ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೧೦೦, ಮಾಲಿ ಸುಕೇಶ ರಾಕ್ಷಸ ಮತ್ತು ದೇವವತಿ ಇವರ ಮೂರನೆಯ ಮಗನೇ ಮಾಲಿ. ಇವನು ಮಾಲ್ಯವಾನ ಮತ್ತು ಸುಮಾಲಿ ಎಂಬ ತನ್ನ ಸಹೋದರರೊಡನೆ ತಪಸ್ಸು ಮಾಡಿ ಬ್ರಹ್ಮದೇವನನ್ನು ಸಂತುಷ್ಟಗೊಳಿಸಿದನು. ಬ್ರಹ್ಮದೇವನ ವರದಿಂದ ಸದಾ ವಿಜಯವನ್ನೂ ಚಿರಂಜೀವಿತ್ವವನ್ನೂ ಪಡೆದುಕೊಂಡನು. ಇವನು ಬಂಧುಗಳ ಸಮೇತ ದೇವತೆಗಳನ್ನು ಪೀಡಿಸತೊಡಗಿದಾಗ ವಿಷ್ಣುವು ಇವನನ್ನು ವಧಿಸಿದನು. ವಸುಧಾ ಎಂಬ ಗಂಧರ್ವಿಯು ಇವನ ಪತ್ನಿ. ಇವಳಿಂದ ಅನಲ, ಅನಿಲ, ಹರ ಮತ್ತು ಸಂಪಾತಿ ಎಂಬ ಗಂಡುಮಕ್ಕಳಾದರು. ವಿಭೀಷಣನು ಇವರಿಗೆ ಮಂತ್ರಿ ಪದವನ್ನು ಕೊಟ್ಟನು. ೧೦೧. ಮಾಲ್ಯವಾನ (ಮಾಲ್ಯವತ್) ಸುಕೇಶರಾಕ್ಷಸ ಮತ್ತು ದೇವವತಿಯರ ಹಿರಿಯ ಮಗ, ತನ್ನ ತಂದೆಯಾದ ಸುಕೇಶನು ತಪೋಬಲದಿಂದ ಐಶ್ವರ್ಯವನ್ನು ಪಡೆದನೆಂಬುದನ್ನು ಕೇಳಿ ಎಮಾಲ್ಯವಾನನು ತನ್ನ ಇಬ್ಬರು ತಮ್ಮಂದಿರೊಡನೆ ಕಠಿಣ ತಪಸ್ಸನ್ನು ಆಚರಿಸಿದನು. ಪ್ರಸನ್ನನಾದ ಬ್ರಹ್ಮನಿಂದ ವರಗಳನ್ನು ಪಡೆದುಕೊಂಡನಂತರ ಎಲ್ಲರೊಡನೆ ಲಂಕೆಯಲ್ಲಿ ವಾಸವಿದ್ದು ದೇವತೆಗಳನ್ನು ಪೀಡಿಸಹತ್ತಿದನು. ಆಗ ವಿಷ್ಣುವು ದೇವತೆಗಳಿಗೆ ಅಭಯ ನೀಡಿ, ಮೌಲ್ಯವಾನನನ್ನು ವಧಿಸುವ ಪ್ರತಿಜ್ಞೆಯನ್ನು ಮಾಡಿದನು. ವಿಷ್ಣುವು ಮಾಲಿಯನ್ನು ವಧಿಸಿದನಂತರ ಭಯಗೊಂಡ ಮಾಲ್ಯವಾನನು, ಸುಮಾಲಿಯ ಜೊತೆಗೂಡಿ ಪಾತಾಳಕ್ಕೆ ಹೋಗಿ ತಂಗಿದನು. ಪುನಃ ಈತನು ಮರ್ತ್ಯಲೋಕಕ್ಕೆ ಬಂದಾಗ ವೈಶ್ರವಣನ ಐಶ್ವರ್ಯವನ್ನು ಕಂಡು ಬೆರಗಾದನು. ಇವನು ತನ್ನ ಕನ್ಯಯಾದ ಕೈಕಸಿಯನ್ನು ವೈಶ್ರವಣನಿಗೆ ಕೊಟ್ಟು ಮದುವೆ ಮಾಡಿದನು. ಈಕೆಯಿಂದ ರಾವಣ ಮೊದಲಾದವರು ಹುಟ್ಟಿದರು. ನರ್ಮದಾ ಎಂಬ ಗಂಧರ್ವಿಯ ಹಿರಿಯ ಮಗಳಾದ ಸುಂದರಿಯು ಮಾಲ್ಯವಾನನ ಹೆಂಡತಿ. ಅವಳಿಂದ ಮೌಲ್ಯವಾನನಿಗೆ ಏಳು ಪುತ್ರರೂ, ಓರ್ವ ಕನೈಯೂ ಹುಟ್ಟಿದರು. ರಾವಣನು ಸೀತಾಪಹರಣವನ್ನು ಮಾಡಿದ ಸಂಗತಿಯು ಮೌಲ್ಯವಾನನಿಗೆ ಹಿಡಿಸಲಿಲ್ಲ. ಸೀತೆಯನ್ನು ರಾಮನಿಗೆ ಮರಳಿ ಒಪ್ಪಿಸಿ, ಅಧರ್ಮದಿಂದ ದೂರಾಗಿರಬೇಕೆಂದು ರಾವಣನಿಗೆ ಉಪದೇಶಿಸಿದನು.