ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೨೮. ಕುಬೇರ (ವೈಶ್ರವಣ) ಕುಬೇರನು ವಿಶ್ರವಸುಮುನಿ ಮತ್ತು ದೇವವರ್ಣಿನಿ ಇವರ ಮಗ, ಇವನ ರೂಪವು ರಾಕ್ಷಸನಂತೆ ಮತ್ತು ಬಲವು ಅಸುರರಂತೆ ಇತ್ತು. ಇವನಿಗೆ ಮೂರು ಕಾಲುಗಳು, ಬಹುದೊಡ್ಡ ಶರೀರ, ಭಾರವಾದ ತಲೆ, ದೀರ್ಘ ಗದ್ದ, ಎಂಟು ಹಲ್ಲುಗಳು, ಬೂದುವರ್ಣದ ಕೂದಲು, ಶಂಕುವಿನಂತಿದ್ದ ಕಿವಿಗಳು, ಕೆಂಪು ವರ್ಣದ ದಪ್ಪವಾದ ಭುಜಗಳು ಇದ್ದವು. ಈ ಕೆಂಜಗನಂತಿದ್ದ ಕ್ರೂರಿಯೆನಿಸುತ್ತಿದ್ದ ಕುಬೇರನು ವೈವರ್ತಜ್ಞಾನಸಂಪನ್ನನೂ ಇದ್ದು, ಹುಟ್ಟಿನಿಂದ ಜ್ಞಾನಿಯಾಗಿದ್ದನು ಈತನ ಶರೀರವು ಹೇಸಿಗೆ ತರುವಂತಿದ್ದ ಕಾರಣ ಈತನಿಗೆ ಕುಬೇರ ಎಂಬ ಹೆಸರು ಬಂದಿತೆಂದು ಬ್ರಹ್ಮಾಂಡಪುರಾಣದಲ್ಲಿದೆ. ಈತನು ತನ್ನ ತಂದೆಯನ್ನು ಹೋಲುತ್ತಿದ್ದುದರಿಂದ ಪಿತಾಮಹನಾದ ಪುಲಸ್ಯನು ಈತನಿಗೆ ವೈಶ್ರವಣನೆಂದು ಹೆಸರಿಟ್ಟನು; ಹಾಗೂ ಇವನು ಧನಾಧ್ಯಕ್ಷನಾಗುವನೆಂದು ಭವಿಷ್ಯವಾಣಿಯನ್ನು ಸಹ ನುಡಿದಿದ್ದನು ಎಂದು ಹೇಳುತ್ತಾರೆ. ಕುಬೇರನ ತಾಯಿಯ ಹೆಸರು ಬೇರೆಬೇರೆ ಗ್ರಂಥಗಳಲ್ಲಿ ಬೇರೆಬೇರೆಯಾಗಿದೆ. ಈತನು ತಪೋಬಲದಿಂದ ಬ್ರಹ್ಮದೇವನನ್ನು ಪ್ರಸನ್ನಗೊಳಿಸಿ ಆತನಿಂದ ಯಕ್ಷರ ಅಧಿಪತ್ಯ ರಾಜರಾಜತ್ವ ಧನೇಶತ್ವ ಅಮರತ್ವ ರುದ್ರನ ಸ್ನೇಹ ಮತ್ತು ನಲಕ್ಬರನಂಥ ಪುತ್ರ ಮುಂತಾದವುಗಳನ್ನು ಗಳಿಸಿ ಕೊಂಡನು. ರಾವಣನು ಲಂಕೆಯನ್ನು ಬೇಡಿದಾಗ, ತಂದೆಯ ಹೇಳಿಕೆಯನ್ನು ಮನ್ನಿಸಿ, ಕುಬೇರನು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು. ರಾವಣನು ಕುಬೇರನನ್ನು ಸೋಲಿಸಿ ಆತನ ಪುಷ್ಪಕವಿಮಾನವನ್ನು ಅಪಹರಿಸಿದನು. ಕುಬೇರನು ಪಾರ್ವತಿಯತ್ತ ಓರೆಗಣ್ಣಿನಿಂದ ನೋಡಿದ ಕಾರಣ ಅವನ ಆ ಕಣ್ಣು ಸುಟ್ಟು ಹೋಯಿತು; ಮತ್ತು ಬಲಗಣ್ಣು ಕೆಂಜುಬಣ್ಣದ್ದಾಯಿತು. ಹೀಗಾಗಿ ಈತನಿಗೆ ಏಕಾಕ್ಷ, ಕೆಂಜುಗಣ್ಣಿನವ ಎಂಬ ಹೆಸರು ಬಂದಿತು. ಈತನ ಸಭೆಗೆ ಕುಬೇರ ಸಭೆ ಎಂದೆನ್ನುತ್ತಿದ್ದರು. ಈತನಿಗೆ ನೂರಕ್ಕೂ ಹೆಚ್ಚಾಗಿ ಮಡದಿಯರಿದ್ದರು. ಕುಬೇರನ ರಾಜಧಾನಿಯ ಹೆಸರು ಅಲಕಾವತಿ ಎಂದಿದ್ದು ಅವನು ಗಂಧಮಾದನ ಪರ್ವತದ ಮೇಲೆ ವಾಸವಿದ್ದನು. ಇವನು 'ಸೌಗಂಧಿಕ' ಎಂಬ ಹೆಸರಿನ ಉದ್ಯಾನವನವನ್ನು ನಿರ್ಮಿಸಿದ್ದನು. ಮಹಾಭಾರತದಲ್ಲಿ ಇದರ ಉಲ್ಲೇಖವು ಹಲವಾರು ಕಡೆ ಬಂದಿದೆ. ಈತನು ಗಂಧಮಾದನರೆಂಬ ವಾನರರನ್ನು ಸೃಷ್ಟಿಸಿದನು. ದೂತನ ಮುಖಾಂತರ ರಾವಣನಿಗೆ ಹಿತವಚನಗಳನ್ನು ಹೇಳಲು ಯತ್ನಿಸಿದನು; ಆದರೆ ರಾವಣನಿಗೆ ಅದು ಹಿಡಿಸಲಿಲ್ಲ. ಕುಬೇರನು ತುಂಬುರುವಿಗೆ ಶಾಪ ನಂತರ ಉಃಶಾಪವನ್ನು ಕೊಟ್ಟಿದ್ದನು. ಸೀತೆಯ ಅಗ್ನಿಪರೀಕ್ಷೆಯ ಕಾಲದಲ್ಲಿ ಕುಬೇರನು ರಾಮನಿಗೆ ತಿಳಿಯ