ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೭೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಎಂದಿದ್ದಾನೆ. ಅಂದಬಳಿಕ ಈತನು ಬ್ರಾಹ್ಮಣನಾಗಿರಲಿಕ್ಕಿಲ್ಲ. ಶ್ರಾವಣನು ಸಹ
ತಾನು ಬ್ರಾಹ್ಮಣನಲ್ಲವೆಂದು ಸ್ಪಷ್ಟವಾಗಿ ನುಡಿದಿದ್ದಾನೆ. ಶ್ರಾವಣನಿಗೆ ಬಾಣದಿಂದ
ಮರ್ಮಾಘಾತವಾಗಿದೆ ಎಂದು ತಿಳಿದ ದಶರಥನು, ತನ್ನಿಂದ ಬ್ರಹ್ಮಹತ್ಯೆ
ಯಾಯಿತೆಂದು ಭಾವಿಸಿ ಭಯಗೊಂಡಿದ್ದನು. ಆಗ ಶ್ರಾವಣನು:
ನ ದ್ವಿಜಾತಿರಹಂ ರಾಜನ್ಮಾಭೂತೇ ಮನಸೇ ವ್ಯಥಾ | (ಅಯೋಧ್ಯಾ, ೬೩-೫೦)
ಶೂದ್ರಯಾಮಸ್ಮಿ ವೈಶ್ಯೇನ ಜಾತೋ ನರವರಾಧಿಪ ‖೬೩-೫೧ ‖

'ರಾಜನೇ, ನಾನು ಬ್ರಾಹ್ಮಣನಲ್ಲ. ಬ್ರಹ್ಮಹತ್ಯೆಯ ಭಯವನ್ನು ನೀನು ಪಡಬೇಡ.
ಹೇ ರಾಜಾಧಿರಾಜನೆ, ವೈಶ್ಯನೊಬ್ಬನಿಂದ ಶೂದ್ರಸ್ತ್ರೀಯಲ್ಲಿ ಜನ್ಮ ತಾಳಿರುವೆ.'

೧೪೦. ಸಂಪಾತಿ

ಬ್ರಹ್ಮಾಂಡಪುರಾಣದಲ್ಲಿ ಈತನು ಅರುಣ ಹಾಗೂ ಗೃಧ್ರಿ ಇವರ ಮಗನೆಂದು
ಹೇಳಲಾಗಿದೆ. ವಾಯುಪುರಾಣದಲ್ಲಿ ಇವನ ತಾಯಿ ಶ್ಯೇನಿ ಎಂಬಾಕೆ
ಯಿದ್ದಾಳೆಂದಿದೆ. ಈತನು ಜಟಾಯುವಿನೊಡನೆ ನಿಶಾಕರ ಋಷಿಯ ಸೇವೆಯನ್ನು
ಮಾಡುತ್ತಿದ್ದನು. ವೃತ್ರಾಸುರನನ್ನು ವಧಿಸಿ ಸ್ವರ್ಗಕ್ಕೆ ಮರಳುತ್ತಿದ್ದ ಇಂದ್ರನೊಡನೆ
ಇವನು ಹೋರಾಡಿದನು. ಆಗ ಇಂದ್ರನು ವಜ್ರಾಘಾತದಿಂದ ಗಾಯಗೊಂಡನು.
ಇನ್ನೊಮ್ಮೆ ಜಟಾಯು ಮತ್ತು ಸಂಪಾತಿ ಇವರಲ್ಲಿ ಬಹುದೂರ ಹಾರಿಹೋಗುವ
ಸ್ಪರ್ಧೆ ನಡೆಯಿತು. ಜಟಾಯು ಬಹು ಆಯಾಸದಿಂದ ತಳಮಳಿಸುತ್ತ ಕೆಳಗೆ
ಬೀಳಹತ್ತಿದನು. ಆಗ ಸಂಪಾತಿ ತನ್ನ ರೆಕ್ಕೆಗಳನ್ನು ಹರಡಿ ಜಟಾಯುವನ್ನು
ಸಂರಕ್ಷಿಸಿದನು. ಆದರೆ ಸ್ವತಃ ಜಾಗರೂಕನಾಗಿರಲಿಲ್ಲವಾದ್ದರಿಂದ ಸೂರ್ಯನ
ಉಷ್ಣತೆಯ ಝಳದಿಂದ ಸಂಪಾತಿಯ ರೆಕ್ಕೆಗಳು ಸುಟ್ಟುಹೋಗಿ ಈತನು
ವಿಂಧ್ಯಪರ್ವತದ ದಕ್ಷಿಣಸಮುದ್ರತೀರದಲ್ಲಿದ್ದ ಜಟಾಯುವಿನ ಜನಸ್ಥಾನದಲ್ಲಿ ಬಿದ್ದನು.
ಸಂಪಾತಿ ದೇಹತ್ಯಾಗವನ್ನು ಮಾಡಲುದ್ಯುಕ್ತನಾದಾಗ ನಿಶಾಕರ ಋಷಿಯು ಈತನನ್ನು
ರಾಮನ ಕಾರ್ಯಕ್ಕೋಸುಗ ಆ ವಿಚಾರದಿಂದ ಪರಾವೃತ್ತಗೊಳಿಸಿದನು.
ಜಟಾಯುವಿನ ಮೃತ್ಯುವಿನ ವಾತೆ ಈತನಿಗೆ ವಾನರರಿಂದ ತಿಳಿಯಿತು. ಆಗ
ಸಂಪಾತಿಯು ಅಂಗದನ ಸಹಾಯದಿಂದ ಸಮುದ್ರತೀರದಲ್ಲಿ ತಮ್ಮನಾದ
ಜಟಾಯುವಿಗೆ ತರ್ಪಣ ಕೊಟ್ಟನು. ನಿಶಾಕರನ ವರದಿಂದ ಸಂಪಾತಿಗೆ ಪುನಃ
ಹೊಸ ರೆಕ್ಕೆ ಮೂಡಿದವು.