ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೧೫


ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜನಮ್ |
ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ||೧೪||
ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ |
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ |೧೫||
ಭಾವಸಮಶುದ್ಧಿರತ್ಯೇತತ್ತಪೋ ಮಾನಸ ಮುಚ್ಯತೇ ||೧೬||

ಭ. ಗೀ. ೦೭

ದೇವರ, ಬ್ರಾಹ್ಮಣರ, ಗುರುಗಳ, ವಿದ್ವಾಂಸರ ಪೂಜೆಯೇ ತಪಸ್ಸು, ಶುದ್ಧಿ, ಋಜುತ್ವ, ಬ್ರಹ್ಮಚರ್ಯ ಮತ್ತು ಅಹಿಂಸೆ ಎಂದರೆ ಶಾರೀರಿಕ ತಪಸ್ಸು. ಉದ್ವೇಗವಿರದ ವಾಣಿ, ಸತ್ಯ ಮತ್ತು ಪ್ರಿಯವಾದ ಭಾಷಣ, ಸ್ವಾಧ್ಯಾಯ ಇವು ವಾಚಿಕ ತಪಸ್ಸು; ಮಾನಸಿಕ ಪ್ರಸನ್ನತೆ, ಸೌಮ್ಯತೆ, ಮೌನ, ಆತ್ಮನಿಗ್ರಹ ಮತ್ತು ಭಾವಸಂಶುದ್ಧಿಯೆಂದರೆ ಮಾನಸಿಕ ತಪಸ್ಸು; ಫಲದ ಆಸೆಯನ್ನು ಇಟ್ಟುಕೊಳ್ಳದೇ ಕಾಯೇನ ವಚಸಾ ಮನಸಾ ಶ್ರದ್ಧೆಯಿಂದ ತಪಗೈದರೆ ಅದು ಸಾತ್ವಿಕ ತಪವೆಂದೆನಿಸುತ್ತದೆ. ಮಾನಸನ್ಮಾನ, ಗೌರವ ಪೂಜೆ ದೊರೆಯಬೇಕೆಂಬ ಐಹಿಕ ಉದ್ದೇಶಗಳಿಂದ ತಪಸ್ಸನ್ನು ಕೈಕೊಂಡರೆ ಅದು ರಾಜಸಿಕ ತಪವೆನಿಸುತ್ತದೆ. ಮೂರ್ಖತನದಿಂದ ಸ್ವಂತದ ದೇಹವನ್ನು ಶ್ರಮಿಸಿ, ಪರರಿಗೆ ಪೀಡೆಯನ್ನುಂಟುಮಾಡಬೇಕೆಂಬ ಉದ್ದೇಶದಿಂದ ಆಚರಿಸಿದ ತಪಸ್ಸು ತಾಮಸಿಕವೆಂದು ಭಗವದ್ಗೀತೆಯಲ್ಲಿ ಹೇಳಿದ್ದಾರೆ-
ಯದ್ ದುಸ್ತರಂ ಯದ್ ದುರಾಪಂ ಯದ್ ದುರ್ಗಂ ಯಚ್ಚ ದುಷ್ಕರಮ್ |
ಸರ್ವಂ ತತ್ತಪಸಾ ಸಾಧ್ಯಂ ತಪೋಹಿ ದುರತಿಕ್ರಮ್ಮಮ್ ||

ಮನುಸ್ಮೃತಿ

ಯಾವುದು ಕಠಿಣ, ಕೈಗೆ ಸಿಗಲಾರದ, ತಲುಪಲಸಾಧ್ಯ, ಕೈಕೊಳ್ಳಲಾಗದ ಸಂಗತಿ ಎಂದಿದೆಯೋ, ಅದು ತಪಸ್ಸಿನಿಂದ ದೊರೆಯುವುದು; ಆದರೆ, ತಪಸ್ಸನ್ನು ಯಾರೂ ಅತಿಕ್ರಮಿಸುವಂತಿಲ್ಲವೆಂದು ಮನುವು ಹೇಳುತ್ತಾನೆ. ತಪಸ್ಸಿನಿಂದ ಚಿಂತನಾಶಕ್ತಿಯು ಬಲಗೊಳ್ಳುತ್ತದೆ, ಜ್ಞಾನವು ವರ್ಧಿಸುತ್ತದೆ. ವ್ಯಾಸರು ತುಂಬಾ ಪರಿಶ್ರಮ ವಹಿಸಿದ್ದರಿಂದ ಪುರಾತನ ವಾಙ್ಮಯದ ಸಂಗ್ರಹಣೆ ಸಾಧ್ಯವಾಯಿತು. ಪ್ರಾಚೀನ ಗ್ರಂಥಗಳಲ್ಲಿಯ ವ್ಯಕ್ತಿಗಳಲ್ಲಿ ಅವರ ಜೀವನದಲ್ಲಿ ತಪಸ್ಸಿನ ಪ್ರಭಾವವು ತೋರಿಬರುತ್ತದೆ.

ಮಾನವನ ಶಕ್ತಿಗೆ ನಿಲುಕದ ಸಂಗತಿಗಳು ತಪಸ್ಸಿನಿಂದ ಲಭಿಸುವಂತಾಗುತ್ತವೆ. ಮಾನವರ ಹಾಗೆ ದೇವತೆಗಳು-ದಾನವರು ತಪಸ್ಸನ್ನು ಆಚರಿಸಹತ್ತಿದರು. ಬ್ರಹ್ಮ