ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೩೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನಾನು ಒಂದು ಅದ್ಭುತ ವರವನ್ನು ಈತನಿಗೆ ಕೊಡುವೆನು. ಇನ್ನುಮೇಲೆ ನನ್ನ
ವಜ್ರಾಯುಧದಿಂದ ಈತನ ವಧೆಯಾಗಲಾರದು.'
ಇದು 'ಅಯಾಚಿತ' ವರವಾಗಿದೆ.

೬೮. ಸೂರ್ಯ < ಹನುಮಾನ

ಉತ್ತರಕಾಂಡ/೩೬

ಅನೇಕ ದೇವತೆಗಳಿಂದ ಹನುಮಂತನಿಗೆ ಹಲವು ವರಗಳು ಪ್ರಾಪ್ತವಾದವು.
ಈ ವರಗಳನ್ನು ಕುರಿತು ಅಗಸ್ತ್ಯಮುನಿಯು ರಾಮನಿಗೆ ತಿಳಿಸುತ್ತಿದ್ದಾನೆ.
ವರ ಕ್ರಮಸಂಖ್ಯೆ ೬೭, ಇಂದ್ರ < ಹನುಮಾನ- ಪರಿಶೀಲಿಸಿ.
ಮಾರ್ತಂಡಸ್ತ್ವಬ್ರವೀತ್ತತ್ರ ಭಗವಾಂಸ್ತಿಮಿರಾಪಹಃ |
ತೇಜಸೋsಸ್ಯ ಮದೀಯಸ್ಯ ದದಾಮಿ ಶತಿಕಾಂ ಕಲಾಮ್ ‖೧೩‖
ಯದಾ ಚ ಶಾಸ್ತ್ರಾಣ್ಯಧ್ಯೇತುಂ ಶಕ್ತಿರಸ್ಯ ಭವಿಷ್ಯತಿ |
ತದಾಸ್ಯ ಶಾಸ್ತ್ರಂ ದಾಸ್ಯಾಮಿ ಯೇನ ವಾಗ‍್ಮೀ ಭವಿಷ್ಯತಿ ‖
ನ ಚಾಸ್ಯ ಭವಿತಾ ಕಶ್ಚಿತ್ಸದೃಶಃ ಶಾಸ್ತ್ರದರ್ಶನೇ ‖೧೪‖

ಭಗವಾನ ಸೂರ್ಯನು ಹನುಮಾನನಿಗೆ ಇಂತೆಂದನು: “ನಾನು ನನ್ನ
ತೇಜಸ್ಸಿನ ನೂರನೆಯ ಒಂದು ಅಂಶವನ್ನು ನಿನಗೆ ಕೊಡುತ್ತೇನೆ. ನೀನು
ಶಾಸ್ತ್ರಾಧ್ಯಯನ ಮಾಡುವ ಸಮಯ ಒದಗಿದಾಗ ನಾನು ಸಕಲಶಾಸ್ತ್ರಗಳನ್ನೂ
ನಿನಗೆ ಅರ್ಪಿಸುವೆ; ನೀನು ಅದರಿಂದ ಖ್ಯಾತ ಭಾಷಣಕಾರನಾಗುವೆ; ನಿನಗೆ
ಸರಿಸಮಾನರು ಯಾರೂ ಇರಲಾರರು.”
ಇದು 'ಅಯಾಚಿತ' ವರವಾಗಿದೆ.

೬೯. ವರುಣ < ಹನುಮಾನ

ಉತ್ತರಕಾಂಡ/೩೬

ಅನೇಕ ದೇವತೆಗಳಿಂದ ಹನುಮಾನನು ಹಲವು ವರಗಳನ್ನು
ಪಡೆದುಕೊಂಡನು. ಅವುಗಳ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ವಿವರಿಸುತ್ತಿದ್ದಾನೆ.
ಇಂದ್ರ < ಹನುಮಾನ, ವರ ಕ್ರಮಾಂಕ ೬೭- ನೋಡಿ.
ವರುಣಶ್ಚ ವರಂ ಪ್ರಾದಾನ್ನಾಸ್ಯ ಮೃತ್ಯುರ್ಭವಿಷ್ಯತಿ |
ವರ್ಷಾಯುತಶತೇನಾಪಿ ಮತ್ಪಾಶಾದುದಕಾದಪಿ ‖೧೫‖