ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೪೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೭೭. ರುದ್ರ < ಮಧುದೈತ್ಯ

ಉತ್ತರಕಾಂಡ/೬೧

ರಾಮನು ಚ್ಯವನ, ಭಾರ್ಗವ ಮುಂತಾದ ಋಷಿಗಳನ್ನು ಅತಿ ಆದರದಿಂದ
ಬರಮಾಡಿಕೊಂಡನು; ಮತ್ತು ಆಗಮನದ ಉದ್ದೇಶವನ್ನು ಕೇಳಿದನು. ಆಗ
ಅವರು ರಾಮನಿಗೆ ಲವಣಾಸುರನಿಂದ ಅವರಿಗೆ ಆಗುತ್ತಿದ್ದ ಪೀಡೆ ಮತ್ತು
ಅವುಗಳ ಕಾರಣಗಳನ್ನು ವಿವರಿಸಿ, ಋಷಿಗಳ ರಕ್ಷಣೆಯನ್ನು ಮಾಡಬೇಕೆಂದು
ಪ್ರಾರ್ಥಿಸಿದನು.
ಕೃತಯುಗದಲ್ಲಿ ದಿತಿ ಕುಲದಲ್ಲಿ 'ಮಧು' ಎಂಬ ಹೆಸರಿನ ಒಬ್ಬ
ಮಹಾದೈತ್ಯನಾಗಿ ಹೋದನು. ಆತನು ಬ್ರಾಹ್ಮಣರಲ್ಲಿ ಭಕ್ತಿಯುಳ್ಳವನಾಗಿದ್ದರಿಂದ
ಮತ್ತು ದಯಾಳುವಾಗಿದ್ದರಿಂದ ಅವನೊಡನೆ ದೇವತೆಗಳು ಮಿತ್ರರಾದರು.
ಸ ಮಧುರ್ವೀರ್ಯಸಂಪನ್ನೋ ಧರ್ಮಂ ಚ ಸುಸಮಾಹಿತಃ |
ಬಹುಮಾನಾಚ್ಚ ರುದ್ರೇಣ ದತ್ತಸ್ತಸ್ಯಾದ್ಭುತೋ ವರಃ ‖೫‖
ಶೂಲಂ ಶೂಲಾದ್ವಿನಿಷ್ಕೃಷ್ಯ ಮಹಾವೀರ್ಯಂ ಮಹಾಪ್ರಭಮ್ |
ದದೌ ಮಹಾತ್ಮಾ ಸುಪ್ರೀತೋ ವಾಕ್ಯಂ ಚೈತದುವಾಚ ಹ ‖೬‖
ತ್ವಯಾಯಮತುಲೋ ಧರ್ಮೋ ಮತ್ಪ್ರಸಾದಕರಃ ಕೃತಃ |
ಪ್ರೀತ್ಯಾ ಪರಮಯಾ ಯುಕ್ತೋ ದದಾಮ್ಯಾಯುಧಮುತ್ತಮಮ್ ‖೭‖
ಯಾವತ್ಸುರೈಶ್ಚ ವಿಪ್ರಶ್ಚ ವಿರುಧ್ಯೇರ್ಮಹಾಸುರ |
ತಾವಚ್ಛೂಲಂ ತವೇದಂ ಸ್ಯಾದನ್ಯಥಾ ನಾಶಮೇಷ್ಯತಿ ‖೮‖
ಯಶ್ವ ತ್ವಾಮಭಿಯುಂಜೀತ ಯುದ್ಧಾಯ ವಿಗತಜ್ವರಃ |
ತಂ ಶೂಲೋ ಭಸ್ಮಸಾತ್ಕೃತ್ವಾ ಪುನರೇಷ್ಯತಿ ತೇ ಕರಮ್ ‖೯‖

ಮಧುದೈತ್ಯನು ಪರಮವೀರನೂ, ಬುದ್ದಿವಂತನೂ, ಧರ್ಮನಿಷ್ಠನೂ
ಆಗಿದರಿಂದ ಆತನನ್ನು ಬಹುಮಾನಿಸಲು ರುದ್ರನು ಅವನಿಗೆ ಅದ್ಭುತವರವನ್ನು
ಕೊಟ್ಟನು. ರುದ್ರನು ತನ್ನ ಶೂಲದಿಂದ ಇನ್ನೊಂದು ಪ್ರಚಂಡ ಶಕ್ತಿಯುಳ್ಳ ಶೂಲವನ್ನು
ಹೊರತೆಗೆದು ಮಧುದೈತ್ಯನಿಗೆ ಅರ್ಪಿಸಿದನು. ರುದ್ರನು ಸಂತೋಷದಿಂದ ನಂತರ
ನುಡಿದದ್ದೇನೆಂದರೆ, “ನಾನು ಪ್ರಸನ್ನಗೊಳ್ಳುವಂತಹ ಕಾಯಕವನ್ನು ನೀನು
ಮಾಡಿರುವೆ; ಅದಕ್ಕಾಗಿ ಸಂತೋಷದಿಂದ ಈ ಆಯುಧವನ್ನು ನಿನಗೆ ಅರ್ಪಿಸುತ್ತೇನೆ.
ಆದರೆ ಹೇ ಮಹಾ ಅಸುರನೇ, ನೀನು ದೇವತೆ ಹಾಗೂ ಬ್ರಾಹ್ಮಣರೊಡನೆ
ವಿರೋಧವನ್ನು ಮಾಡದೇ ಇರುವವರೆಗೆ ಮಾತ್ರ ಈ ಶೂಲವು ನಿನ್ನ ವಶದಲ್ಲಿ