ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೬ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ನಾರದನಿಂದ ತಿಳಿಯಿತು. ಆಗ ಪಾರ್ವತಿ ಈತನ ಎರಡು ಕಣ್ಣುಗಳನ್ನೂ ಮುಚ್ಚಿದಾಗ ರುದ್ರನಿಗೆ ಮೂರನೆಯ ಕಣ್ಣು ಮೂಡಿತು. ವೀರಭದ್ರನಿಂದ ರುದ್ರನು ದಕ್ಷನ ಯಜ್ಞವನ್ನು ಧ್ವಂಸಗೊಳಿಸಿದನು. ಭೈರವನಿಂದ ಬ್ರಹ್ಮದೇವನ ಐದನೆಯ ಶಿರಸ್ಸನ್ನು ಕಡಿಸಿಹಾಕಿದ ಕಾರಣ ಈತನಿಗೆ ಬ್ರಹ್ಮಹತ್ಯೆಯು ಬೆನ್ನಟ್ಟಿತು. ರುದ್ರನು ಭೂತ ಪಿಶಾಚಿಗಣಗಳ ಅಧಿಪತಿ ವೀರಭದ್ರ ಮೊದಲಾದವರು ಈತನ ಪುತ್ರರಾಗಿದ್ದಾನೆ. ಅನೇಕ ಋಷಿಗಳು ತಾಮಸಿಗಳಾಗುವದಕ್ಕೆ ರುದ್ರನೇ ಕಾರಣನಿರುತ್ತಾನೆ. ಬಾಣ, ಭಸ್ಮಾಸುರ, ರಾವಣ ಇವರ ಬಾಬತ್ತಿನಲ್ಲಿ ಈತನು ತೋರಿಸಿದ ಒಳ್ಳೆಯತನವು ಖ್ಯಾತವಿದೆ. ಗಂಧಮಾದನ ಪರ್ವತದ ಮೇಲೆ ಬೀಳುವ ಗಂಗೆಯನ್ನು ರುದ್ರನು ತನ್ನ ಶಿರದಲ್ಲಿಯ ಜಟಾಜೂಟದಲ್ಲಿ ಧರಿಸಿದನು. ಇದರಿಂದ ಗಂಗೆ ಎಂದರೆ ಈತನ ಪತ್ನಿ ಎಂತಲೂ ಎನ್ನುತ್ತಾರೆ. ಈತನ ವಾಸಸ್ಥಲದ ಬಗ್ಗೆ ಬಹಳ ಮತಭೇದಗಳಿವೆ. ಮೇರುಪರ್ವತ, ಉತ್ತರಧ್ರುವ, ಕೈಲಾಸ, ಹಿಮಾಲಯ ಎಂಬ ಅನೇಕ ಸ್ಥಳಗಳನ್ನು ಈತನ ವಸತಿಸ್ತಾನಗಳೆಂದು ನಂಬಲಾಗಿವೆ. ಈತನನ್ನು ಮಹಾದೇವ, ಹರ, ಶಿವ, ಶಂಕರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸಂತಾನವಾಗಬೇಕೆಂಬ ಇಚ್ಛೆಯಿಂದ ಬಹುಕಾಲದವರೆಗೆ ಪಾರ್ವತಿಯೊಡನೆ ಸರಸಸಲ್ಲಾಪದಲ್ಲಿ ಶಿವನು ನಿರತನಾದುದನ್ನು ಅವಲೋಕಿಸಿ, ದೇವತೆಗಳಿಗೆ ಚಿಂತೆಯುಂಟಾಯಿತು. ಆಗ ದೇವತೆಗಳು ಇವರ ರತಿಕ್ರೀಡೆಯಲ್ಲಿ ವ್ಯತ್ಯಯವನ್ನುಂಟುಮಾಡಿದ ಕಾರಣ ಪಾರ್ವತಿಯು ದೇವತೆಗಳಿಗೆ ಹಾಗೂ ಈ ದೇವತೆಗಳಿಗೆ ಅಪ್ರತ್ಯಕ್ಷವಾಗಿ ಸಹಾಯ ಮಾಡಿದ ಪೃಥ್ವಿಗೆ “ನಿಮಗೆ ಸಂತಾನವಾಗದಿರಲಿ' ಎಂಬ ಶಾಪವನ್ನು ಕೊಟ್ಟಳು. ಅನಂತರ ಮಹಾದೇವನು ಪರ್ವತದ ಮೇಲೆ ಹೋಗಿ ತಪಾಚರಣೆಯಲ್ಲಿ ತೊಡಗಿದನು. ಭಗೀರಥನ ತಪಸ್ಸಿನಿಂದ ಪ್ರಸನ್ನನಾದ ಶಿವನು ಆತನ ಇಚ್ಚೆಯಂತೆ ಆಕಾಶದಿಂದ ಧುಮುಕುವ ಗಂಗೆಯನ್ನು ಶಿರದಲ್ಲಿ ಧರಿಸಿದನು. ಸಮುದ್ರ ಮಂಥನದಿಂದ ಹೊರಬಂದ ವಿಷವನ್ನು ಕುಡಿದನು. ಹನುಮಾನ ಮತ್ತು ಮಧುದೈತ್ಯರಿಗೆ ವರಗಳನ್ನು ಕೊಟ್ಟನು. ರಾಮನಿಗೆ ಅಯೋಧ್ಯೆಯ ರಾಜ್ಯವನ್ನಾಳಲು ಹೇಳಿದನು. ಅಶ್ವಮೇಧಯಜ್ಞವನ್ನು ನೆರವೇರಿಸಲು ಹೇಳಿದನು. ಇಂದ್ರಲೋಕದಿಂದ ವಿಮಾನದಲ್ಲಿ ಬಂದ ದಶರಥನನ್ನು ಅಭಿವಾದಿಸಲು ರಾಮನಿಗೆ ಶಿವನೇ ಹೇಳಿದನು. ಒಮ್ಮೆ ಶಿವನು ಪಾರ್ವತೀ ಸಹಿತನಾಗಿ ಆಕಾಶಮಾರ್ಗದಿಂದ ಸಾಗಿದಾಗ ಸಾಲಕಟಕಟಾ ಇವಳು ತ್ಯಜಿಸಿದ ಸುಕೇಶನೆಂಬ ಬಾಲಕನನ್ನು ಕಂಡನು. ಕನಿಕರಪಟ್ಟು ಆ ಬಾಲಕನಿಗೆ ಅಮರತ್ವವನ್ನು ಕರುಣಿಸಿದನು. ಪಾರ್ವತಿಯತ್ತ ಓರೆಗಣ್ಣಿನಿಂದ ನೋಡಿದ ಕುಬೇರನಿಗೆ ಅವಳು