ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೨೩


ವಾಗಿದ್ದನು. ಯಾಜ್ಞವಲ್ಕ್ಯನು ಇವನನ್ನು ಸ್ಮೃತಿಕಾರನೆಂದು ಗೌರವಿಸಿದ್ದಾನೆ.
'ಪೌಲಸ್ತ್ಯಸ್ಮೃತಿ' ಮೊದಲಾದ ಗ್ರಂಥಗಳನ್ನು ನಾಲ್ಕನೆಯ ಇಲ್ಲವೆ ಏಳನೆಯ
ಶತಮಾನದ ಸಮಯದಲ್ಲಿ ಬರೆದಿರಬಹುದೆಂದು ಊಹಿಸಬಹುದು.

೭೬. ಪ್ರಹಸ್ತ

ಪ್ರಹಸ್ತನು ಸುಮಾಲಿರಾಕ್ಷಸ ಮತ್ತು ಕೇತುಮತಿ ಇವರ ಮಗ. ಇವನು
ರಾವಣನ ಸೋದರಮಾವ ಹಾಗೂ ಆತನ ಮಂತ್ರಿಯಾಗಿದ್ದನು. ಈತನು
ಬಲು ಶೂರನಾಗಿದ್ದು, ರಾವಣನ ಸೇನೆಯ ಅಧಿಪತ್ಯ ಇವನದಾಗಿತ್ತು. ಕೈಲಾಸ
ಪರ್ವತದ ಮೇಲೆ ಪ್ರಹಸ್ತನು ಮಣಿಭದ್ರನನ್ನು ಪರಾಭವಗೊಳಿಸಿದ್ದನು. ರಾಮ-
ರಾವಣರ ಯುದ್ಧದಲ್ಲಿ ಈತನು ಅತುಲ ಸಾಹಸ-ಶೌರ್ಯಗಳನ್ನು ತೋರಿದನು.
ಹಿಂದೆ ಲಂಕೆಯ ದಹನದ ಕಾಲಕ್ಕೆ ಹನುಮಾನನು ಇವನ ಗೃಹಕ್ಕೆ ಬೆಂಕಿ
ಹಚ್ಚಿದಾಗ, 'ಈ ಪೃಥ್ವಿಯಲ್ಲಿಯ ಎಲ್ಲ ವಾನರರನ್ನೂ ನಿರ್ಮೂಲಗೊಳಿಸುವೆನು'
ಎಂಬ ಪಣವನ್ನು ಪ್ರಹಸ್ತನು ಮಾಡಿದ್ದನು. ರಾಮನೊಡನೆ ಸ್ನೇಹವನ್ನು ಮಾಡಿ
ಕೊಳ್ಳಬೇಕೆಂದು ರಾವಣನಿಗೆ ಕೊಟ್ಟ ವಿಭೀಷಣನ ಸಲಹೆಯನ್ನು ಪ್ರಹಸ್ತನು
ತಳ್ಳಿಹಾಕಿದ್ದನು. ಕುಬೇರನು ಮೊದಲು ಲಂಕಾಪತಿಯಾಗಿದ್ದಾಗ, ಲಂಕೆಯು
ತನಗೆ ದೊರೆಯಬೇಕೆಂದು ಒತ್ತಾಯಿಸಿ ರಾವಣನು ಪ್ರಹಸ್ತನನ್ನು ದೂತನನ್ನಾಗಿ
ಕಳುಹಿದ್ದನು.
ನರಾಂತಕನ ವಧೆಯಾದನಂತರ ಇವನು ನೀಲನ ಮೇಲೆ ಸಾಗಿಹೋದನು;
ಆದರೆ ನೀಲನು ಇವನನ್ನು ಕೊಂದುಬಿಟ್ಟನು.

೭೭. ಬಲಿ

ಪ್ರಹ್ಲಾದನ ಮಗನಾದ ವಿರೋಚನ ಎಂಬುವನಿಗೆ ದೇವಿ ಎಂಬ
ಪತ್ನಿಯಿದ್ದಳು. ಇವರಿಬ್ಬರ ಮಗನೇ ಬಲಿ. ಇವನು ದೈತ್ಯರ ಮಗನಾಗಿದ್ದನು. ಇವನು
ಅತ್ಯಂತ ಬಲಾಢ್ಯ ರಾಜನಾಗಿದ್ದನು. ಬಲಿಯ ಹೆಂಡತಿಯ ಹೆಸರು ವಿಂಧ್ಯಾವಲಿ.
ಇವನ ಎರಡನೆಯ ಪತ್ನಿಯ ಹೆಸರು ಅಶನಾ ಎಂದಿತ್ತು. ಇವಳಿಂದ ಬಲಿರಾಜನಿಗೆ
ಬಾಣ ಮೊದಲಾದ ನೂರು ಗಂಡುಮಕ್ಕಳಾದರು. ಬಲಿಯು ವಿಷ್ಣುವಿನ
ಭಕ್ತನಾಗಿದ್ದನು. ಶುಕ್ರಾಚಾರ್ಯನ ಸಲಹೆಯಂತೆ ಬಲಿಯು ಸ್ವರ್ಗದ ಮೇಲೆ
ದಾಳಿಮಾಡಿದನು. ಆಗ ದೇವತೆಗಳು ತಮ್ಮ ವೇಷವನ್ನು ಬದಲು ಮಾಡಿ,
ಮುಖ ಮರೆಯಿಸಿ ಅವಿತುಕೊಂಡರು. 'ನೀನು ಧರ್ಮದಿಂದ ರಾಜ್ಯವನ್ನಾಳು!