ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೨೫


೭೮. ಬಾಣಾಸುರ

ಇವನೊಬ್ಬ ಅಸುರ, ಶಂಕರನು ಇವನಿಗೆ ಅನೇಕ ವರಗಳನ್ನು ಕೊಟ್ಟಿದ್ದನು.
ಪಾರ್ವತಿಯು ತನ್ನನ್ನು ಮಗನೆಂದು ಸ್ವೀಕರಿಸಬೇಕೆಂಬ ವರವನ್ನು ಸಹ ಇವನು
ಶಂಕರನಿಂದ ಪಡೆದುಕೊಂಡಿದ್ದನು. ಕಾರ್ತಿಕೇಯನು ಜನಿಸಿದ ಪ್ರದೇಶದ
ಆಧಿಪತ್ಯವು ಇವನಿಗೆ ಚಿರವಾಗಿ ದೊರೆಯಿತು. ಬಾಣಾಸುರನು ಅತ್ಯಂತ
ಪ್ರಬಲನಾಗಿದ್ದು, ಯಾವಾಗಲೂ ಯುದ್ಧಕ್ಕೆ ಹಾತೊರೆಯುತ್ತಿದ್ದನು. ಬಾಣಾಸುರನು
ಇಟ್ಟ ಸ್ಥಿತಿಯಲ್ಲಿಯೇ ವಿಧಿಯಿಲ್ಲದೆ ದೇವತೆಗಳು ಇರಬೇಕಾಯಿತು. ಇವನಿಗೆ
ಸಹಸ್ರ ಬಾಹುಗಳಿದ್ದವು; ಅವುಗಳಲ್ಲಿ ಎರಡನ್ನು ಮಾತ್ರ ಉಳಿಸಿ, ಮಿಕ್ಕವನ್ನು
ಕೃಷ್ಣನಿಗೆ ಕತ್ತರಿಸಿಹಾಕಿದನು. ಬಾಣಾಸುರನು ಅನಿರುದ್ಧನನ್ನು ಬಂಧನದಲ್ಲಿಟ್ಟು
ಕಾರಣಕ್ಕಾಗಿ, ಕೃಷ್ಣನು ಅವನನ್ನು ವಧಿಸಬಹುದಿತ್ತು. ಆದರೆ ಕೃಷ್ಣನು ಪ್ರಹ್ಲಾದನಿಗೆ
'ನಿನ್ನ ವಂಶದಲ್ಲಿಯ ಯಾರನ್ನೂ ನಾನು ಕೊಲ್ಲುವದಿಲ್ಲ' ಎಂಬ ವರವನ್ನು
ಕೊಟ್ಟಿದ್ದನು. ಬಾಣಾಸುರನು ನಂತರ ತನ್ನ ಕನ್ಯೆಯಾದ ರೂಪವತಿ ಉಷಾ
ಇವಳ ವಿವಾಹವನ್ನು ಅನಿರುದ್ಧನೊಡನೆ ಮಾಡಿಕೊಟ್ಟನು. ಬಾಣಾಸುರನು ಶಂಕರನ
ಸೇವಕರ ಅಗ್ರಣಿಯಾಗಿದ್ದನು. ಉಷಾ ಮತ್ತು ಅನಿರುದ್ಧರ ಮಗನಿಗೆ ಇವನು
ತನ್ನ ರಾಜ್ಯವನ್ನು ಕೊಟ್ಟನು. ಹೀಗಿರುವದರಿಂದ ಬಾಣಾಸುರನಿಗೆ ಪುತ್ರರಿರಲಿಲ್ಲ
ವೆಂದು ತೋರುತ್ತದೆ. ಬ್ರಹ್ಮಾಂಡಪುರಾಣದಂತೆ ಬಾಣಾಸುರನಿಗೆ ಲೋಹಿನಿ
ಎಂಬ ಸ್ತ್ರೀಯಿಂದ ಇಂದ್ರಧನ್ವನ್ ಎಂಬ ಮಗನಾದನೆಂದು ಉಲ್ಲೇಖವಿದೆ.

೭೯. ವಿಭೀಷಣ

ಇವನು ವಿಶ್ರವಸ ಮತ್ತು ಕೈಕಸಿ- ಇವರ ಮಗ. ವನಪರ್ವದಲ್ಲಿ ಈತನ
ತಾಯಿಯ ಹೆಸರು ಮಾಲಿನಿ ಎಂದು ಉಲ್ಲೇಖಿಸಲಾಗಿದೆ; ಭಾಗವತದಲ್ಲಿ ಕೇಶಿನಿ
ಎಂದಿದೆ. ವಿಭೀಷಣನು ಒಳ್ಳೆಯ ಸ್ವಭಾವದವನು. ಉಗ್ರತಪಸ್ಸನ್ನಾಚರಿಸಿ ಇವನು
ಬ್ರಹ್ಮದೇವನನ್ನು ಸಂತುಷ್ಟಗೊಳಿಸಿದನು. 'ನನ್ನ ಬುದ್ಧಿಯು ಸದಾಕಾಲವೂ ಧರ್ಮದತ್ತ
ಇರಲಿ' ಎಂಬ ವರವನ್ನು ಬೇಡಿಕೊಂಡನು. ಬ್ರಹ್ಮದೇವನು ಇವನಿಗೆ
ಅಮರತ್ವವನ್ನೂ, ಬ್ರಹ್ಮಾಸ್ತ್ರವನ್ನೂ ಕರುಣಿಸಿದನು. ಶೈಲೂಷ ಎಂಬ ಗಂಧರ್ವನ
ಮಗಳಾದ ಸರಮೆಯು ಅವನ ಭಾರ್ಯೆ, ಪದ್ಮಪುರಾಣದಲ್ಲಿ ಈತನ ಮಡದಿಯ
ಹೆಸರು ಮಹಾ ಮೂರ್ತಿ ಎಂದಿದೆ.
ವಿಭೀಷಣನು ಲಂಕೆಯಲ್ಲಿಯೇ ವಾಸವಿದ್ದರೂ ರಾವಣನೊಡನೆ ಅಷ್ಟೊಂದು
ಹೊಂದಾಣಿಕೆ ಇರಲಿಲ್ಲ. ಸೀತೆಯನ್ನು ರಾಮನಿಗೆ ಒಪ್ಪಿಸಿ ಆತನೊಡನೆ ಸ್ನೇಹವಿಟ್ಟು