ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವರದಾನ ೨೯೧ ಆಜ್ಞೆಯನ್ನು ಅವಲಂಬಿಸಿದನು. ಮನದಲ್ಲಿ ನಿಶ್ಚಯಿಸಿ ಹನುಮಾನನು ಚೇತನ ಇಲ್ಲದಂತೆ ಬಿದ್ದುಕೊಂಡನು. ಆಗ ರಾಕ್ಷಸರು ಮರದ ತೊಗಟೆಗಳಿಂದ, ಸೆಣಬಿನ ಹಗ್ಗಗಳಿಂದ ಆತನನ್ನು ಕಟ್ಟಿಹಾಕಿದರು. ರಾವಣನೊಡನೆ ಮಾತನಾಡುವ ಇಚ್ಛೆಯು ಹನುಮಾನನಿಗೆ ಇತ್ತು; ಆದ್ದರಿಂದ ರಾಕ್ಷಸರಿಂದ ನಡೆದ ಅಪಹಾಸ್ಯ, ಅಪಮಾನಗಳನ್ನು ಆತನು ಇತ್ತು; ಆದ್ದರಿಂದ ರಾಕ್ಷಸರಿಂದ ನಡೆದ ಅಪಹಾಸ್ಯ ಅವಮಾನಗಳನ್ನು ಆತನು ಸುಮ್ಮನಿದ್ದು ಸಹಿಸಿದನು. ಸ ಬದ್ಧಸ್ತನ ವನ ವಿಮುಕ್ಟೋsಸ್ರೇಣ ವೀರ್ಯವಾನ್ | ಅಸ್ತಬಂಧಃ ಸ ಚಾನ್ಯಂ ಹಿ ನ ಬಂಧಮನುವರ್ತತೇ ೪೮॥ ಆ ವೀರ ಹನುಮಾನನನ್ನು ಮರಗಳ ತೊಗಟೆಗಳಿಂದ ಕಟ್ಟಿಹಾಕಿದ್ದರಿಂದ, ಅಸ್ತಗಳ ಬಂಧನಪ್ರಭಾವವು ಇಲ್ಲದಾಯಿತು. ಇದಕ್ಕೆ ಕಾರಣವೆಂದರೆ, ಎರಡನೆಯ ಬಂಧನವು ಪ್ರಾಪ್ತವಾದಾಗ ಮೊದಲನೆಯ ಅಸ್ತದ ಬಂಧನವು ಇಲ್ಲದಾಗುತ್ತದೆ. ಈ ಸಂಗತಿಂರು ಇಂದ್ರಜಿತುವಿನ ಗಮನಕ್ಕೆ ಬಂದಿತು. ಆತನಿಗೆ ಚಿಂತೆಯುಂಟಾಯಿತು. ಆತನ ಅಸ್ತಪ್ರಭಾವವನ್ನು ರಾಕ್ಷಸರು ವಿಫಲಗೊಳಿಸಿದ್ದರು. ಒಮ್ಮೆ ವ್ಯರ್ಥವಾದ ನಂತರ ಪುನಃ ಅದೇ ಅಸ್ತ್ರವನ್ನು ಬಳಸುವಂತಿರುವದಿಲ್ಲ. ಇಂದ್ರಜಿತುವಿಗೆ ಈ ಸಂಗತಿಯು ಗೊತ್ತಿತ್ತು. ಹೀಗಾಗಿ ಜಯದ ಬಗ್ಗೆ ಸಂದೇಹವು ಆತನಲ್ಲಿ ಮೂಡಿತು. ರಾವಣನನ್ನು ಕಾಣುವ ಔತ್ಸುಕ್ಯವಿದ್ದ ಹನುಮಾನನು ಅಸ್ತಬಂಧನದಿಂದ ಮುಕ್ತ ನಾಗಿದ್ದರೂ ರಾಕ್ಷಸರಿಗೆ ಅದನ್ನು ತೋರಗೊಡಲಿಲ್ಲ. ರಾಕ್ಷಸರು ಅವನನ್ನು ಎಳೆದು ರಾವಣನ ಸಭೆಗೆ ತಂದರು. ರಾಮನ ಆಜ್ಞೆಯಂತೆ ಹನುಮಂತನು ಸೀತೆಯ ಶೋಧಕ್ಕಾಗಿ ಲಂಕೆಗೆ ಹೋಗಿ ಅತಿ ಪರಾಕ್ರಮವನ್ನು ಮಾಡಿದನು. “ಆಕ್ಷ' ಎಂಬ ರಾವಣನ ಪುತ್ರನನ್ನು ಸಂಹರಿಸಿದನು. ಇಂದ್ರಜಿತುವಿನ ಬ್ರಹ್ಮಪಾಶಕ್ಕೆ ತಾನಾಗಿ ಅಧೀನನಾದನು. ಅಸ್ತೀಣೋನ್ಮುಕ್ತಮಾತ್ಮಾನಂ ಜ್ಞಾತ್ವಾ ಪೈತಾಮಹಾದ್ವರಾತ್ || ಮರ್ಷಯಸ್ರಾಕ್ಷಸಾನ್ವಿರೋ ಯಂತ್ರಣಸ್ತಾನ್ಯದೃಚ್ಛಯಾ ||೭೬|| ಅ . ಬ್ರಹ್ಮದೇವನು ಕೊಟ್ಟ ವರದಿಂದ, ಅಸ್ತಗಳಿಂದ ಬಿಡುಗಡೆ ಹೊಂದ ಬಹುದೆಂದು ಹನುಮಾನನು ಅರಿತಿದ್ದರೂ ಹೆಡೆಮುರಿಗೆ ಕಟ್ಟಿ ಎಳೆದೊಯ್ಯುವ ರಾಕ್ಷಸರನ್ನು ಆ ಸಮಯಕ್ಕೆ ಕ್ಷಮಿಸಿದನು.