ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ರಾಕ್ಷಸಿಯರಿಗೆ ವರವನ್ನು ಏಕೆ ಕೊಡಲಾಯಿತು ಎಂಬುದರ ಸ್ಪಷ್ಟ
ಉಲ್ಲೇಖವಿಲ್ಲ.
ಇದು 'ಅಯಾಚಿತ' ವರವಾಗಿದೆ.

೫೪. ಬ್ರಹ್ಮದೇವ < ಮೌಲ್ಯವಾನ, ಸುಮಾಲೀ, ಮಾಲೀ

ಉತ್ತರಕಾಂಡ/೫

ರಾಮನು ಕೇಳಿದ ಕಾರಣ ಅಗಸ್ತ್ಯಋಷಿಯು ರಾಕ್ಷಸರ ಉತ್ಪತ್ತಿ, ಸುಕೇಶನ
ಪುತ್ರ ಹಾಗೂ ಆತನ ಸಂತತಿಯ ಬಗ್ಗೆ ವಿವರಿಸುತ್ತಾನೆ.
ದೇವವತಿಯಿಂದ ಸುಕೇಶನಿಗೆ ಮಲ್ಯವಾನ, ಸುವಾಲಿ ಹಾಗೂ ಮಾಲಿ
ಎಂಬ ಮೂರು ತೇಜಸ್ಸುಳ್ಳ ಮಕ್ಕಳಾದರು. ತಪೋಬಲದಿಂದ ತಮ್ಮ ತಂದೆಗೆ
ವರಪ್ರಾಪ್ತಿಯಾಗಿ ಐಶ್ವರ್ಯ ಒದಗಿದ್ದನ್ನು ಕಂಡ ಈ ಮೂವರೂ ಸಹೋದರರು
ಮೇರುಪರ್ವತದ ಮೇಲೆ ಘೋರ ತಪಸ್ವಿಗಾರಂಭಿಸಿದರು. ಅವರ ತಪಸ್ಸಿನಿಂದ
ಬ್ರಹ್ಮದೇವನು ಪ್ರಸನ್ನನಾದನು ಮತ್ತು 'ವರದೋsಸ್ಮಿತ್ಯಭಾಷತ'- 'ನಾನು ನಿಮಗೆ
ವರ ಕೊಡಲಿರುವೆನು' ಎಂದನು.
ಆಗ ಅವರು ಬ್ರಹ್ಮದೇವನಿಗೆ ಕರಗಳನ್ನು ಜೋಡಿಸಿ-
ತಪಸಾssರಾಧಿತೋ ದೇವ ಯದಿ ನೋ ದಿಶಸೇ ವರಮ್ ‖೧೪‖
ಅಜೇಯಾಃ ಶತ್ರುಹಂತಾರಸ್ತಥೈವ ಚಿರಜೀವಿನಃ |
ಪ್ರಭವಿಷ್ಣ್ವೋ ಭವಾಮೇತಿ ಪರಸ್ಪರಮನುವ್ರತಾಃ ‖೧೫‖
ಏವಂ ಭವಿಷ್ಯಥೇತ್ಯುಕ್ತ್ವಾ ಸುಕೇಶತನಯಾನ್ವಿಭುಃ ‖೧೬‖

“ಹೇ ಬ್ರಹ್ಮದೇವನೇ, ಪ್ರಸನ್ನನಾದ ನೀನು ನಮಗೆ ವರಗಳನ್ನು ಕೊಡುವದಿದ್ದರೆ
ನಮಗೆ ಯಾರಿಂದಲೂ ಸೋಲು ಬರಬಾರದು; ನಾವು ಶತ್ರುಘಾತಕರಾಗಿರಬೇಕು;
ಚಿರಂಜೀವಿಗಳಾಗಿರಬೇಕು; ಒಡೆಯರಾಗಿರಬೇಕು; ಮತ್ತು ಪರಸ್ಪರರಲ್ಲಿ
ಪ್ರೀತಿಯುಳ್ಳವರಾಗಿರಬೇಕು! ಈ ವರಗಳನ್ನು ಕರುಣಿಸು” ಎಂದರು. ಆಗ
ಬ್ರಹ್ಮದೇವನು ಸುಕೇಶಪುತ್ರರಿಗೆ 'ತಥಾಸ್ತು' ಎಂದನು.
ಈ ರೀತಿ ಬ್ರಹ್ಮದೇವನಿಂದ ವರವನ್ನು ಪಡೆದು ನಿರ್ಭಯರಾಗಿದ್ದ ಆ
ನಿಶಾಚರರು ದೇವತೆಗಳಿಗೂ ಅಸುರರಿಗೂ ಪೀಡಿಸಹತ್ತಿದರು. 'ಸುವೇಲ'ವೆಂಬ
ಪರ್ವತದ ಶಿಖರದ ಮೇಲೆ ವಿಶ್ವಕರ್ಮನಿಂದ ತಮಗಾಗಿ ಒಂದು ಗೃಹವನ್ನು
ರಚಿಸಿಕೊಂಡರು.