ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


“ಎಲೈ ಅಹಿತಕಾರಕ ಸ್ತ್ರೀಯೆ, ನನ್ನ ಕತ್ತಿನ ಮೆಲೆ ನೊಗವನ್ನಿಟ್ಟಿರುವೆ;
ಇನ್ನು ಏಕೆ ನನ್ನನು ಛಲಿಸುತ್ತಿರುವೆ? ಹೇ ದುಷ್ಟಳೇ, ನೀನು ಈಗ ನಡೆಯಿಸಿರುವ
ಕಾಯಕದ ಬಗ್ಗೆ ಮೊದಲೇ ಏಕೆ ನನಗೆ ಹೇಳಲಿಲ್ಲ?”
ಸಂಸ್ಕೃತ ಶ್ಲೋಕದಲ್ಲಿ 'ವರ' ಈ ಶಬ್ದವು ಸ್ಪಷ್ಟವಾಗಿಲ್ಲ; ಆದರೆ ಅನುವಾದದಲ್ಲಿ,
ಕಂಸಚಿಹ್ನೆಯಲ್ಲಿ ಈ ಕೆಳಗೆ ಕೊಟ್ಟ ವಿವರಣೆಯಲ್ಲಿ 'ವರ' ಎಂಬ ಶಬ್ದದ
ಉಲ್ಲೇಖವು ಸ್ಪಷ್ಟವಾಗಿದೆ.
["ಭೋಗವಸ್ತುಗಳನ್ನು ತೆಗೆದುಕೊಂಡು ರಾಮನು ವನವಾಸಕ್ಕೆ
ಹೋಗಕೂಡದು! ಎಂದು ನೀನು ಈಗ ಹೇಳುತ್ತಲಿರುವೆ. ಇದನ್ನು ನೀನು
ವರಗಳನ್ನು ಬೇಡಿಕೊಳ್ಳುವ ಕಾಲದಲ್ಲಿಯೇ ಹೇಳಬೇಕಿತ್ತು; ಆಗ ಬೇಡಿಕೊಂಡಿರದ
ಕಾರಣ ನಾನು ನಿನಗೆ ಅದನ್ನು ಕೊಟ್ಟಿಲ್ಲ. ಹೀಗಿರುವದರಿಂದ ರಾಮನು ಭೋಗ
ವಸ್ತುಗಳನ್ನು ಜೊತೆಗೆ ಕೊಂಡೊಯ್ಯಬಾರದೆಂದು ಹೇಳುವ ಅಧಿಕಾರವು ನಿನಗೆ
ಈಗ ಇಲ್ಲ.”]

ಅಯೋಧ್ಯಾಕಾಂಡ/೫೯

ರಾಮನು ವನಕ್ಕೆ ಹೋದ ವೃತ್ತಾಂತವನ್ನು ಸುಮಂತ್ರನಿಂದ ಕೇಳಿಕೊಂಡ
ನಂತರ ದಶರಥರಾಜನು ಅತ್ಯಂತ ಶೋಕಾಕುಲನಾದನು. ಶೋಕಮಗ್ನನಾಗಿ
ಕೌಸಲ್ಯೆಗೆ ಹೀಗೆ ನುಡಿದನು- “ಈ ನನ್ನ ದುಃಖವು ಕಡಲಿನಷ್ಟಿದೆ. ಇದರಲ್ಲಿ
ರಾಮನ ಅಗಲುವಿಕೆಯು ಒಂದು ಪ್ರಚಂಡ ಶೋಕಾವೇಗವಾಗಿದೆ. ಸೀತೆಯ
ದೂರವಿರುವಿಕೆಯು ಇದರ ದೂರದ ದಡದಂತಿದೆ. ದುಃಖದ ನಿಟ್ಟುಸುರಿನ
ಅಲೆಗಳೇ ರಭಸದಿಂದ ಸುತ್ತುತ್ತಿರುವ ತಿರುಗಣಿ ಮಡುಗಳಾಗಿವೆ. ಧಾರಾಕಾರ
ಕಂಬನಿಯ ಪ್ರವಾಹದಿಂದ ಈ ಸಾಗರವು ಕಲುಷಿತವಾಗಿದೆ. ದುಃಖಾತಿರೇಕದಿಂದ
ನಡೆಯುವ ಹಸ್ತಗಳ ಚಲನವಲನಗಳೇ ಇಲ್ಲಿ ಮೀನುಗಳಂತಿವೆ. ನನ್ನ ಆಕ್ರೋಶವೇ
ಈ ಕಡಲಿನ ಭೋರ್ಗರೆಯುವಿಕೆ; ಕೆದರಿದ ತಲೆಗೂದಲೇ ಇಲ್ಲಿ ಹಾವಾಸೆಯಾಗಿದೆ.
ಈ ದಾರುಣ ದುಃಖಸಾಗರದಲ್ಲಿ ಕೈಕೇಯಿಯು ಒಡಲಾಗ್ನಿಯಂತಿದ್ದಾಳೆ.
ಮಮಾಶ್ರುವೇಗಪ್ರಭವಃ ಕುಬ್ಜಾವಾಕ್ಯಮಹಾಗ್ರಹಃ |
ವರವೇಲೋ ನೃಶಂಸಾಯಾ ರಾಮಪ್ರವ್ರಾಜನಾಯತಃ ‖೩೧‖

“ನನ್ನ ಕಂಬನಿಯ ಉಗಮವಾದ ಈ ಸಾಗರದಲ್ಲಿ ಗೂನಿಯಾದ
ಮಂಥರೆಯ ಮಾತುಗಳೇ ಭೀಕರ ಮೊಸಳೆಗಳಾಗಿವೆ. ಕೈಕೇಯಿಗೆ ಕೊಟ್ಟ