ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಕ್ತಿ ವಿಶೇಷ ೪೩. ಬಂದಿತು. ವಾಲಿಯು ಈತನ ಅಣ್ಣನಾಗಿದ್ದನು. ಈ ಅಣ್ಣತಮ್ಮಂದಿರು ಬಹುಕಾಲದ ವರೆಗೆ ಅನ್ನೋನ್ಯವಾಗಿದ್ದರು. ಒಮ್ಮೆ ದುಂದುಭಿಯ ಪುತ್ರನಾದ 'ಮಾಯಾವಿ' ಎಂಬ ರಾಕ್ಷಸನೊಡನೆ ವಾಲಿಯ ಯುದ್ಧ ನಡೆಯಿತು. ಆ ಪ್ರಸಂಗದಲ್ಲಿ ಈ ಅಣ್ಣತಮ್ಮಂದಿರಲ್ಲಿ ಅಪನಂಬಿಕೆ ಹುಟ್ಟಿಕೊಂಡಿತು. ಅದರ ಪರಿಣಾಮವಾಗಿ ವಾಲಿಯು ಸುಗ್ರೀವನ ಭಾರ್ಯೆಯಾದ ರುಮೆಯನ್ನು ಅಪಹರಿಸಿ ಸುಗ್ರೀವನನ್ನು ರಾಜ್ಯದಾಚೆ ಓಡಿಸಿದನು. ಅಂದಿನಿಂದ ಸುಗ್ರೀವನು ಋಷ್ಯಮೂಕ ಪರ್ವತದ ಮೇಲೆ ವಾಸವಿದ್ದನು. ಅಲ್ಲಿರುವಾಗ ಆತನಿಗೆ ರಾಮಲಕ್ಷ್ಮಣರ ಪ್ರಥಮ ಭೇಟಿ ಯಾಯಿತು. ಹನುಮಾನನ ಮೂಲಕ ಒಬ್ಬರಿಗೊಬ್ಬರು ಪರಿಚಿತರಾದರು. ರಾಮನೊಡನೆ ಸುಗ್ರೀವನ ಸ್ನೇಹ ಬೆಳೆಯಿತು. ಅಗ್ನಿಸಾಕ್ಷಿಯಾಗಿ ಇಬ್ಬರೂ ಮಿತ್ರತ್ವವನ್ನು ದೃಢಗೊಳಿಸಿದರು. “ಸೀತೆಯನ್ನು ಹುಡುಕಲು ರಾಮನಿಗೆ ಸಹಾಯ ಮಾಡಬೇಕು. ರಾಮನು ವಾಲಿಯನ್ನು ವಧಿಸಿ ಸುಗ್ರೀವನಿಗೆ ಆತನ ಹೆಂಡತಿಯಾದ ರುಮೆಯನ್ನು ಮತ್ತು ರಾಜ್ಯವನ್ನು ಗಳಿಸಿಕೊಡಬೇಕು' ಎಂಬುದನ್ನು ಒಪ್ಪಿಕೊಂಡನು. ವಾಲಿಯ ಪರಾಕ್ರಮದ ಮಾಹಿತಿಯನ್ನು ಸುಗ್ರೀವನು ಉದಾಹರಿಸಿ ತಿಳಿಸಿದನು. ಆಗ ರಾಮನು, ಒಂದೇ ಬಾಣದಿಂದ ಏಳು ತಾಳೆಯ ಮರಗಳನ್ನು ಭೇದಿಸಿ ತನ್ನ ಸಾಮರ್ಥ್ಯವನ್ನು ಪ್ರಕಟಿಸಿದನು. ವಾಲಿಯನ್ನು ಕೊಲ್ಲಲು ಸುಗ್ರೀವನಿಗೆ ಅನುಕೂಲ ಅವಕಾಶವನ್ನು ಮಾಡಿಕೊಟ್ಟರೂ ಸುಗ್ರೀವನು ಅದರ ಲಾಭ ಪಡೆಯಲಿಲ್ಲ. ಯುದ್ದ ಬಿಟ್ಟು ಸುಗ್ರೀವನು ಓಡಿದನು. ರಾಮನು ತನ್ನ ಬಾಣದಿಂದ ವಾಲಿಯನ್ನು ಮೂರ್ಛಿತಗೊಳಿಸಿದನು. ವಾಲಿಯ ವಧೆಯಿಂದ ಆತನ ಭಾರ್ಯೆಯಾದ ತಾರಾ ಶೋಕಸಾಗರದಲ್ಲಿ ಮುಳುಗಿ ವಿಲಾಪ ಮಾಡಹತ್ತಿದಳು. ಆಗ ಸುಗ್ರೀವನಿಗೂ ಪಶ್ಚಾತ್ತಾಪವಾಯಿತು. ರಾಮನು ಇವರನ್ನು ಸಂತೈಸಿ, ಸುಗ್ರೀವನಿಂದ ವಾಲಿಯ ಅಂತ್ಯಕಾರ್ಯಗಳನ್ನು ಮಾಡಿಸಿದನು. ವಾಲಿಯ ಅಂತಿಮ ಇಚ್ಚೆಯನುಸಾರ ಆತನ ಪುತ್ರನಾದ ಅಂಗದನನ್ನು ತನ್ನ ಸ್ವಂತ ಮಗನಂತೆ ಪರಿಪಾಲಿಸಲು ಸುಗ್ರೀವನಿಗೆ ಹೇಳಿದನು. ಅಂಗದನು ಮಾತ್ರ ಸುಗ್ರೀವನ ಬಗ್ಗೆ ಸಂದೇಹ ತಾಳಿದ್ದನು. ವಾಲಿಯ ಹೆಂಡತಿಯಾದ ತಾರಾ ಸುಗ್ರೀವನೊಡನೆ ಪತ್ನಿಯಂತೆಯೇ ಇರತೊಡಗಿದಳು. ರಾಜ್ಯವನ್ನು ಪಡೆದನಂತರ, ವಿಷಯಾಸಕ್ತನಾದ ಸುಗ್ರೀವನಿಗೆ ತನ್ನ ಕರ್ತವ್ಯದ ಅರಿವು ಉಳಿಯಲಿಲ್ಲ. ಆಗ ಹನುಮಾನನು ರಾಮನಿಗೆ ಕೊಟ್ಟ ವಚನದ ಬಗ್ಗೆ ಸುಗ್ರೀವನಿಗೆ ಜ್ಞಾಪಿಸಿಕೊಟ್ಟನು. ಸೀತೆಯ ಶೋಧಕ್ಕಾಗಿ ವಾನರ ಸೇನೆಯ ನೆರವಿನಿಂದ ಸುಗ್ರೀವನು ಬಹಳ ಪ್ರಯತ್ನಪಟ್ಟನು. ಈತನಿಗೆ ಅಲ್ಲಿನ ಪರಿಸರದ ಭೂಭಾಗದ ಮಾಹಿತಿಯೂ ಚೆನ್ನಾಗಿ ಇತ್ತು.