ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಸುಂದರಕಾಂಡ/೩೩

ಸೀತೆಯ ಭೇಟಿಗೆಂದು ಅಶೋಕವನಕ್ಕೆ ಬಂದ ಹನುಮಂತನ ಬಗ್ಗೆ
ಅವಳಿಗೆ ಸಂದೇಹವುಂಟಾಯಿತು. ಆಗ ಆತನು ತಾನು ರಾಮದೂತನೆಂದು
ಮನವರಿಕೆ ಮಾಡಿಕೊಟ್ಟನು. ಹನುಮಂತನು ವಿಚಾರಿಸಿದ ಕಾರಣ ಸೀತೆಯು
ತನ್ನ ವೃತ್ತಾಂತವನ್ನು ಹೇಳುತ್ತಿದ್ದಾಳೆ: “ನಾನು ದಶರಥಪುತ್ರನಾದ ರಾಮನ
ಪತ್ನಿಯಾಗಿದ್ದೇನೆ. ರಾಮನಿಗೆ ಯುವರಾಜ್ಯಾಭಿಷೇಕದ ಸಿದ್ಧತೆ ನಡೆದಾಗ
ಕೈಕೇಯಿಯು ದಶರಥನಿಗೆ ಈ ರೀತಿ ಎಂದಳು: 'ರಾಮನಿಗೆ ರಾಜ್ಯಾಭಿಷೇಕವಾಗುವು
ದಿದ್ದರೆ ನನಗೆ ಊಟವೂ ಬೇಡ; ಪಾನೀಯವೂ ಬೇಡ!'
ಯತ್ತದುಕ್ತಂ ತ್ವಯಾ ವಾಕ್ಯಂ ಪ್ರೀತ್ಯಾ ನೃಪತಿಸತ್ತಮ |
ತಚ್ಚೇನ್ನ ವಿತಥಂ ಕಾರ್ಯಂ ವನಂ ಗಚ್ಛತು ರಾಘವಃ ‖೨೧‖
ಸ ರಾಜಾ ಸತ್ಯವಾಗ್ದೇವ್ಯಾ ವರದಾನಮನಸ್ಮರನ್ |
ಮುಮೋಹ ವಚನಂ ಶ್ರುತ್ವಾ ಕೈಕೇಯ್ಯಾಃ ಕ್ರೂರಮಪ್ರಿಯಮ್ ‖೨೨‖

“ಆಗ ನೀನು ವರದಾನರೂಪ ಪ್ರಿಯಭಾಷಣವನ್ನು ನನ್ನ ಬಳಿ
ಮಾಡಿರುವೆ; ಆ ಪ್ರಿಯವಚನವು ವ್ಯರ್ಥವಾಗಬಾರದೆಂದಿದ್ದರೆ, ರಾಮನು ವನಕ್ಕೆ
ಹೋಗಲಿ!” ಕೈಕೇಯಿಯ ಈ ಕಠೋರ ಹಾಗೂ ಅಪ್ರಿಯವಾದ ಭಾಷಣವನ್ನು
ಕೇಳಿ, ದಶರಥನಿಗೆ ತಾನು ಆಕೆಗೆ ಕೊಟ್ಟ ವರಗಳ ಸ್ಮರಣೆಯಾಯಿತು. ಆ
ಸತ್ಯವಚನ ರಾಜನು ಮೂರ್ಛೆ ಹೋದನು. ಸೀತೆಯು ಹನುಮಂತನಿಗೆ ಇದನ್ನು
ಹೇಳಿದಳು.

೨. ಬ್ರಹಹ್ಮದೇವ < ವಾಲ್ಮೀಕಿ

ಬಾಲಕಾಂಡ/೨

ಕಾಮಭೋಗಾಸಕ್ತ ಕ್ರೌಂಚ ಪಕ್ಷಿಯ ಜೊತೆಯಲ್ಲಿಯ ಗಂಡುಪಕ್ಷಿಯನ್ನು
ಒಬ್ಬ ನಿಷಾದನು ಕೊಂದುದನ್ನು ಕಂಡು ವಾಲ್ಮೀಕಿ ಋಷಿಯ ಬಾಯಿಯಿಂದ-
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |

ಎಂಬ ಶಾಪವಾಣಿಯು ಹೊರಬಂದಿತು; ಆದರೆ ತಪಸ್ಸನ್ನು ಕೆಡಿಸುವ
ಶಬ್ದಗಳನ್ನು ಉಚ್ಚರಿಸಬಾರದಿತ್ತೆಂದು ಕೊರಗು ಉಂಟಾಯಿತು; ಆದ್ದರಿಂದ