ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ರಾಕ್ಷಸರಿಂದ ಯಜ್ಞದ ಸಮಯಕ್ಕಾಗುವ ಉಪಟಳವನ್ನು ತಡೆಯಲು, ರಾಮನನ್ನು
ತನ್ನ ಜೊತೆಗೆ ಕಳುಹಬೇಕೆಂದು ಕೇಳಿಕೊಂಡನು. ಇದನ್ನು ಕೇಳಿ ದಶರಥರಾಜನಿಗೆ
ದುಃಖವಾಯಿತು. ಅನೇಕ ಪರ್ಯಾಯಗಳನ್ನು ಸೂಚಿಸಿ ರಾಮನನ್ನು ಆತನೊಡನೆ
ಕಳುಹಿಸಲು ಹಿಂದುಮುಂದೆ ನೋಡಹತ್ತಿದನು. ಇದನ್ನು ಗಮನಿಸಿದ ವಿಶ್ವಾಮಿತ್ರನಿಗೆ
ವಿಪರೀತ ಸಿಟ್ಟು ಬಂದಿತು. ಇಕ್ಷ್ವಾಕು ವಂಶದವರಿಗೆ ಪ್ರತಿಜ್ಞೆಯ ಭಂಗವು
ಶೋಭಿಸುವುದಿಲ್ಲವೆಂದು ನುಡಿದು ವಿಶ್ವಾಮಿತ್ರನು ಹೊರಟು ನಿಂತನು. ವಿಶ್ವಾಮಿತ್ರನ
ಕೋಪವು ವಿಪರೀತಕ್ಕೆ ಹೋಗಬಾರದೆಂದು ದಶರಥನು ತನ್ನ ವಚನವನ್ನು
ಪಾಲಿಸಬೇಕೆಂದು, ವಸಿಷ್ಠ ಋಷಿಯು, ದಶರಥನಿಗೆ ಉಪದೇಶಿಸಲು ಈ ರೀತಿ
ನುಡಿದನು- “ದಶರಥನೇ, ಧರ್ಮಾತ್ಮನೆಂದು ನಿನ್ನ ಖ್ಯಾತಿಯು ಮೂರೂ
ಲೋಕದಲ್ಲಿದೆ. ವಿಶ್ವಾಮಿತ್ರನ ವಿನಂತಿಯನುಸಾರ ಆತನ ಯಜ್ಞವನ್ನು ರಕ್ಷಿಸಲು
ನೀನು ರಾಮನನ್ನು ಕಳುಹಿಸಿಕೊಡು! ಕುಶಿಕಪುತ್ರರು ಬೆಂಬಲಕ್ಕಿರುವಾಗ, ರಾಕ್ಷಸರು
ರಾಮನನ್ನು ಮುಟ್ಟುವಂತಿಲ್ಲ. ವಿಶ್ವಾಮಿತ್ರನಂತಹ ತಪಸ್ವಿಗಳು ತ್ರೈಲೋಕದಲ್ಲಿಲ್ಲ.
ಆತನಿಗೆ ಅನೇಕ ವಿದ್ಯೆಗಳು ಜ್ಞಾತವಿವೆ; ಆತನು ಅಸ್ತ್ರಗಳ ಜ್ಞಾನಿಯೂ ಆಗಿದ್ದಾನೆ.
ಆತನದಲ್ಲಿದ್ದಷ್ಟು ಅಸ್ತ್ರವಿದ್ಯೆಯು ಇನ್ಯಾರಿಗೂ ದೊರೆಯುವ ಸಂಭವವಿಲ್ಲ. ಈ
ವಿಶ್ವಾಮಿತ್ರನು ಮೊದಲು ರಾಜ್ಯವನ್ನಾಳುತ್ತಿದ್ದಾಗ ಶಿವನು, ಅತ್ಯಂತ ಧಾರ್ಮಿಕವಾದ
'ಕುಶಾಶ್ವಚಪುತ್ರ'ವೆಂದೆನಿಸುವ ಎಲ್ಲ ಪ್ರಕಾರದ ಅಸ್ತ್ರಗಳನ್ನೂ ಈತನಿಗೆ
ಕರುಣಿಸಿರುವನು.
ಜಯಾ ಚ ಸುಪ್ರಭಾ ಚೈವ ದಕ್ಷಕನ್ಯೇ ಸುಮಧ್ಯಮೇ |
ತೇ ಸೂತೇಸ್ತ್ರಾಣಿ ಶಸ್ತ್ರಾಣಿ ಶತಂ ಪರಮಭಾಸ್ವರಮ್ ‖೧೫‖
ಪಂಚಾಶತಂ ಸುತಾಂಲ್ಲೇಭೆ ಜಯಾ ಲಬ್ದವರಾ ವರಾನ್ |
ವಧಾಯಾಸುರ-ಸೈನ್ಯಾನಾಮಪ್ರಮೇಯಾನರೂಪಿಣಃ ‖೧೬‖
ಸುಪ್ರಭಾಜನಯಚ್ಚಾಪಿ ಪುತ್ರಾನ್ ಪಞ್ಚಾಶತಂ ಪುನಃ |
ಸಂಹಾರಾನ್ನಾಮ ದುರ್ಧರ್ಷಾಂದುರಾಕ್ರಾಮಾನ್ಬಲೀಯಸಃ ‖೧೭‖

ಜಯಾ ಮತ್ತು ಸುಪ್ರಭಾ ಇವರಿಬ್ಬರು ಸೌಂದರ್ಯವತಿಯರಾಗಿದ್ದು,
ದಕ್ಷಪ್ರಜಾಪತಿಯ ಕನ್ಯೆಯರಾಗಿದ್ದರು. ಇವರಿಗೆ ಪುತ್ರರೂಪದಲ್ಲಿ ಅತ್ಯಂತ ತೇಜಸ್ಸುಳ್ಳ
ನೂರು ಅಸ್ತ್ರಗಳು, ಶಸ್ತ್ರಗಳು ದೊರೆತವು. ವರವನ್ನು ಪಡೆದ ಜಯಾ ಇವಳಿಗೆ
ರಾಕ್ಷಸಸೈನ್ಯವನ್ನು ಸಂಹರಿಸಲು 'ಅಚಿಂತ್ಯ' ಮತ್ತು 'ಅದೃಷ್ಟ' ಎಂಬ ಐವತ್ತು ಶ್ರೇಷ್ಠ
ಪುತ್ರರು ಪ್ರಾಪ್ತರಾದರು. ಸುಪ್ರಭಾ ಇವಳಿಗೆ, ಬೇರೆಯವರು ತಾಳಿಕೊಳ್ಳಲಾರದಂಥ