ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೪೪೭ ಇದ್ದರೂ ಯಯಾತಿಯು ಅವನಿಗೆ ರಾಜ್ಯವನ್ನು ಕೊಡಲು ಒಪ್ಪಲಿಲ್ಲ. ಯದುವು ರಾಜ್ಯದ ಹಾಗೂ ಸಾರ್ವಭೌಮ ಪದದ ಲೋಭವನ್ನು ತೊರೆದು ಯಯಾತಿಯಿಂದ ದೊರೆತ ಚಿಕ್ಕ ರಾಜ್ಯವೊಂದನ್ನು ಸ್ವೀಕರಿಸಿದನು. ಯದುವಿನಿಂದ ಯದುವಂಶವು ನಿರ್ಮಾಣಗೊಂಡಿತು. ಯಾದವರ ಅಂತಃಕಲಹದ ಒನಕೆ (ಮೌಸಲ) ಯುದ್ಧದಲ್ಲಿ ಪರಸ್ಪರರನ್ನು ಸಂಹರಿಸಿದ್ದರಿಂದ ಯದುವಂಶದ ಸಂಹಾರವಾಯಿತು. ೧೦೬. ಯಮ - ಋಗ್ಗೇದದಲ್ಲಿ ಈತನ ತಂದೆಯು ವಿವಸ್ವತನೆಂದೂ, ತಾಯಿಯು `ಸರಣ್ಣು' ಎಂದೂ ಇದೆ. ಹರಿವಂಶ, ಮಾರ್ಕಂಡೇಯ, ಪದ್ಯ, ವಿಷ್ಣು, ಮತ್ಯ ವರಾಹ ಮುಂತಾದ ಪುರಾಣಗಳಲ್ಲಿ ಈತನ ತಾಯಿಯ ಹೆಸರು 'ಸಂಜ್ಞಾ ಎಂದಿದೆ. ಸಂಜ್ಞಾಳಿಗೆ ಸೂರ್ಯನ ಪ್ರಖರತೆಯನ್ನು ಸಹಿಸಲು ಆಗುತ್ತಿರಲಿಲ್ಲ. ಆ ಕಾರಣ ಅವಳು ಸೂರ್ಯನ ಎದುರಿನಲ್ಲಿ ನಿಂತಾಗ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಿದ್ದಳು. ಅದ್ದರಿಂದ ನಿನಗೆ ಪ್ರಜೆಗಳನ್ನು ಸಂಹರಿಸುವ ಯಮನು ಹುಟ್ಟುವನು!” ಎಂಬ ಶಾಪವನ್ನು ಸೂರ್ಯನು ಕೊಟ್ಟನು. ಯಮ ಮತ್ತು ಯಮಿ ಇವರಿಬ್ಬರೂ ಅವಳಿ ಮಕ್ಕಳಾಗಿ ಹುಟ್ಟಿದರು. ಇವರಿಬ್ಬರಲ್ಲಿಯ ಸಂಭೋಗ ಪ್ರಾರ್ಥನೆ ಸಂವಾದ ಇವುಗಳ ಉಲ್ಲೇಖವು ಋಗೈದದಲ್ಲಿದೆ. ಮಲತಾಯಿಯಾದ ಛಾಯಾಳನ್ನು ಯಮನು ಒದ್ದ ಕಾರಣದಿಂದ ನಿನ್ನ ಬಲಗಾಲು ಕಳಚಿ ಬಿದ್ದು ಹೋಗಲಿ? ಎಂಬ ಶಾಪವನ್ನು ಛಾಯೆಯು ಯಮನಿಗೆ ಕೊಟ್ಟಳು. ಆಗ ಯಮನ ತಂದೆಯು ಉಃಶಾಪವನ್ನು ಇವನಿಗೆ ಕೊಟ್ಟನು. ಯಮನು ತಪಸ್ಸು ಮಾಡಿದಾಗ ಬ್ರಹ್ಮನು ಪಿತೃಜನರ ಸ್ವಾಮಿತ್ವವನ್ನು ಇವನಿಗೆ ವಹಿಸಿ, ಜಗತ್ತಿನಲ್ಲಿ ನಡೆಯುವ ಪಾಪ ಪುಣ್ಯಗಳ ಮೇಲ್ವಿಚಾರಕನೆಂದು ನೇಮಿಸಿದನು. ನಿರಪರಾಧಿಯಾದ ಮಾಂಡವ್ಯ ಋಷಿಂ ವಿಸಲಾಯಿತು. ಆಗ ಸಾಯುವ ಮುಂಚೆ ಆ ಋಷಿಯು “ನೀನು ಶೂದ್ರನಾಗಿ ಜನ್ಮತಾಳುವೆ!” ಎಂದು ಯಮನಿಗೆ ಶಪಿಸಿದನು. ಕುಂತಿ ಇವನನ್ನು ಉದ್ದೇಶಿಸಿ ಮಂತ್ರೋಚ್ಚಾರಣೆ ಮಾಡಿದ್ದರಿಂದ ಅವಳಿಗೆ ಯುಧಿಷ್ಠಿರನು ಹುಟ್ಟಿದನು. ಧರ್ಮ ಮತ್ತು ಯಮ ಇವರಲ್ಲಿ (ಯಕ್ಷಪ್ರಶ್ನೆಯ ಸಮಯದಲ್ಲಿ) ಸಂವಾದವು ನಡೆದಾಗ ಧರ್ಮರಾಜ-ಯುಧಿಷ್ಠಿರನು ಸಮರ್ಪಕವಾಗಿ ಉತ್ತರಿಸಿದ್ದರಿಂದ ಯಮನು ಸರೋವರದ ಬಳಿ ಮೃತರಾಗಿ ಬಿದ್ದಿದ್ದ ಉಳಿದ ಪಾಂಡವರನ್ನು ಜೀವಿತಗೊಳಿಸಿದನು. ಯಮನು ಧರ್ಮಶಾಸ್ತ್ರಕಾರನಾಗಿದ್ದನು.