ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ವರಗಳನ್ನು ಪಡೆದ ಕಾರಣ ರಾವಣನ ಅಹಂಕಾರ, ಉದ್ಧಟತನ, ಕ್ರೌರ್ಯ ಇವೆಲ್ಲ ಹೆಚ್ಚಾಗಿ ಈತನಿಗೆ ಯಾರ ಪರಿವೆಯೂ ಇಲ್ಲದಂತಾಯಿತು. ಇವನ ದುರ್ವತ್ರನೆಯು ಮಿತಿ ಮೀರಿತು. ಯಾರಿಗೂ ಅಂಜದೇ ನಿರ್ಭಯನಾಗಿದ್ದ ರಾವಣನು ಬ್ರಹ್ಮದೇವನ ಶಾಪದಿಂದ ಭಯಗೊಂಡನು. ಮಹಾಪಾರ್ಶ್ವನ ಮುಂದೆ ಈ ಮಾತನ್ನು ಅವನು ಆಡಿತೋರಿಸಿದ್ದನು. ಈ ಶಾಪದ ಭಯದಿಂದ ರಾವಣನು ಸೀತೆಯನ್ನು ಸ್ಪರ್ಶಿಸಲು ಹಿಂಜರಿಯುತ್ತಿದ್ದನು. ೧೧೧, ರುದ್ರ (ಮಹಾದೇವ, ಹರ, ಶಿವ) ರುದ್ರನು ಕೆಂಜುಗೂದಲಿನ ಜಟಾಧಾರಿಯೂ ಶತ್ರುಸಂಹಾರಕನೂ ಪರಾಕ್ರಮಿಯೂ ಆದ ದೇವತೆಯಾಗಿದ್ದಾನೆ. ಪ್ರಾಣಿಗಳ ಪ್ರಾಣಹರಣವನ್ನು ಮಾಡುವ ಈತನು ರುದ್ರನೆಂದು ಭೀತಿದಾಯಕನೆನಿಸುತ್ತಾನೆ. ಔಷಧಿವನಸ್ಪತಿಗಳಿಂದ ರೋಗರುಜಿನಗಳನ್ನು ವಾಸಿಗೊಳಿಸುವ ವಿದ್ಯೆ ರುದ್ರನಲ್ಲಿದೆ. ಬಿಲ್ಲುಬಾಣಗಳನ್ನು ಮತ್ತು ವಜ್ರಾಯುಧಗಳನ್ನು ಧರಿಸಿದ ದೇವತೆ ಎಂಬ ವರ್ಣನೆ ಋಗೈದದಲ್ಲಿದೆ. ಶತಪಥಬ್ರಾಹ್ಮಣದಲ್ಲಿ ಅಗ್ನಿದೇವತೆಗೆ ರುದ್ರನೆಂದೂ, ಶರ್ವ, ಭವ ಹಾಗೂ ಪಶುಪತಿ ಎಂದೂ ಈತನನ್ನು ಸಂಬೋಧಿಸಿದ್ದಾರೆ. ಪ್ರಜಾಪತಿಯು ದುಹಿತೃಗಮನಮಾಡಿದ ಕಾರಣ ಅವನಿಗೆ ಶಿಕ್ಷೆ ವಿಧಿಸಲು ರುದ್ರನು ಹುಟ್ಟಿದನೆಂದು ಬ್ರಹ್ಮಪುರಾಣ, ಐತರೇಯ ಹಾಗೂ ಶತಪಥಬ್ರಾಹ್ಮಣಗಳಲ್ಲಿದೆ. ವಿಷ್ಣು ಪುರಾಣದನುಸಾರ ರುದ್ರನ ಉತ್ಪತ್ತಿಯು ಬ್ರಹ್ಮದೇವನ ಹುಬ್ಬುಗಳಿಂದ ನಡೆದಿದೆ. ಮತ್ಯಪುರಾಣದಲ್ಲಿ ಈತನ ವರ್ಣನೆಯನ್ನು ಅರ್ಧನರ-ನಾರೀದೇಹಧಾರಿ ಎಂದು ಮಾಡಿದ್ದಾರೆ. ಪ್ರಜೆಗಳನ್ನು ಸೃಷ್ಟಿಸಲು ಚಿಂತಿಸುತ್ತಿದ್ದ ಬ್ರಹ್ಮದೇವನಿಗೆ ಮೊದಲು ಕೆಂಪು ವರ್ಣದ, ಅನಂತರ ನೀಲವರ್ಣದವನಾದ ರುದ್ರನು ಹುಟ್ಟಿದನೆಂದು ಸ್ಕಂದಪುರಾಣದ ಮತವಿದೆ. ಒಟ್ಟು ಹನ್ನೊಂದು ರುದ್ರರಿದ್ದು, ಬೇರೆ ಬೇರೆ ಗ್ರಂಥಗಳಲ್ಲಿ ಅವರ ಹೆಸರುಗಳು ಬೇರೆಬೇರೆಯಾಗಿವೆ. ದಕ್ಷಕನೆಯಾದ ಸತಿಯು ರುದ್ರನ ಪತಿಯಾಗಿದ್ದಳು. ಈಕೆ ನಂತರ ಹಿಮಾಲಯದ ಕನ್ಯ ಪಾರ್ವತಿಯಾಗಿ (ಉಮೆ) ರುದ್ರನೊಡನೆ ವಿವಾಹವಾದಳು. ಒಮ್ಮೆ ಬ್ರಹ್ಮದೇವನು ನಿರ್ಮಿಸಿದ ಅಪ್ಪರೆಯನ್ನು ಕಂಡು ರುದ್ರನು ಮೋಹಗೊಂಡನು. ಆಗ ಪಾರ್ವತಿಯು ಹತ್ತಿರದಲ್ಲಿ ಇದ್ದ ಕಾರಣ ಆ ಅಪ್ಸರೆಯತ್ತ ತಿರುಗಿ ನೋಡುವುದು ರುದ್ರನಿಗೆ ಸಮಸ್ಯೆಯಾಯಿತು. ಆಗ ಅವಳನ್ನು ನೋಡಲೋಸುಗ ರುದ್ರನಿಗೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಮುಖಗಳು ನಿರ್ಮಿತವಾದವು. ಈ ಸಂಗತಿ ಪಾರ್ವತಿಗೆ