ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೨೩


“ಕೈಕೇಯಿಯು ರಾಜನ ಬಳಿ ವರವನ್ನು ಬೇಡಿಕೊಂಡಳು. ಆ ವಚನವನ್ನು
ನಾನು ಒಪ್ಪಿಕೊಂಡಿರುವೆನು. ಹೇ ಭರತನೇ, ನಾನು ಹೇಳಿದಂತೆ ನಡೆಸುಕೊಂಡು
ನೀನು ನಮ್ಮ ತಂದೆಯನ್ನು ಅಸತ್ಯನಾಗದಂತೆ ಮುಕ್ತಗೊಳಿಸು.”

ರಾಮನು ಸೀತೆಗೆ ಹೇಳಿದ ಕಥೆ

ಅಯೋಧ್ಯಾಕಾಂಡ/೨೬

ವನವಾಸಕ್ಕೆ ಹೋಗಲು ಸಿದ್ಧನಾದ ರಾಮನು ಕೌಸಲ್ಯೆಯನ್ನು ವಂದಿಸಿ,
ಸೀತೆಯ ಬಳಿ ಬಂದನು. ಯುವರಾಜ್ಯಾಭಿಷೇಕದ ಸಮಯವು ಸಮೀಪಿಸಿದ್ದರೂ,
ಮುಖದ ಮೇಳೆ ಹಾಸ್ಯದ ಕಳೆಯಿರದ, ಅಧೋಮುಖನಾದ ರಾಮನನ್ನು
ಕಂಡು ಸೀತೆಯು ವಿಸ್ಮಯಗೊಂಡಳು. ಆಗ ರಾಮನು ಸೀತೆಗೆ ಹೀಗೆಂದನು-
“ಎಲೈ ಧರ್ಮಚಾರಿಣಿಯಾದ ಜಾನಕಿಯೇ, ನನ್ನ ಪಿತನು ಯಾವ ಕಾರಣದಿಂದ
ನನ್ನನ್ನು ವನವಾಸಕ್ಕೆ ಕಳುಹುತ್ತಿದ್ದಾನೆಂಬುದನ್ನು ಕೇಳು!
ರಾಜ್ಞಾ ಸತ್ಯಪ್ರತಿಜ್ಞೇನ ಪಿತ್ರಾ ದಶರಥೇನ ವೈ |
ಕೈಕೇಯ್ಯೈ ಮಮ ಮಾತ್ರೇ ತು ಪುರಾ ದತ್ತೌ ಮಹಾವರೌ |‖೨೧‖
ತಯಾದ್ಯ ಮಮ ಸಜ್ಜೇsಸ್ಮಿನ್ನಭಿಷೇಕೇ ನೃಪೋದ್ಯತೇ |
ಪ್ರಚೋದಿತಃ ಸ ಸಮಯೋ ಧರ್ಮೇಣ ಪ್ರತಿನಿರ್ಜಿತಃ ‖೨೨‖
ಚತುರ್ದಶ ಹಿ ವರ್ಷಾಣಿ ವಸ್ತವ್ಯಂ ದಂಡಕೇ ಮಯಾ |
ಪಿತ್ರಾ ಮೇ ಭರತಶ್ಚಾಪಿ ಯೌವರಾಜ್ಯೇ ನಿಯೋಜಿತಃ ‖೨೩‖

“ಸತ್ಯ ಪ್ರತಿಜ್ಞನಾದ ನಮ್ಮ ತಂದೆ ದಶರಥನು ನನ್ನ ತಾಯಿಯಾದ ಕೈಕೇಯಿಗೆ
ಈ ಮೊದಲು ಎರಡು ವರಗಳನ್ನು ಕೊಟ್ಟಿದ್ದನು. ರಾಜನ ಉಪಕ್ರಮದಂತೆ ಇಂದು
ನನಗೆ ಅಭಿಷೇಕವಾಗುವದನ್ನು ನಿಶ್ಚಯಿಸಿದನಂತರ ಕೈಕೇಯಿಯು ಮೊದಲಿನ ಸಂಕೇತ
ವನ್ನು ಮುಂದಿಟ್ಟು ಧರ್ಮಬಂಧನದಿಂದ ರಾಜನನ್ನು ವಶ ಮಾಡಿಕೊಂಡಳು;
ಆದ್ದರಿಂದ ನಾನು ಹದಿನಾಲ್ಕು ವರ್ಷ ದಂಡಕಾರಣ್ಯದಲ್ಲಿ ವಾಸವಿರಬೇಕು; ಮತ್ತು
ಭರತನಿಗೆ ಯುವರಾಜ್ಯಾಭಿಷೇಕವನ್ನು ಮಾಡಬೇಕು! ಎಂದು ನಿಶ್ಚಯಿಸಿಯಾಗಿದೆ.
“ಪಿತನ ಆಜ್ಞೆಯನ್ನು ಸತ್ಯಗೊಳಿಸಲು ನಾನು ಇಂದು ಅರಣ್ಯಕ್ಕೆ
ಹೋಗುತ್ತಿದ್ದೇನೆ. ಈ ಸಮಾಚಾರವನ್ನು ನಿನಗೆ ತಿಳಿಸಲೋಸುಗ ಬಂದಿದ್ದೇನೆ.”
ತಾನು ಇಲ್ಲಿ ಇಲ್ಲದಿರುವಾಗ ಅವಳು ಹೇಗೆ ವರ್ತನೆಯನ್ನಿಟ್ಟುಕೊಳ್ಳಬೇಕೆಂದು
ರಾಮನು ಅವಳಿಗೆ ಉಪದೇಶಿಸಿದ್ದಾನೆ.