ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೨೩

ಸಾವು” ಎಂಬ ಶಾಪವಾಣಿಯನ್ನು ನುಡಿದಾಗ ಪರೀಕ್ಷಿತನು ಅವನೆದುರಿನಲ್ಲಿ ಇರಲಿಲ್ಲ. “ಭರತನು ಯುವರಾಜ್ಯ ಪದವನ್ನು ಸ್ವೀಕರಿಸಿದರೆ, ಆತನಿಂದ ನಡೆಯಬಹುದಾದ ಶ್ರಾದ್ಧಾದಿಕ್ರಿಯೆಗಳು ನನಗೆ ತಲುಪಕೂಡದು!” ಎಂಬ ಶಾಪವಾಣಿಯನ್ನು ದಶರಥನು ನುಡಿದಾಗ ಭರತನು ಅಲ್ಲಿರಲಿಲ್ಲ. ಭರತನು ಆಗ ಆತನ ತಾತನ ಮನೆಯಲ್ಲಿದ್ದನು. ಈ ರೀತಿ ಶಾಪ ಅಥವ ವರ ಹೊಂದುವ ವ್ಯಕ್ತಿ ಸನಿಹದಲ್ಲಿರದಿದ್ದರೆ ಪ್ರತೀಕಗಳ ಮಾಧ್ಯಮದಿಂದ ಶಾಪ-ವರಗಳನ್ನು ಕೊಡಲಾಗುತ್ತದೆ. ಇವು ಕೂಡ ಆ ವ್ಯಕ್ತಿಗಳಿಗೆ ಸರಿಯಾಗಿ ತಾಗುತ್ತವೆ ಎಂದು ನಂಬುತ್ತಾರೆ. ಆಹಾರ, ಪಾನೀಯ, ಬೊಂಬೆ ಆದಿಗಳನ್ನು ಪ್ರತೀಕ ಇಲ್ಲವೆ ಮಾಧ್ಯಮದಂತೆ ಯೋಜಿಸುತ್ತಾರೆ.

ಶಾಪ ಹೊಂದಿದ ವ್ಯಕ್ತಿ ಶಾಪಕ್ಕೆ ಈಡಾಗಲೇಬೇಕು; ಅದನ್ನು ನಿರಾಕರಿಸುವ ಸ್ವಾತಂತ್ರ್ಯ ಅವರಿಗೆ ಇರುವುದಿಲ್ಲ. ವರದ ವಿಷಯದಲ್ಲಿ ಅದನ್ನು ಸ್ವೀಕರಿಸಲೂ ಬಹುದು; ಬೇಡವೆಂದು ನಿರಾಕರಿಸಲೂಬಹುದು. ಬೇಡಿಕೊಂಡ ವರಗಳಿಂದ ಫಲ ದೊರೆಯುವುದರಿಂದ 'ಯಾಚಿತ' ವರಗಳನ್ನು ಸಾಮಾನ್ಯವಾಗಿ ಯಾರೂ ನಿರಾಕರಿಸುವುದಿಲ್ಲ. ರಾಮಾಯಣದಲ್ಲಿ ಮಾತ್ರ ಈ ಬಗ್ಗೆ ಒಂದು ಅಪವಾದವಿದೆ. 'ಇಲ' ಎಂಬಾತನು ಬೇಡಿಕೊಂಡ ವರವನ್ನು ನಂತರ ಬೇಕಿಲ್ಲವೆಂದಿದ್ದಾನೆ. ಈ ರಾಜನು ಒಂದು ವಿಶೇಷ ಪ್ರದೇಶವನ್ನು ಸೇರಿದಾಗ ಅಲ್ಲಿಯ ಸ್ಥಲಮಹಾತ್ಮ್ಯದಿಂದ 'ಸ್ತ್ರೀ' ಆಗಿ ಪರಿವರ್ತನೆ ಹೊಂದಿದನು. ಆಗ ಆತನು ಶಿವನ ಬಳಿ ಹೋಗಿ ವರವನ್ನು ಯಾಚಿಸಿದನು. ಶಿವನು “ಪುರುಷತ್ವ ಒಂದನ್ನು ಬಿಟ್ಟು ಬೇರೆ ಯಾವದನ್ನಾದರೂ ಬೇಡಿಕೊ!” ಎಂದನು. ಇಲರಾಜನಿಗೆ ಪುರುಷತ್ವವೇ ಬೇಕಿತ್ತು ಹೀಗಾಗಿ ಶಿವನು ಕೊಡಬಯಸಿದ ವರವನ್ನು ಇಲನು ನಿರಾಕರಿಸಿದನು. ರಮನು ಸಹ ಶರಭಂಗ ಋಷಿಯು ಕೊಟ್ಟ ವರವನ್ನು 'ಬೇಡ'ವೆಂದನು. ಅದೇ ರೀತಿ ಸೀತೆಯು ಅನಸೂಯೆಯಿತ್ತ ವರವನ್ನು ಸ್ವೀಕರಿಸಲಿಲ್ಲ. ಈ ಬಗೆಯಾಗಿ ಅಸ್ವೀಕೃತವಾದ ವರಗಳು ರಾಮಾಯಣದಲ್ಲಿ ಸಾಕಷ್ಟಿವೆ. ವರಗಳಲ್ಲಿ ಯಾಚಿತ ವರ ಮತ್ತು ಅಯಾಚಿತ ವರ ಎಂಬ ಎರಡು ಪ್ರಕಾರಗಳಿವೆ: ಅದರ ಉಲ್ಲೇಖವು ಮುಂದೆ ಬಂದಿದೆ. ಶಾಪಗಳನ್ನು ಯಾರೂ ಬೇಡಿಕೊಳ್ಳುವುದಿಲ್ಲ. ಹೀಗಿರುವುದರಿಂದ ಶಾಪಗಳೆಲ್ಲ 'ಅಯಾಚಿತವಿರುತ್ತವೆ. ನಮಸ್ಕರಿಸಿದ ನಂತರ ಆಶೀರ್ವದಿಸುತ್ತಾರೆ. ಇದೂ ಸಹ ಅಯಚಿತ ಸಂಗತಿ. 'ಆಶೀರ್ವಾದ ಒಂದು ಔಪಚಾರಿಕ ಭಾಗವಿರುತ್ತದೆ. ಕೆಲವೊಮ್ಮೆ ಆಶೀರ್ವಾದವನ್ನು ಬೇಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಯಾಚಿತ ಆಶೀರ್ವಾದವು ಕೂಡ ಅಯಾಚಿತವಿದ್ದಂತೆಯೇ