ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಅಧ್ಯಾಪನವನ್ನು ಮಾಡುವ ಯಜ್ಞಯಾಗಗಳನ್ನು ನೆರವೇರಿಸುವ ಅಧಿಕಾರವು ನನಗೆ ಪ್ರಾಪ್ತವಾಗಲಿ! ಇದಲ್ಲದೆ, ಧನುರ್ವಿದ್ಯೆಯನ್ನು ಅರಿತವರಲ್ಲಿ ಶ್ರೇಷ್ಠನೆನಿಸಿ ಕೊಂಡ ಬ್ರಹ್ಮಪುತ್ರನಾದ ವಸಿಷ್ಠನು ನನಗೆ 'ಬ್ರಾಹ್ಮಣ'ನೆಂದು ಸಂಬೋಧಿಸಲಿ. ಈ ರೀತಿ ನನ್ನ ಮನೋರಥವು ಸಾರ್ಥಕವಾಗಿದ್ದರೆ, ಸುರಶ್ರೇಷ್ಟರೇ, ನೀವು ನಿಮ್ಮ ಸ್ಥಾನಗಳಿಗೆ ಮರಳಬಹುದು.” ಎಂದು ಕರೆಯಬೇಕೆಂದು ದೇವತೆಗಳು ಸಾಕಷ್ಟು ಪ್ರಯತ್ನಪಟ್ಟರು. ಆಗ ವಸಿಷ್ಠನು, ಅವರ ವಿನಂತಿಯನ್ನು ಮನ್ನಿಸಿ ವಿಶ್ವಾಮಿತ್ರನೊಡನೆ ಮಿತ್ರತ್ವವನ್ನು ಸಂಪಾದಿಸಿದನು. ಬ್ರಹ್ಮರ್ಷಿಸ್ಟಂ ನ ಸಂದೇಹಃ ಸರ್ವಂ ಸಂಪದ್ಯತೇ ತವ ||೨೬|| “ನೀನು ಬ್ರಹ್ಮರ್ಷಿಯಾದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಬ್ರಾಹ್ಮಣತ್ವವನ್ನು ಹೊಂದಲು ಆವಶ್ಯಕವಿದ್ದ ಎಲ್ಲ ಸಂಗತಿಗಳೂ ನಿನಗೆ ಲಬ್ದವಾಗಿವೆ” ಎಂದು ವಿಶ್ವಾಮಿತ್ರನಿಗೆ ಹೇಳಿ ದೇವತೆಗಳು ಸ್ವಸ್ಥಾನಕ್ಕೆ ತೆರಳಿದರು. ಇದು 'ಯಾಚಿತ” ವರವಾಗಿದೆ. ೧೭. ಕೈಕೇಯಿ < ಮಂಥರೆ ಅಯೋಧ್ಯಾಕಾಂಡ/೭ 'ರಾಮನಿಗೆ ಯುವರಾಜ್ಯ ಅಭಿಷೇಕ ನಡೆಯಲಿದೆ' ಎಂಬ ದುಷ್ಟ ವಾರ್ತೆಯನ್ನು ಕೈಕೇಯಿಗೆ ತಿಳಿಸಿ, ಆಕೆಯನ್ನು ಸಕಾಲದಲ್ಲಿ ಎಚ್ಚರಿಸುವ ಪ್ರಯತ್ನವನ್ನು ಮಂಥರೆಯು ಮಾಡಿದಳು. ಅದು ವಿಫಲವಾಯಿತು. ಈ ವಾರ್ತೆಯನ್ನು ಕೇಳಿ ಕೈಕೇಯಿಗೆ ತುಂಬಾ ಸಂತೋಷವಾಯಿತು. ಕೈಕೇಯಿಯ ಮುಂದಿನ ಜೀವನದ ಬಗ್ಗೆ ಯೋಚಿಸಿದರೆ ಈ ವಾರ್ತೆಯು ಎಷ್ಟೊಂದು ಆರಂಭವಾಗಿದೆ? ಭಯಾನಕವಾಗಿದೆ? ಯಾವ ರೀತಿ ಕೈಕೇಯಿಯ ಜೀವನವನ್ನು ಹಾಳುಮಾಡುವಂತಹದಿದೆ? ಎಂಬೆಲ್ಲ ಸಂಗತಿಗಳನ್ನು ತಿಳಿಸಿ ಹೇಳಲು ಮಂಥರೆಯು ಪ್ರಯಾಸಪಟ್ಟಳು. ಕೈಕೇಯಿಗೆ ಅವಳ ಹಿತದ ನಾಲ್ಕು ಮಾತುಗಳನ್ನು ಪರಿಪರಿಯಾಗಿ ಹೇಳಿದಳು; ಆದರೆ ಕೈಕೇಯಿಗೆ ಯಾವ ಮಾತೂ ಹಿಡಿಸಲಿಲ್ಲ. ಅಷ್ಟೇ ಅಲ್ಲದೆ, ಈ ಒಳ್ಳೆಯ ವಾರ್ತೆಯನ್ನು ಕೇಳಿಕೊಂಡು ಮಂಥರೆಗೆ 'ಶುಭ' ಎಂಬ ದಿವ್ಯ ಆಭರಣವನ್ನು ಕೊಟ್ಟಳು. ಇನ್ನೂ ಏನಾದರೂ ಕೊಡಬೇಕೆಂಬ ಸಮಸ್ಯೆ ಸಹ ಕೈಕೇಯಿಯ ಮುಂದೆ ಇತ್ತು. ರಾಮ ಮತ್ತು ಭರತ ಇವರಲ್ಲಿ