ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ತೌ ಭ್ರಾತರೌ ತದಾ ಬದ್ಧೌ ಘೋರೈರ್ದತ್ತವರೈಃ ಶರ್ರೈ |
ಯನ್ನ ಶಕ್ಕಂ ಸುರೈಃ ಸರ್ವೈರಸುರೈರ್ವಾ ಮಹಾಬಲೈಃ ‖೬‖

“ಬಲ ಮತ್ತು ಸಾಹಸಗಳಲ್ಲಿ ಖ್ಯಾತಿ ಪಡೆದ ನನ್ನ ಮಗನಾದ ಇಂದ್ರಜಿತು
ವರವಾಗಿ ಪಡೆದ ಘೋರ ಬಾಣಗಳಿಂದ ಆ ಸಹೋದರರನ್ನು ಬಂಧಿಸಿದ್ದನು.
ದೇವತೆಗಳಿಗೆ, ಮಹಾಬಲಶಾಲಿಯಾದ ಅಸುರರಿಗೆ (ಯಕ್ಷ, ಗಂಧರ್ವ, ಪನ್ನಗ)
ಇಂಥ ಬಂಧನದಿಂದ ಬಿಡುಗಡೆಯಾಗುವದು ಅಸಾಧ್ಯವಿತ್ತು. ಆದರೆ ರಾಮ-
ಲಕ್ಷ್ಮಣರು ಈ ಬಂಧನದಿಂದ ಮುಕ್ತರಾದರು. ಇದು ಮಾಯೆಯೋ, ಪ್ರಭಾವವೋ,
ಸಂಮೋಹವೋ ನನಗೆ ಯಾವದೊಂದೂ ಅರ್ಥವಾಗುತ್ತಿಲ್ಲ.”

ಯುದ್ಧಕಾಂಡ/೭೩

ಇಂದ್ರಜಿತು ಪಡೆದುಕೊಂಡಿದ್ದ ಬ್ರಹ್ಮಾಸ್ತ್ರದ ಭಯವನ್ನು ರಾಮನು ಲಕ್ಷ್ಮಣನ
ಮುಂದೆ ವ್ಯಕ್ತಪಡಿಸಿದನು.
“ರಾಮ-ಲಕ್ಷ್ಮಣರನ್ನು ನನ್ನ ಶರಗಳಿಮದ ಇಂದು ಛಿದ್ರಛಿದ್ರವಾಗಿ ಮಾಡಿ
ಮುಗಿಸುವೆ” ಎಂಬ ಘೋರ ಪಣವನ್ನು ಇಂದ್ರಜಿತು ರಾವಣನ ಎದುರಿನಲ್ಲಿ
ತೊಟ್ಟನು. ಇಂದ್ರಜಿತುವಿನ ಬಾಣಗಳಿಂದ ವಾನರರು ಘಾಸಿಗೊಂಡರು. ಆತನು
ಅನೇಕ ವಾನರರನ್ನು ಬಲಿ ತೆಗೆದುಕೊಂಡನು.
ಸುಗ್ರೀವಮೃಷಭಂ ಚೈವ ಸೋsಂಗದಂ ದ್ವಿವಿದಂ ತಥಾ ‖೪೮‖
ಘೋರಯರ್ದತ್ತವರೈಸ್ತೀಕ್ಷ್ಣೈರ್ನಿಷ್ಟ್ರಾಣಾನಕರೋತ್ತದಾ ‖೪೯‖

ಇದಲ್ಲದೆ, ತನಗೆ ವರವಾಗಿ ದೊರೆತ ತೀಕ್ಷ್ಣಬಾಣಗಳಿಂದ, ಸುಗ್ರೀವ,
ಋಷಭ, ಅಂಗದ ಮತ್ತು ದ್ವಿವಿದ- ಈ ವಾನರರನ್ನು ಥಳಿಸಿ ಹಣ್ಣುಗಾಯಿ
ನೀರುಗಾಯಿ ಮಾಡಿದನು. ರಾಮ-ಲಕ್ಷ್ಮಣರ ಮೇಲೂ ಬಾಣಗಳನ್ನು ಸುರಿಸಿದನು.
ಆಗ ರಾಮನು ಲಕ್ಷ್ಮಣನಿಗೆ:
ಸ್ವಯಂಭುವಾ ದತ್ತವರೋ ಮಹಾಥ್ಮಾ ಸಮಾಹಿತೋsನ್‌ತರ್ಹಿತಭೀಮಕಾಯಃ |
ಕಥಂ ತು ಶಕ್ಯೋ ಯುಧಿ ನಷ್ಟದೇಹೋ ನಿಹಂತುಮದ್ಯೇಂದ್ರಜಿದುದ್ಯತಾಸ್ತ್ರಃ ‖೯೯‖

“ಮತ್ತೆ ಈಗ ಈ ರಾಕ್ಷಸಾಧಿಪತಿಯು, ಇಂದ್ರನ ಶತ್ರುವು, ಮಹತ್ವದ
ಬ್ರಹ್ಮಾಸ್ತ್ರದ ಬಲದಿಂದ ವಾನರಸೈನ್ಯವನ್ನು ಮಣ್ಣುಮುಕ್ಕಿಸಿದ್ದಾನೆ ಮತ್ತು ತೀಕ್ಷ್ಣ