ಭರತನಿಗೆ ಭಯವುಂಟಾಗಬಹುದೆಂಬ ಹೆದರಿಕೆಯಿಂದ, ಜನಾಪವಾದಕ್ಕೆ ಬೆದರದ ಕೈಕೇಐಇ ಬಹಳೇ ಶೋಕಾಕುಲನಾಗಿದ್ದ ದಶರಥನಿಗೆ ಈ ರೀತಿ ನುಡಿದಳು: ತ್ವಂ ಕತ್ಸೇ ಮಹಾರಾಜ ಸತ್ಯವಾದೀ ದೃಢವೃತಃ | ಮಮ ಚೇದಂ ವರಂ ಕಸ್ಸಾದ್ವಿಧಾರಯಿತುಮಿಚ್ಚಸಿ |೩|| “ಮಹಾರಾಜನೇ, ಸತ್ಯವಾದಿಯೆಂದು ಮತ್ತು ಸ್ವೀಕರಿಸಿದ ವ್ರತವನ್ನು ನಿಷ್ಠೆಯಿಂದ ಪಾಲಿಸುವವನೆಂದು ನಿನ್ನ ಖ್ಯಾತಿಯಿದೆ. ಹೀಗಿರುವಾಗ ಈ ವರವನ್ನು ಋಣವಾಗಿ ಏಕೆ ನಿನ್ನ ಹತ್ತಿರ ಇಟ್ಟುಕೊಳ್ಳುವ ಇಚ್ಛೆಯನ್ನು ಹೊಂದಿರುವೆ?” - ಅಯೋಧ್ಯಾಕಾಂಡ/೧೪ ಪುತ್ರಶೋಕದಿಂದ ವ್ಯಾಕುಲನಾಗಿ ಚಡಪಡಿಸುತ್ತಿದ್ದ ದಶರಥನಿಗೆ ಕೈಕೇಯಿಯು ಇಂತೆಂದಳು- ಪಾಪ ಕೃತ್ಯೇವ ಕಿಮಿದಂ ಮಮ ಸುತೃತ್ಯ ಸುಶ್ರವಮ್ ೨೨॥ “ನನಗೆ ವರವನ್ನೀಯುವ ಪ್ರತಿಜ್ಞೆಯನ್ನು ಮಾಡಿ ನೀನು ಏಕೆ ಪಾಪ ಮಾಡಿದಂತೆ ಶೋಕಭೂತನಾಗಿ ಭೂಮಿಯ ಮೇಲೆ ಬಿದ್ದಿರುವೆ? ಸತ್ಯಪಾಲನೆ ಯನ್ನು ಆಚರಿಸುವ ಸಜ್ಜನರಂತೆ ನೀನು ವರ್ತಿಸುವದು ಯೋಗ್ಯ; ಧರ್ಮಪಾಲನೆ ಗಾಗಿಯೇ ರಾಮನನ್ನು ವನವಾಸಕ್ಕೆ ಕಳಿಸೆಂದು ನಾನು ಹೇಳುತ್ತಿದ್ದೇನೆ. ನನ್ನ ಈ ಶರತ್ತನ್ನು ನೀನು ಪಾಲಿಸಲಾರೆಯಾದರೆ, ನಿನ್ನಿಂದ ಉಪೇಕ್ಷಿತಳಾದ ನಾನು ನಿನ್ನೆದುರಿನಲ್ಲಿ ಪ್ರಾಣತ್ಯಾಗವನ್ನು ಮಾಡುವೆ?” ಅಯೋಧ್ಯಾಕಾಂಡ/೧೮ ರಾಮನು ಕೈಕೇಯಿಯ ನಿವಾಸಕ್ಕೆ ಹೋದಾಗ, ಅಲ್ಲಿ ಅತಿದುಃಖಿತನಾದ ದಶರಥ ರಾಜನನ್ನು ಕಂಡನು. ದಶರಥನ ಮುಖವು ಕಳಹೀನವಾಗಿತ್ತು. ರಾಮನು