ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಕ್ತಿ ವಿಶೇಷ ೪೧೩ ದ್ವಿವಿದನು ಮೈಂಧನ ಸಹೋದರ. ಈತನ ಎಪ್ಪತ್ತು ಯೋಜನಗಳಷ್ಟು ದೂರದವರೆಗೆ ನೆಗೆಯುವ ಶಕ್ತಿಯುಳ್ಳವನಾಗಿದ್ದನು. ಎಲ್ಲ ವಾನರರೊಡನೆ ಈತನು ಋಕ್ಷ ಗುಹೆಯನ್ನು ಪ್ರವೇಶಿಸಿದನು. ಯಾರಿಂದಲೂ ವಧೆಯಾಗದ ವರವು ಈತನಿಗೆ ಬ್ರಹ್ಮನಿಂದ ದೊರೆತಿತ್ತು. 'ಕಾಳಗದಲ್ಲಿ ಈತನನ್ನು ಮೀರಿಸುವವರು ಯಾರೂ ಇಲ್ಲ' ಎಂದು ಶುಕನು ಇವನ ಪರಾಕ್ರಮವನ್ನು ರಾವಣನ ಮುಂದೆ ಬಣ್ಣಿಸಿದ್ದನು. “ಅಶನಿಪ್ರಭ' ಮತ್ತು 'ಸಮಪ್ರಭ” ಎಂಬ ರಾಕ್ಷಸರನ್ನು ಇವನು ವಧಿಸಿದನು. ಕುಂಭಕರ್ಣನ ಮೇಲೆ ಇವನು ಪರ್ವತವೊಂದನ್ನು ಎಸೆದಾಗ ಅನೇಕ ರಾಕ್ಷಸರು, ಕುದುರೆಗಳು, ರಥಗಳು ಅದರಡಿಯಲ್ಲಿ ಸಿಕ್ಕು ಪುಡಿಪುಡಿಯಾದವು, ಅತಿಕಾಯ ರಾಕ್ಷಸನ ಮೇಲೆ ಈತನು ಮಾಡಿದ ಹಲ್ಲೆಯು ನಿಷ್ಪಲವಾಯಿತು. ಶೋಣಿತನೆಂಬ ರಾಕ್ಷಸನನ್ನು ಇವನು ಕೊಂದನು. ಕಲಿಯುಗದವರೆಗೆ ಜೀವಿತವಿರಲು ರಾಮನು ಈತನಿಗೆ ಹೇಳಿದ್ದನು. ಈತನು ಕಿಷ್ಕಂಧಾಪತಿಯಾದನು. ರಾಜಸೂಯಯಜ್ಞದ ಸಮಯಕ್ಕೆ ಈತನು ಸಹದೇವನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟ ಉಲ್ಲೇಖವು ಮಹಾ ಭಾರತದಲ್ಲಿದೆ. ೬೧. ನಂದೀಶ್ವರ ನಂದೀಶ್ವರನು ಶಾಲಂಕಾಯನನ ಮೊಮ್ಮಗ; ಶಿಲಾದನ ಮಗ. ಶಿಲಾದನಿಗೆ ಸಂತಾನವಿರದಾಗ ಮಗಳನ್ನು ಪಡೆಯಲು ತಪಸ್ಸನ್ನು ಕೈಗೊಂಡನು. ಶಂಕರನು ಪ್ರಸನ್ನನಾಗಿ ಇಚ್ಛಾಪೂರ್ತಿಯ ವರವನ್ನು ಕರುಣಿಸಿದನು. ಯಜ್ಞಕ್ಕೆಂದು ಒಮ್ಮೆ ಭೂಮಿಯನ್ನು ಉಳುತ್ತಿದ್ದಾಗ, ಮೂರು ಕ್ಷೇತ್ರಗಳುಳ್ಳ ನಾಲ್ಕು ಕೈಗಳುಳ್ಳ ಜಟಾ ಮಕುಟಧಾರಿಯಾದ ಶಂಕರರೂಪನಾದ ಬಾಲಕನೊಬ್ಬನನ್ನು ಶಿಲಾದನು ಕಂಡನು. ಅವನನ್ನು ಮನೆಗೆ ಕರೆತಂದ ನಂತರ ಆ ಬಾಲಕನು ಸಾಮಾನ್ಯ ಹುಡುಗನಂತೆ ಆದನು. ಆ ಬಾಲಕನೇ ನಂದೀಶ್ವರನು. ಈತನು ಎಂಟು ವರ್ಷ ಪ್ರಾಯದವ ನಾದಾಗ ಮಿತ್ರ-ವರುಣರು, ಈ ಹುಡುಗನು ಅಲ್ಪಾಯುಷಿಯಾಗಿರುವನೆಂದು ನುಡಿದರು. ಅಪಮೃತ್ಯುವನ್ನು ತಡೆಯಲು ಇವನು ಶಂಕರನನ್ನು ಆರಾಧಿಸಿ ಪ್ರಸನ್ನಗೊಳಿಸಿ ಕೊಂಡನು. ಶಂಕರನಿಂದ ಈತನಿಗೆ ಅಮರತ್ವವು ದೊರೆಯಿತು. ಅಷ್ಟೇ ಅಲ್ಲದೆ, ಶಂಕರನು ಇವನನ್ನು ಪುತ್ರನಂತೆ ಭಾವಿಸಿ ಇವನಿಗೆ ತನ್ನ ಪಾರ್ಶ್ವಗಣದಲ್ಲಿ ಸ್ಥಾನವನ್ನು ಕೊಟ್ಟನು. ಈತನ ವಿವಾಹವು ಮರುತನ ಕನೈಯಾದ ಸುಯಶಾಳೊಡನೆ ನಡೆಯಿತು. ದಕ್ಷಯಜ್ಞದ್ವಂಸದ ಸಮಯದಲ್ಲಿ ಈತನು