ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೫೧


“ಹೇ ವರಾಧಿಷ್ಟಾತ್ರಿಯೇ, ಹೇ ವರವನ್ನು ಕೊಡುವ ದೇವಿಯೇ,
ತ್ರೈಲೋಕ್ಯದಲ್ಲಿ ಸ್ತ್ರೀ ಎಂದರೆ ನೀನಾಗಿರುವೆ. ಹೇ ದೇವಿಯೇ, ನಿನ್ನ ದರ್ಶನವು
ವ್ಯರ್ಥವಾಗಲಾರದು. ಆ ಕಾರಣ ನೀನು ನನ್ನ ಮೇಲೆ ಕೃಪಾದೃಷ್ಟಿ
ಯವಳಾಗು!”
ಪಾರ್ವತಿಯು ರಾಜನ ಹೃದಯದಾಸೆಯನ್ನು ಅರಿತು ಈ ರೀತಿ
ನುಡಿದಳು:
ಅರ್ಧಸ್ಯ ದೇವೋ ವರದೋ ವರಾರ್ಧಸ್ಯ ತವ ಹ್ಯಹಮ ‖೨೪‖
ತಸ್ಮಾದರ್ಧಂ ಗೃಹಾಣ ತ್ವಂ ಸ್ತ್ರೀಪುಂಸೋರ್ಯಾವದಿಚ್ಛಸಿ ‖೨೫‖

“ನಿನಗೆ ಅರ್ಧ ವರವನ್ನು ಕೊಡುವವನು ದೇವನಿದ್ದು ಅರ್ಧ ವರವನ್ನು
ಕೊಡುವವಳು ನಾನಾಗಿದ್ದೇನೆ. ಆದ್ದರಿಂದ ಸ್ತ್ರೀ ಪುರುಷರಾದ ನಮ್ಮಿಬ್ಬರಿಂದ
ನಿನ್ನ ಆಸೆಯಂತೆ ಅರ್ಧ ಅರ್ಧ ವರವನ್ನು ಪಡೆದುಕೊ!”
ದೇವಿಯ ಈ ಅನುಪಮ ಅದ್ಭುತವರವನ್ನು ಕೇಳಿ ಇಲರಾಜನು
ಸಂತೋಷಗೊಂಡು-
ಯದಿ ದೇವಿ ಪ್ರಸನ್ನಾ ಮೇ ರೂಪೇಣಾಪ್ರತಿಮಾ ಭುವಿ ‖೨೬‖
ಮಾಸಂ ಸ್ತ್ರೀತ್ವಮುಪಾಸಿತ್ವಾ ಮಾಸಂ ಸ್ಯಾಂ ಪುರುಷಃ ಪುನಃ ‖೨೭‖

“ಹೇ ದೇವಿಯೇ, ನೀನು ನನ್ನ ಮೇಲೆ ಪ್ರಸನ್ನಳಾಗಿದ್ದರೆ ಮತ್ತು ಪೃಥ್ವಿಯಲ್ಲಿ
ನೀನು ಅಪ್ರತಿವಂ ರೂಪವತಿಯಾಗಿದ್ದಲ್ಲಿ, ನಾನು ನಿನ್ನಂತೆ ಒಂದು ತಿಂಗಳು
ಸ್ತ್ರೀಯಾಗಿದ್ದು ಪುನಃ ಒಂದು ತಿಂಗಳು ಪುರುಷನಾಗಬೇಕು! ಎಂಬ ವರವನ್ನು
ಕರುಣಿಸು” ಎಂದನು.
ಇಲರಾಜನ ಇಚ್ಛೆಯನ್ನರಿತು ಪಾರ್ವತಿಯು ಹೀಗೆಂದು ನುಡಿದಳು:
ಪ್ರತ್ಯುವಾಚ ಶುಭಂ ವಾಕ್ಯಮೇವಮೇವ ಭವಿಷ್ಯತಿ |
ರಾಜನ್ಪುರುಷಭೂತಸ್ತ್ವಂ ಸ್ತ್ರೀಭಾವಂ ನ ಸ್ಮರಿಷ್ಯಸಿ ‖೨೮‖
ಸ್ತ್ರೀಭೂತಶ್ಚ ಪರಂ ಮಾಸಂ ನ ಸ್ಮರಿಷ್ಯಸಿ ಪೌರುಷಮ್ ‖೨೯‖

“ನಿನ್ನ ಇಚ್ಛೆಯಿದ್ದಂತೆ ನಡೆಯುವದು! ರಾಜನೇ, ನೀನು ಪುರುಷನಾಗಿದ್ದಾಗ
ಸ್ತ್ರೀತ್ವದ ಸ್ಮರಣೆಯು ನಿನಗೆ ಉಳಿಯಲಾರದು! ಸ್ತ್ರೀಯಾದ ನಂತರ ಪೌರುಷದ
ಸ್ಮರಣೆ ಇರಲಾರದು!”