ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೨೫


ವಾಸುಕಿಯಿಂದ ರಕ್ಷಿಸಲ್ಪಡುತ್ತಿದ್ದ 'ಭೋಗವತಿ' ಎಂಬ ಪಟ್ಟಣಕ್ಕೆ ಹೋಗಿ ಆತನು
ನಾಗಜನರನ್ನು ಗೆದ್ದುಕೊಂಡನು. ಅಲ್ಲಿಂದ ಮುಂದೆ ಅವನು ಮಣಿಮಯಿ
ಎಂಬ ನಗರಕ್ಕೆ ಹೋದನು.
ನಿವಾತಕವಚಾಸ್ತತ್ರ ದೈತ್ಯಾ ಲಬ್ಧವರಾ ವಸನ್ ‖೬‖

ಅಲ್ಲಿ, ಬ್ರಹ್ಮದೇವನಿಂದ ವರವನ್ನು ಪಡೆದ ನಿವಾತಕವಚರೆಂಬ ದೈತ್ಯರು
ವಾಸವಿದ್ದರು.
ರಾವಣನು ಅವರಿಗೆ ಯುದ್ಧಕ್ಕೆ ಆಹ್ವಾನಿಸಿದನು. ಒಂದು ವರ್ಷದವರೆಗೆ
ಯುದ್ಧವು ನಡೆಯಿತು; ಆದರೆ ಯಾವ ಪಕ್ಷಕ್ಕೂ ಜಯ ಸಿಗಲಿಲ್ಲ. ಆಗ ಬ್ರಹ್ಮದೇವನು
ವಿಮಾನರೂಢನಾಗಿ ಅಲ್ಲಿಗೆ ಬಂದು-
“ಈ ರಾವಣನನ್ನು ಯುದ್ಧದಲ್ಲಿ ಸೋಲಿಸುವದು ದೇವ-ದೈತ್ಯರಿಗೂ
ಸಾಧ್ಯವಿಲ್ಲ. ಆತನು ನಿಮ್ಮನ್ನು ಸೋಲಿಸುವದು ಕಠಿಣವಾಗಿದೆ. ಹೀಗಿರುವುರಿಂದ
ನೀವು ರಾವಣನೊಡನೆ ಸ್ನೇಹವನ್ನು ಬೆಳೆಸಿರಿ” ಎಂದು ನಿವಾತಕವಚರಿಗೆ
ಉಪದೇಶಿಸಿದನು. ಆ ಪ್ರಕಾರ ರಾವಣ ಮತ್ತು ನಿವಾತಕವಚರು ಮಿತ್ರರಾದರು.
ಇಲ್ಲಿ ವರದ ಸ್ವರೂಪವು ಸ್ಪಷ್ಟವಾಗಿಲ್ಲ. ವರ ದೊರೆತ ಉಲ್ಲೇಖ ಮಾತ್ರ
ಬಂದಿದೆ.

೬೩. ರುದ್ರ < ಮಾಂಧಾತಾ

ಉತ್ತರಕಾಂಡ/ಪ್ರಕ್ಷಿಪ್ತ/೩

ಅಗಸ್ತ್ಯ ಮುನಿಯು ರಾಮನಿಗೆ ರಾವಣ ಮತ್ತು ಮಾಂಧಾತಾ ಇವರಲ್ಲಿಯ
ಯುದ್ದದ ವೃತ್ತಾಂತವನ್ನು ತಿಳಿಸುತ್ತಿದ್ದಾನೆ.
“ನೇಕ ಪ್ರದೇಶಗಳನ್ನು ಗೆದ್ದುಕೊಳ್ಳುತ್ತ ರಾವಣನು ಸೋಮಲೋಕಕ್ಕೆ
ಬಂದಾಗ ಅಲ್ಲಿ ವಿಲಾಸದಲ್ಲಿ ತೊಡಗಿದ್ದ ಪುಣ್ಯವಂತರನ್ನು ಕಂಡನು. 'ಪರ್ವತ' ಎಂಬ
ಮುನಿಯು ಆತನಿಗೆ ಅವರ ಮಾಹಿತಿಯನ್ನು ತಿಳಿಸಿದನು. ಅವರು ಯುದ್ಧಾಸಕ್ತ
ರಿರಲಿಲ್ಲ; ಸ್ವರ್ಗವನ್ನು ಬಯಸುವವರಾಗಿದ್ದರು. ಯುದ್ಧವನ್ನು ಅಪೇಕ್ಷಿಸುವವರು
ಇಲ್ಲಿ ಯಾರಿದ್ದಾರೆ? ಎಂಬ ರಾವಣನ ಪ್ರಶ್ನೆಗೆ ಮುನಿಯು, ಮಾಂಧಾತರಾಜನ
ಹೆಸರನ್ನು ನುಡಿದನು. ಅವನನ್ನು ಸೋಲಿಸಬೇಕೆಂದು ರಾವಣನು ಯುದ್ಧಕ್ಕೆ
ಸಿದ್ಧನಾದಾಗ, ಸಪ್ತದ್ವೀಪ ಮತ್ತು ಸಮುದ್ರಸಹಿತ ಪೃಥ್ವಿಯನ್ನು ಗೆದ್ದುಬಂದ
ಮಾಂಧಾತನು ಅಲ್ಲಿಗೆ ತಲುಪಿದನು. ರಾವಣನು ಯುದ್ಧಕ್ಕೆ ಆಹ್ವಾನಿಸಿದಾಗ 'ನಿನಗೆ