ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ವ್ಯಕ್ತಿ ವಿಶೇಷ

೪೪೧

ವಧಿಸುವುದರಲ್ಲಿ ರಾಮನಿಗೆ ನೆರವಾದನು. ರಾವಣನನ್ನು ವಧಿಸಲು ಬ್ರಹ್ಮದೇವನು ಕೊಟ್ಟ ಅಸ್ತ್ರಗಳನ್ನು ಉಪಯೋಗಿಸಬೇಕೆಂದು ರಾಮನಿಗೆ ಜ್ಞಾಪಿಸಿದನು. ರಾವಣನ ವಧೆಯಾದನಂತರ ರಾಮನು ಮಾತಲಿಯನ್ನು ಗೌರವಿಸಿದನು.
ಅರ್ಜುನನನ್ನು ಇಂದ್ರನ ಆಜ್ಞೆಯನುಸಾರ ಸ್ವರ್ಗಕ್ಕೆ ಕರೆತಂದವನು ಮಾತಲಿ.

೯೮. ಮಾಂಧಾತ
ಇವನು ಯುವನಾಶ್ವ ಎಂಬ ರಾಜನ ಮಗ. ರಾಜ್ಯದಲ್ಲಿ ಬರಗಾಲ ವುಂಟಾದಾಗ ಈತನು ಉಗ್ರತಪಸ್ಸನ್ನು ಕೈಗೊಂಡು 'ಪದ್ಮಾ' ಎಂಬ ಏಕಾದಶೀ ವ್ರತವನ್ನಾಚರಿಸಿ ಬರಗಾಲದ ನಿವಾರಣೆ ಮಾಡಿದನು. ಪಾಪಾಚರಣೆಯನ್ನು ಮಾಡಿದ ಶ್ರಮಣ ಎಂಬುವನಿಗೆ ಇವನು ಕಠಿಣಶಿಕ್ಷೆ ವಿಧಿಸಿದನೆಂದು ರಾಮನು ವಾಲಿಗೆ ಹೇಳಿದ್ದನು. ಮಾಂಧಾತನಿಗೆ ನೂರು ಜನ ಹೆಂಡತಿಯರಿದ್ದರೂ ಮಕ್ಕಳಾಗಲಿಲ್ಲ. ಅದಕ್ಕಾಗಿ ಇವನು ತುಂಬಾ ಕೊರಗುತ್ತಿದ್ದನು. ಪುತ್ರ ಪ್ರಾಪ್ತಿಗಾಗಿ ಇವನು ಋಷಿಗಳಿಂದ ಯಜ್ಞವನ್ನು ಮಾಡಿಸಿದನು. ಋಷಿಗಳು ರಾಣಿಯರಿಗೆ ಪುತ್ರಪ್ರಾಪ್ತಿಯಾಗಬೇಕೆಂದು ಸಿದ್ದಪಡಿಸಿದ ಜಲವನ್ನು (ಪೃಷರಾಜ್ಯ) ಮಾಂಧಾತನು ಬಾಯಾರಿಕೆಯಾಯಿತೆಂದು ಕುಡಿದನು. ಆಗ ಇವನಿಗೆ ಗರ್ಭದಾರಣೆಯಾಯಿತು. ಗರ್ಭವು ಚೆನ್ನಾಗಿ ಉದರದಲ್ಲಿ ಬೆಳೆದಾಗ, ಋಷಿಗಳು ಈತನ ಕುಕ್ಷಿಯನ್ನು ಛೇದಿಸಿ ಬಾಲಕನನ್ನು ಹೊರತೆಗೆದರು. ಇಂದ್ರನು ತನ್ನ ಹೆಬ್ಬೆರಳನ್ನು ಮಗುವಿನ ಬಾಯಿಗೆ ಚೀಪಲು ಕೊಟ್ಟು ಆ ಬಾಲಕನನ್ನು ಸಂರಕ್ಷಿಸಿದನು. ಮಾಂಧಾತನು ತುಂಬಾ ಬಲಶಾಲಿ ಮತ್ತು ವಿದ್ಯಾಪ್ರವೀಣ, ತಪೋಬಲದಿಂದ ಇವನಿಗೆ ಹಲವಾರು ಶಸ್ತ್ರಾಸ್ತ್ರಗಳು ಲಭಿಸಿದ್ದವು. ಸಕಲ ಭೂಲೋಕವನ್ನೂ ಗೆದ್ದುಕೊಂಡು ಇವನು ರಾಜಸೂಯ, ಅಶ್ವಮೇಧಾರಿ ಯಜ್ಞಗಳನ್ನು ನೆರವೇರಿಸಿದನು. ಅನಂತರ ಇವನಿಗೆ ತನ್ನ ಪರಾಕ್ರಮದ ಗರ್ವವುಂಟಾಯಿತು; ಇಂದ್ರನ ಅರ್ಧಸಿಂಹಾಸನವು ದೊರೆಯ ಬೇಕೆಂಬ ಅಭಿಲಾಷೆಯು ಇವನಿಗಾಯಿತು. ಇಂದ್ರನು ಇವನನ್ನು ಯುದ್ಧಕ್ಕೆ ಆಹ್ವಾನಿಸಿ, ಲವಣಾಸುರನೊಡನೆ ಯುದ್ಧ ಮಾಡಲು ಹೇಳಿದನು. ಈ ಯುದ್ಧದಲ್ಲಿ ಮಾಂಧಾತನು ಮಡಿದನು. ಮಾಂಧಾತನು ಕ್ಷತ್ರಿಯನಾಗಿ ಹುಟ್ಟಿದ್ದರೂ ಬ್ರಾಹ್ಮಣ ನಾದನು. ಇವನು ರಾವಣನನ್ನು ಸೋಲಿಸಿದ್ದನು. 'ಶಶಬಿಂದು'ವಿನ ಕನ್ಯಯಾದ ಬಿಂದುಮತಿಯೊಡನೆ ಈತನ ವಿವಾಹವಾಗಿತ್ತು. ಇವಳಿಂದ ಮುಚುಕುಂದ, ಅಂಬರೀಷ, ಪುರುಕುತ್ಸ ಎಂಬ ಮೂರು ಜನ ಪುತ್ರರು ಹುಟ್ಟಿದರು. ಅಲ್ಲದೆ ಇವನಿಗೆ ಐವತ್ತು ಮಂದಿ ಕನೈಯರಿದ್ದರು. ಒಮ್ಮೆ ಒಬ್ಬ ಋಷಿಯು ಮಾಂಧಾತನಿಗೆ