ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೧೩


ಉತ್ತರಕಾಂಡ/೫

ಸುಕೇಶಂ ಧಾರ್ಮಿಕಂ ದೃಷ್ಟ್ವಾ ವರಲಭ್ದಂ ಚ ರಾಕ್ಷಸಮ್ |
ಗ್ರಾಮೀಣೀರ್ನಾಮ ಗಂಧರ್ವೋ ವಿಶ್ವಾವಸುಸಮಪ್ರಭಃ ‖೧‖

“ಸುಕೇಶ ರಾಕ್ಷಸನಿಗೆ ವರವು ದೊರೆತಿದೆ ಹಾಗೂ ಆತನು ಧರ್ಮನಿಷ್ಠ
ನಿದ್ದಾನೆ" ಎಂಬುದನ್ನು ಅವಲೋಕಿಷಿ, ವಿಶ್ವಾವಸುವಿನ ಹಾಗೆ ಪ್ರಭೆಯುಳ್ಳ
'ಗ್ರಾಮಣಿ' ಎಂಬ ಗಂಧರ್ವನು ತನ್ನ ಸುಂದರ ಕನ್ಯೆಯಾದ ದೇವವತಿಯನ್ನು
ಆತನಿಗೆ ಧಾರೆಯೆರೆದು ಕೊಟ್ಟನು.
ವರದಾನಕ್ಕತೈಶ್ವರ್ಯ೦ ಸಾ ತಂ ಪ್ರಾಪ್ಯ ಪತಿಂ ಪ್ರಿಯಮ್ ‖೩‖
ಆಸೀದ್ದೇವವತೀ ತುಷ್ಟಾ ಧನಂ ಪ್ರಾಪತ್ಯೇವ ನಿರ್ಧನಃ ‖೪‖

ವರದಾನವೆಂಬ ಐಶ್ವರ್ಯವು ಪ್ರಾಪ್ತವಾದಂತ ಪ್ರಿಯ ಪತಿಯನ್ನು ಪಡೆದು
ಕೊಂಡ ನಂತರ ದೇವವತಿಯು, ಧನಿಕನಾಗಿ ಸಂತೋಷಗೊಂಡ ಮೊದಲು
ದರಿದ್ರನಿದ್ದ ಪುರುಷನಂತೆ ಅತ್ಯಂತ ಆನಂದಭರಿತಳಾದಳು.
ಇದು 'ಅಯಾಚಿತ' ವರವಾಗಿದೆ.
ಬ್ರಹ್ಮದೇವ < ಮಾಲ್ಯವಾನ, ಸುಮಾಲೀ ಮಾಲಿ, ವರ ಕ್ರಮಾಂಕ ೫೪
ನೋಡಿ.

೫೩. ಉಮಾ < ರಾಕ್ಷಸಿ

ಉತ್ತರಕಾಂಡ/೪

ನೋಡಿರಿ: ವರ ಶಂಕರ < ಸಂಕೇಶ ವರಕ್ರಮಸಂಖ್ಯೆ ೫೨
ಉಮಾಯಾಪಿ ವರೋ ದತ್ತೋ ರಾಕ್ಷಸೀನಾಂ ನೃಪಾತ್ಮಜ ‖೩೦‖
ಸದ್ಯೋಪಲಬ್ಧಿರ್ಗರ್ಭಸ್ಯಃ ಪ್ರಸೂತಿಃ ಸದ್ಯ ಏವ ಚ |
ಸದ್ಯ ಏವ ವಯಃಪ್ರಾಪ್ತಿ ಮಾತುರೇವ ವಯಃಸಮಮ್ ‖೩೧‖

“ಹೇ ರಾಜಪುತ್ರನೇ, ಸಮಾಗಮವಾಗುತ್ತಲೇ ಗರ್ಭಧಾರಣೆ, ಗರ್ಭ
ಧಾರಣೆಯಾದ ಕ್ಷಣವೇ ಪ್ರಸೂತಿ, ಮಗು ಜನಿಸಿದೊಡನೆ ಅದು ಕೂಡಲೇ
ಮಾತೆಯ ವಯಸ್ಸಿನಷ್ಟು ಪ್ರಾಯಕ್ಕೆ ಬರುವದು” ಎಂಬ ವರವನ್ನು ಉಮೆಯು
ಆ ರಾಕ್ಷಸಿಯರಿಗೆ ಕೊಟ್ಟಳು.