ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೧೯


ಕುಂಭಕರ್ಣ ಮಹಾಬಾಹೋ ವರಂ ವರಯ ಯೋ ಮತಃ ‖೪೪‖

“ಹೇ ಮಹಾಪರಾಕ್ರಮಿ ಕುಂಭಕರ್ಣನೆ, ನಿನಗೆ ಇಷ್ಟವಿದ್ದ ವರವನ್ನು
ಬೇಡು!” ಎಂದನು.
ಇದನ್ನು ಕೇಳಿ ಕುಂಭಕರ್ಣನು-
ಸ್ವಪ್ತುಂ ವರ್ಷಾಣ್ಯನೇಕಾನಿ ದೇವದೇವ ಮಮೇಪ್ಸಿತಮ್ ‖೪೫‖

“ಹೇ ದೇವಾಧಿದೇವನೇ, ಬಹುವರ್ಷ ಪರ್ಯಂತ ನಾನು ನಿದ್ರಿಸುತ್ತಿರ
ಬೇಕೆಂಬ ಇಚ್ಛೆ ನನ್ನದಾಗಿದೆ” ಎಂದನು. ಬ್ರಹ್ಮದೇವನು ತಥಾಸ್ತು ಎಂದು ಹೇಳಿ
ಹೊರಟುಹೋದನು. ದೇವತೆಗಳಿಗೆ ಇಷ್ಟವಿದ್ದ ಮಾತುಗಳನ್ನು ಕುಂಭಕರ್ಣನಿಂದ
ನುಡಿಸಿ ಸರಸ್ವತಿಯು ಕುಂಭಕರ್ಣನನ್ನು ಬಿಟ್ಟುಹೋದಳು. ಕುಂಭಕರ್ಣನಿಗೆ ಪ್ರಜ್ಞೆ
ಬಂದನಂತರ ಈ ವಿಚಿತ್ರ ವರವನ್ನು ಬೇಡಿಕೊಂಡ ಕಾರಣ ತುಂಬ ದುಃಖಕ್ಕೆ
ಒಳಗಾದನು
ಇದು 'ಅಯಾಚಿತ' ವರವಾಗಿದೆ.

೫೭. ಶಂಕರ < ರಾವಣ

ಉತ್ತರಕಾಂಡ/೧೬

ದಶಾ--ನನನಿಗೆ ರಾವಣನೆಂಬ ಹಎಸರು ಹೇಗೆ ಬಂದಿತು? ಶಂಕರನು
ಅವನಿಗೆ ಯಾವ ವರಗಳನ್ನು ಕೊಟ್ಟನು? ಎಂಬ ಬಗ್ಗೆ ಅಗಸ್ತ್ಯಮುನಿಯು
ರಾಮನಿಗೆ ವಿವರಿಸುತ್ತಾನೆ.
“ಶಂಕರನ ಬಗ್ಗೆ ಅತ್ಯಂತ ಪೂಜ್ಯ ಭಾವನೆಯನ್ನು ಹೊಂದಿದ್ದ ನಂದಿಯ
ಎದುರು ರಾವಣನು ಉದ್ದಾಮನಾಗಿ ವರ್ತಿಸಿದ್ದನು; ಉದ್ಧಟತನದಿಂದ
ಮಾತನಾಡಿದ್ದನು. ಆಗ ನಂದಿಯು ಅವನಿಗೆ ಶಾಪವನ್ನು ಕೊಟ್ಟನು. ನಂದಿಯ
ಮಾತುಗಳತ್ತ ಗಮನೀಯದೇ ರಾವಣನು, ಶಂಕರಪಾರ್ವತಿಯರು ಕ್ರೀಡೆಯಲ್ಲಿ
ತೊಡಗಿದ್ದ ಪರ್ವತವನ್ನೇರಿ ಹೋಗಲು ಅಪೇಕ್ಷಿಸಿದನು. ಆಗ ಪುಷ್ಪಕವಿಮಾನದ
ಗತಿಯು ಕುಂಠಿತವಾಯಿತು. ಆಗ ರಾವಣನು ರೊಚ್ಚಿಗೆದ್ದು ಆ ಪರ್ವತವನ್ನು
ಕಿತ್ತು ಎಸೆಯಲು ಯತ್ನಿಸಿದನು. ಶಂಕರನು ತನ್ನ ಪಾದದ ಹೆಬ್ಬೆರಳಿನಿಂದ ಆ
ಪರ್ವತವನ್ನು ಕೆಳಕ್ಕೆ ಅದುವಿಂದನು. ಆಗ ಅದರಡಿಯಲ್ಲಿ ರಾವಣನ ಕೈಗಳೆರಡೂ
ಸಿಲುಕಿಕೊಂಡವು. ರಾವಣನು ಕ್ರೋಧಗೊಂಡು ಗರ್ಜಿಸಹತ್ತಿದನು. ಆತನ