ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೫೯ ಇಂದ್ರನು ಮನ್ನಿಸಿದನು. ಈ ಏಳು ಪುತ್ರರು ಮಾರುತ್‌ರೆಂದು ಖ್ಯಾತಿ ಪಟ್ಟರು. ಇದು ಕಟ್ಟಳೆಯ ಯಾಚಿತ' ವರವಾಗಿದೆ. ೧೫. ಶಂಕರ < ವಿಶ್ವಾಮಿತ್ರ ಬಾಲಕಾಂಡ/೫೫ ವಿಶ್ವಾಮಿತ್ರನಿಗೆ ಯಾವ ರೀತಿಯಲ್ಲಿ ಅಸ್ತ್ರಗಳು ದೊರೆತವೆಂಬ ಬಗ್ಗೆ ಶತಾನಂದನು ರಾಮನಿಗೆ ಹೇಳುತ್ತಿದ್ದಾನೆ. ವಸಿಷ್ಠನ ಕಾಮಧೇನುವನ್ನು ವಿಶ್ವಾಮಿತ್ರನು ಬಲವಂತದಿಂದ ಎಳೆದೊಯ್ದಾಗ ಕಾಮಧೇನುವಿನ 'ಅಂಬಾ; ಎಂಬ ಕರೆಯಿಂದ ಕಾಂಬೋಜ ಹಾಗೂ ಅವಳ ಆವಯವಗಳಿಂದ ಬರ್ಬರ, ಯವನ, ಶಕ ಮತ್ತು ಮೇಚ್ಚ ಹಾರಿತ, ಕಿರಾತ ಮುಂತಾದವರು ಉಂಟಾಗಿ ವಿಶ್ವಾಮಿತ್ರನ ಸೈನ್ಯವೆಲ್ಲವನ್ನೂ ನಾಶಗೊಳಿಸಿದರು. ಆಗ ಕೋಪಗೊಂಡ ವಿಶ್ವಾಮಿತ್ರನ ಪುತ್ರರು ವಸಿಷ್ಠನ ಮೇಲೆ ಏರಿಹೋದರು. ಆಗ ವಸಿಷ್ಠನು ಕೇವಲ ತನ್ನ ಹೂಂಕಾರದಿಂದಲೇ ಅವರನ್ನು ಸುಟ್ಟುಹಾಕಿದನು. ಸೈನ್ಯ ಹಾಗೂ ಮಕ್ಕಳು ನಾಶಗೊಂಡಿದ್ದನ್ನು ನೋಡಿ ವಿಶ್ವಾಮಿತ್ರನು ನಾಚಿಕೆಯಿಂದ ಕಳೆಹೀನನಾದನು. ರಾಜನನ್ನು ತನ್ನ ಒಬ್ಬ ಮಗನಿಗೆ ಒಪ್ಪಿಸಿ ವಿಶ್ವಾಮಿತ್ರನು ತಪಶ್ಚಯೆಗಾಗಿ ವನಕ್ಕೆ ತೆರಳಿದನು. ಶಿವನನ್ನು ಪ್ರಸನ್ನಗೊಳಿಸಲು ಆತನು ಉಗ್ರತಪಸ್ಸನ್ನು ಆಚರಿಸಿದನು. ಪ್ರಸನ್ನನಾದ ಶಂಕರನು ಆತನಿಗೆ ದರ್ಶನವನ್ನು ಕೊಟ್ಟು ಇಂತೆಂದನು- ಕಿಮರ್ಥಂ ತಸ್ಯಸೇ ರಾಜನೂಹಿ ಯತ್ತೇ ವಿವಕ್ಷಿತಮ್ | ವರದೋsಸ್ಮಿ ವರೋ ಯಸ್ತೆ ಕಾಂಕ್ಷಿತಃ ಸೋsಭಿಧೀಯತಾಮ್ ॥೧೪॥ “ಹೇ ರಾಜನೇ, ಏತಕ್ಕಾಗಿ ನೀನು ತಪಸ್ಸನ್ನಾಚರಿಸುತ್ತಿರುವೆ? ನಿನಗೆ ಏನು ಬೇಕಾಗಿದೆ? ನಾನು ವರವನ್ನು ಕೊಡಲು ಸಿದ್ಧನಾಗಿದ್ದೇನೆ. ಇಷ್ಟವಾದಂಥ ವರವನ್ನು ಬೇಡಿಕೊ!” ಯದಿ ತುಷ್ಟೋ ಮಹಾದೇವ ಧನುರ್ವೇದೋ ಮಮಾನಫ್ | ಸಾಂಗೋಪಾಂಗೋಪನಿಷದಃ ಸರಹಸ್ಯ: ಪ್ರದೀಯತಾಮ್ ||೧೬|| ಯಾನಿ ದೇವೇಷು ಚಾಸ್ವಾಣಿ ದಾನವೇಷು ಮಹರ್ಷಿಷು | ಗಂಧರ್ವಯಕ್ಷರಕ್ಷಃಸು ಪ್ರತಿಭಾಂತು ಮಮಾನಘ ೧೭||