ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೨೧


ಆತನು ಭರತನಿಗೆ- “ನೀನು ತಕ್ಕದ್ದನ್ನೇ ನುಡಿದೆ; ದಶರಥರಾಜನಿಂದ ನೀನು
ಕೈಕೇಯಿಯ ಉದರದಿಂದ ಜನಿಸಿರುವೆ; ನಮ್ಮ ತಂದೆಯು ನಿನ್ನ ತಾಯಿಯ
ಪ್ರಾಣಿಗ್ರಹಣ ಮಾಡಿದಾವ ಇವಳಿಂದ ಹುಟ್ಟಿದ ಮಗನಿಗೆ ರಾಜ್ಯವನ್ನು
ಕೊಡುವೆನೆಂದು ನಿಮ್ಮ ಅಜ್ಜನೆದುರು ಪ್ರತಿಜ್ಞೆ ಮಾಡಿದ್ದನು. ಕನ್ಯೆಯ ಬದಲು
ರಾಜ್ಯರೂಪದ ಸಂಪತ್ತನ್ನು ನಿನಗೆ ಕೊಡುವುದಾಗಿ ನಿನ್ನ ಅಜ್ಜನಿಗೆ ವಚನ
ಕೊಟ್ಟಿದ್ದನು. ಅನಂತರ ಪ್ರಾಣಿಗ್ರಹಣ ನಡೆಯಿತು.
ದೇವಾಸುರೇ ಚ ಸಂಗ್ರಾಮೇ ಜನನ್ಯೈ ತವ ಪಾರ್ಥಿವಃ |
ಸಂಪ್ರಹೃಷ್ಟೋ ದದೌ ರಾಜಾ ವರಮಾರಾಧಿತಃ ಪ್ರಭುಃ ‖೪‖
ತತಃ ಸಾ ಸಂಪ್ರತಿಶ್ರಾವ್ಯ ತವ ಮಾತಾ ಯಶಸ್ವಿನೀ |
ಅಯಾಚತ ನರಶ್ರೇಷ್ಠಂ ದ್ವೌ ವರೌ ವರವರ್ಣಿನೀ ‖೫‖
ತವ ರಾಜ್ಯಂ ನರವ್ಯಾಘ್ರ ಮಮ ಪ್ರವ್ರಾಜನಂ ತಥಾ |
ತಚ್ಚ ರಾಜಾ ತಥಾ ತಸ್ಯೆ ನಿಯುಕ್ತಃ ಪ್ರದದ ವರಮ್ ‖೬‖
ತೇನ ಪಿತ್ರಾ ಹಮಪ್ಯತ್ರ ನಿಯುಕ್ತಃ ಪುರುಷರ್ಷಭ |
ಚತುರ್ದಶ ವನೇ ವಾಸಂ ವರ್ಷಾಣಿ ವರದಾನಿಕಮ್ ‖೭‖

“ಸುರಾಸುರರ ಸಂಗ್ರಾಮದಲ್ಲಿ ನಿನ್ನ ತಾಯಿಯು ಪೃಥ್ವೀಪತಿಯಾದ ರಾಜನ
ಸೇವೆಯನ್ನು ಮಾಡಿದುದಕ್ಕಾಗಿ ಆತನು ಸಂತೋಷಗೊಂಡು ನಿನ್ನ ತಾಯಿಗೆ
ಎರಡು ವರಗಳನ್ನು ಕೊಡಲು ಸಿದ್ಧನಾದನು. ಆಗ ಎರಡು ವರಗಳನ್ನು ಕೊಡುವ
ಪ್ರತಿಜ್ಞೆಯನ್ನು ಅವನಿಂದ ಮಾಡಿಸಿ, ಸ್ತ್ರೀಯರಲ್ಲಿ ಶ್ರೇಷ್ಠಳೆನಿಸಿದ ಯಶಸ್ವಿನಿಯಾದ
ನಿನ್ನ ಮಾತೆಯು ನಿನಗೆ ರಾಜ್ಯವನ್ನೂ, ನನಗೆ ವನವಾಸವನ್ನೂ ಈ ಎರಡು
ವರಗಳಿಂದ ಪಡೆದುಕೊಂಡಳು. ವಚನಬದ್ಧವಾದ ರಾಜನು ಈ ವರಗಳನ್ನು
ಕೊಟ್ಟನು; ಅದರ ಕಾರಣಗಳಿಂದ ನಾನು ಹದಿನಾಲ್ಕು ವರ್ಷ
ವನವಾಸದಲ್ಲಿರಬೇಕೆಂದು ಆಜ್ಞಾಪಿಸಿದನು.
ಸತ್ಯವಚನವನ್ನು ಪಾಲಿಸುವ ದರ್ಮಜ್ಞನಾದ ರಾಜನ ಆಜ್ಞೆಯನ್ನು ನಾನು
ಪಾಲಿಸಲೇ ಬೇಕು! ಅದೇ ರೀತಿ ನೀನು ರಾಜ್ಯವನ್ನಾಳಬೇಕೆಂದು ಪಿತನ
ಆಜ್ಞೆಯಿರುವದರಿಂದ ನೀನು ರಾಜ್ಯವನ್ನು ಆಳಲೇಬೇಕು!”