ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೦ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಹನುಮಾನನಿಗೆ ಲಂಕಾನಗರವನ್ನು ಪ್ರವೇಶಿಸಲು ದಾರಿ ಮಾಡಿಕೊಟ್ಟಳು. ತನ್ನ ಇಷ್ಟದಂತೆ ಕಾರ್ಯಗಳನ್ನು ಪೂರೈಸಿಕೊಳ್ಳಲು ಸಮ್ಮತಿಸಿದಳು. ಈ ವರವು ಯಾಚಿತವೋ ಅಯಾಚಿತವೋ ಎಂದು ನಿರ್ಧಾರದಿಂದ ಹೇಳಲು ಬರುವಂತಿಲ್ಲ. ಈ ವರದ ಕಾರಣಗಳು ಸಹ ಸ್ಪಷ್ಟವಾಗಿಲ್ಲ. ೩೯. ಬ್ರಹ್ಮದೇವ < ಹನುಮಾನ ಸುಂದರಕಾಂಡ/೪೮ ಹನುಮಾನನು ಉದ್ಯಾನಗಳನ್ನು ರಾಕ್ಷಸರನ್ನು ಮತ್ತು ಆಕರ್ಷಕ ಪ್ರಾಸಾದ ಗಳನ್ನು ಧ್ವಂಸಗೊಳಿಸಿದನು. ಮಂತ್ರಿಗಳ ಪುತ್ರರಾದ ಜಂಬೂಮಾಲಿ, ವಿರೂಪಾಕ್ಷ ಅಕ್ಷ ಮುಂತಾದವರನ್ನು ಯಮಸದನಕ್ಕೆ ಅಟ್ಟಿದ್ದಾನೆ ಎಂಬುದನ್ನು ತಿಳಿದು ಕ್ರೋಧಗೊಂಡ ರಾವಣನು ಹನುಮಾನನನ್ನು ನಿಯಂತ್ರಿಸಲು ಇಂದ್ರಜಿತುವಿಗೆ ಆಜ್ಞಾಪಿಸಿದನು. ಇಂದ್ರಜಿತು ಹಾಗೂ ಹನುಮಾನ ಇವರು ಸಮಬಲರಾಗಿದ್ದರು. ಪರಸ್ಪರರ ಬಲದ ಅರಿವು ಅವರಿಬ್ಬರಿಗೂ ಇತ್ತು. ಅವರಿಬ್ಬರಲ್ಲಿ ನಡೆದ ಯುದ್ಧವು ಎಲ್ಲರೂ ಬೆರಗಾಗುವಂತೆ ನಡೆಯಿತು. ವಾನರನನ್ನು ಸೋಲಿಸಲಾಗುವುದಿಲ್ಲವೆಂದು ಇಂದ್ರಜಿತುವು ಧರ್ಮಬಲದಿಂದ ತಿಳಿದುಕೊಂಡಿದ್ದನು. ಇಂದ್ರಜಿತುವಿನ ಅಸ್ತಜ್ಞಾನವು ಉತ್ತಮವಿತ್ತು. ಆತನು ಹನುಮಾನನ ಮೇಲೆ ಬ್ರಹ್ಮಾಸ್ತ್ರವನ್ನು ಬಿಟ್ಟನು. ಬ್ರಹ್ಮಾಸ್ತ್ರಕ್ಕೂ ಹನುಮಾನನು ಮಣಿಯುತ್ತಿಲ್ಲವೆಂದು ತಿಳಿದ ಇಂದ್ರಜಿತುವು ಹನುಮಾನನನ್ನು ಬ್ರಹ್ಮಾಸ್ತ್ರದಿಂದ ಬಂಧಿಸಿದನು. ಆಗ ಹನುಮಾನನು ಭೂಮಿಯ ಮೇಲೆ ನಿಶ್ಲೇಷ್ಟನಾಗಿ ಬಿದ್ದನು. ಪ್ರಭುವಿನ ಕೃಪೆಯಿಂದ ಈ ಅಸ್ತದಿಂದ ಹನುಮಾನಿಗೆ ಯಾವ ಅಪಾಯವೂ, ಯಾತನೆಯೂ ಆಗಲಿಲ್ಲ. ಏಕೆಂದರೆ- ತತಃ ಸ್ವಾಯಂಭುವೈರ್ಮಂಬ್ರ್ರಹ್ಮಾಸ್ತ್ರಂ ಚಾಭಿಮಂತ್ರಿತಮ್ | ಹನುಮಾಂಶ್ಚಿಂತಯಾಮಾಸ ವರದಾನಂ ಪಿತಾಮಹಾತ್ ||೪Oll ಬ್ರಹ್ಮವಿಷಯಕ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟ ಬ್ರಹಾಸ್ತದ ಬಂಧನದಲ್ಲಿ ತಾನು ಸಿಲುಕಿದ ವಿಷಯವನ್ನು ತಿಳಿದ ಹನುಮಾನನು “ನನ್ನ ಅಸ್ತದಿಂದ ನೀನು ಒಂದು ಕ್ಷಣದಲ್ಲಿ ಮುಕ್ತನಾಗುವೆ?” ಎಂದು ಬ್ರಹ್ಮದೇವನು ಕೊಟ್ಟ ವರದ ಸ್ಮರಣೆಯನ್ನು ಮಾಡಿದನು. ಬ್ರಹ್ಮದೇವನ ಅನುಗ್ರಹವನ್ನು ಮತ್ತು ಅಸ್ತಬಂಧನದಿಂದ ಮುಕ್ತನಾಗಲು ಬೇಕಾಗಿದ್ದ ತನ್ನ ಸಾಮರ್ಥ್ಯವನ್ನು ಕ್ಷಣಕಾಲ ಮನದಲ್ಲಿ ಆಲೋಚಿಸಿ, ಬ್ರಹ್ಮದೇವನ