ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೪೪೫ ಬ್ರಹ್ಮದೇವನು ಇವನನ್ನು ಇಂದ್ರಜಿತನೆಂದು ಸನ್ಮಾನಿಸಿದನು. ಈತನ ಪತ್ನಿಯ ಹೆಸರು ಸುಲೋಚನಾ ಎಂದಿತ್ತು. “ನಿಕುಂಭಿಲೆಯಲ್ಲಿಯ ಮೇಘನಾದನ ಹೋಮಗಳೆಲ್ಲ ಪೂರ್ತಿಗೊಂಡು ಆತನು ಹೊರಗೆ ಯುದ್ಧಕ್ಕೆ ನಿಂತರೆ ಎಲ್ಲರ ವಧೆಯಾಗುವದು ಖಂಡಿತ'ವೆಂದು ವಿಭೀಷಣನು ಅರಿತಿದ್ದು, ಈ ಬಗ್ಗೆ ರಾಮನಿಗೆ ಮುನ್ಸೂಚನೆಯನ್ನೂ ಕೊಟ್ಟಿದ್ದನು. ಆ ಪ್ರಕಾರ, ಇಂದ್ರಜಿತುವಿನ ಹೋಮವು ಪೂರ್ಣಗೊಳ್ಳುವ ಮೊದಲೇ ಲಕ್ಷ್ಮಣನು ಅದನ್ನು ಧ್ವಂಸ ಮಾಡಿದನು. ಯುದ್ಧ ನಡೆದಾಗ ಲಕ್ಷ್ಮಣನು ಇಂದ್ರಜಿತುವನ್ನು ವಧಿಸಿದನು. ಆಗ ಇಂದ್ರಜಿತುವಿನ ಪತ್ನಿಯಾದ ಸುಲೋಚನೆಯು ಸತಿಹೋದಳು. ಇಂದ್ರಜಿತು ಬಹುಪರಾಕ್ರಮಿಯಾಗಿದ್ದು ಯಾರಿಗೂ ಸೋಲುವಂತಿರಲಿಲ್ಲ. ರಾಮ-ರಾವಣರ ಯುದ್ದದಲ್ಲಿ ಇವನು ತೋರಿದ ಶೌರ್ಯಸಾಹಸಗಳು ಅನುಪಮ ವಾಗಿದ್ದವು. ಅನೇಕ ವಾನರವೀರರನ್ನು ಇವನು ಯಮಸದನಕ್ಕೆ ಅಟ್ಟಿದನು. ಹನುಮಾನ ಮನಸ್ಸಿನಲ್ಲಿ ಭಯವನ್ನುಂಟುಮಾಡಲು 'ಹೇ ರಾಮ, ಹೇ ರಾಮ!” ಎಂದು ಆಕ್ರೋಶಿಸುತ್ತಿದ್ದ ಮಾಯಾವೀ ಸೀತೆಯನ್ನು ಈತನು ಸೃಷ್ಟಿಸಿ, ಅವಳನ್ನು ಹನುಮಾನನ ಎದುರಿಗೆ ತಂದು ಅವಳ ವಧೆಯನ್ನು ಮಾಡುವದಾಗಿ ಘೋಷಿಸಿದನು. ಖಡ್ಗವನ್ನು ಹಿರಿದು ಈ ಮಾಯೆಯ ಸೀತೆಯನ್ನು ವಧಿಸಿದನು. ಇದನ್ನು ಕಂಡ ವಾನರರೆಲ್ಲರೂ ದುಃಖಗೊಂಡು ಚೆಲ್ಲಾಪಿಲ್ಲಿಯಾಗಿ ಓಡ ತೊಡಗಿದರು. ಶತ್ರುವನ್ನು ಸದೆಬಡಿಯಲು ಮೇಘನಾದನು, ತನ್ನ ಪರಾಕ್ರಮದ ಜೊತೆಗೆ, ವರದಿಂದ ತಾನು ಪಡೆದ ಶಸ್ತ್ರಾಸ್ತ್ರಗಳನ್ನೂ ಮಾಯಾವೀ ವಿದ್ಯೆಯನ್ನೂ ಪುಷ್ಕಳವಾಗಿ ಬಳಸಿದನು. ಇಂದ್ರಜಿತುವು ಹನುಮಾನನ ಮೇಲೆ ಬ್ರಹ್ಮಾಸ್ತ್ರವನ್ನು ಉಪಯೋಗಿಸಿದನು. ಆದರೆ, ಇತರ ರಾಕ್ಷಸರು ಆಗ ಹನುಮಾನನನ್ನು ಹಗ್ಗ ಮೊದಲಾದ ಇತರ ಬಂಧನಗಳಿಂದ ಹೆಡಮುರಿಗೆ ಕಟ್ಟಿದ್ದರಿಂದ ಬ್ರಹ್ಮಾಸ್ತ್ರ ವಿಫಲಗೊಂಡಿತು. ಇಂದ್ರಜಿತು ತನ್ನ ಶರಗಳಿಂದ ರಾಮ-ಲಕ್ಷ್ಮಣರನ್ನು ನಿಶ್ಚಷ್ಟಗೊಳಿಸಿ, ನಾಗಪಾಶದಿಂದ ಬಂಧಿಸಿದ್ದನು. ಇಂದ್ರಜಿತು ಅದೃಶ್ಯನಾಗುವ ಮಾಯಾವಿದ್ಯೆಯನ್ನು ಅರಿತಿದ್ದರಿಂದ ಯುದ್ಧದಲ್ಲಿ ಇವನು ಸತತವಾಗಿ ಜಯ ಪಡೆಯುತ್ತಿದ್ದನು. ೧೦೪, ಮೈಂದ ಇವನು ಸುಷೇಣನೆಂಬ ವಾನರನ ಜೇಷ್ಠಪುತ್ರ; ದ್ವಿವಿದನೆಂಬ ವಾನರನ ಅಣ್ಣ ಅರವತ್ತು ಲಕ್ಷ ಯೋಜನೆಗಳಷ್ಟು ದೂರ ನೆಗೆಯುವ ಬಲ ಈತನಲ್ಲಿತ್ತು.