ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೫೮. ದೇವಯಾನಿ

ಇವಳು ದೈತ್ಯಗುರುವಾದ ಶುಕ್ರಾಚಾರ್ಯನ ಮಗಳು. ದೇವತೆಗಳ
ಗುರುವಾದ ಬೃಹಸ್ಪತಿಯ ಪುತ್ರನಾದ ಕಚನು ಸಂಜೀವಿನೀವಿದ್ಯೆಯನ್ನು ಕಲಿಯಲು
ಶುಕ್ರಾಚಾರನ ಬಳಿಗೆ ಬಂದಾಗ ದೇವಯಾನಿಯು ಕಚನಲ್ಲಿ ಮೋಹಿತಳಾಗಿ ಅವನನ್ನು ವಿವಾಹವಾಗಲು ಬಯಸಿದಳು. ಆದರೆ ಗುರುಕನ್ಯಂಯಾದ ದೇವಯಾನಿಯನ್ನು ಮದುವೆಯಾಗಲು ಕಚನು ಒಪ್ಪಲಿಲ್ಲ. ಆಗ ದೇವಯಾನಿಯು ಅವನಿಗೆ ನಿನ್ನ ವಿದ್ಯೆಯು ನಿನಗೆ ಫಲಪ್ರದವಾಗಲಾರದು” ಎಂಬ ಶಾಪವನ್ನು ಕೊಟ್ಟಳು. ಶರ್ಮಿಷ್ಠೆಯೊಡನೆ ದೇವಯಾನಿಯ ವ್ಯಾಜ್ಯ ನಡೆದಾಗ ಇವಳು ಶರ್ಮಿಷ್ಠೆಯನ್ನು ಒಂದು ಬಾವಿಯಲ್ಲಿ ತಳ್ಳಿಬಿಟ್ಟಳು. ಯಯಾತಿಯು ಶರ್ಮಿಷ್ಠೆಯನ್ನು ಹೊರಕ್ಕೆ ತೆಗೆದನು. ಅವಳು ತನ್ನ ಪರಿಚಯವನ್ನು ಯಯಾತಿಗೆ ಹೇಳಿಕೊಂಡಳು. ಯಯಾತಿಯು ಈಕೆಯನ್ನು ಪತ್ನಿಯೆಂದು ಸ್ವೀಕರಿಸಿದನು. ಶುಕ್ರಾಚಾರನ ಕೋಪದ ಅಂಜಿಕೆಯಿಂದ ಮತ್ತು ಸ್ವಜಾತಿಯ ಒಳಿತಿಗಾಗಿ ಶರ್ಮಿಷ್ಠೆ ದೇವಯಾನಿಯ ದಾಸಿಯಾಗಿ, ಯಂಯಾತಿಯ ಬಳಿಗೆ ಹೋದಳು. ದೇವಯಾನಿಂದು ಯಯಾತಿಯಿಂದ 'ಯದು' ಮತ್ತು 'ತುರ್ವಸು' ಎಂಬ ಎರಡು ಗಂಡುಮಕ್ಕಳನ್ನು ಪಡೆದಳು. ರಾಮಾಯಣದಲ್ಲಿ ಯದುವಿನ ಉಲ್ಲೇಖ ಮಾತ್ರವಿದೆ. ಶರ್ಮಿಷ್ಠೆಯೊಡನೆ ಶಮನಸುಖವನ್ನು ಪಡೆಯಬಾರದೆಂದು ಶುಕ್ರಾಚಾರ್ಯನು ನಿಖರವಾಗಿ ಹೇಳಿದ್ದರೂ, ಶರ್ಮಿಷ್ಠೆಗೆ ಮಗುವಾದುದನ್ನು ತಿಳಿದ ಶುಕ್ರಾಚಾರ್ಯನು ಯಯಾತಿಗೆ ವಾರ್ಧಕ್ಯದ ಶಾಪವನ್ನು ಕೊಟ್ಟನು.

೫೯, ದೇವಾಂತಕ ರಾವಣನ ಮಗನಾದ ದೇವಾಂತಕನು, ಕುಂಭಕರ್ಣನು ಹತನಾದಾಗ ಬಹಳ ಶೋಕಾಕುಲನಾದನು. ತ್ರಿಶಿರನ ಹುರಿದುಂಬಿಸುವ ಭಾಷಣದಿಂದ ನರಾಂತಕನಂತೆ ಇವನೂ ಯುದ್ಧಕ್ಕೆ ಸಜ್ಜಾದನು. ಯುದ್ಧದಲ್ಲಿ ನರಾಂತಕನು ಹತನಾದುದನ್ನು ಕಂಡು ಈತನು ರೂಪಗೊಂಡು ಅಂಗದನ ಮೇಲೆ ಏರಿಹೋದನು. ಹನುಮಾನನು ಇವನನ್ನು ವಧಿಸಿದನು. ೬೦. ದ್ವಿವಿದ ದ್ವಿವಿದನು ಸುಷೇಣನೆಂಬ ವಾನರನ ಮಗ, ಸುಗ್ರೀವನಿಗೆ ಪಟ್ಟ ಕಟ್ಟಲು ಇವನು ಪ್ರಯತ್ನಿಸುತ್ತಿದ್ದನು. ಈತನು ನಂತರ ಸುಗ್ರೀವನ ಮಂತ್ರಿಯಾದನು.