ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಈ ಟ... ರಾಮನಿಗೆ ಕೊಟ್ಟ ವಚನವನ್ನು ಸುಗ್ರೀವನು ಅಲಕ್ಷಿಸುತ್ತಿರುವದನ್ನು ಕಂಡ ಲಕ್ಷ್ಮಣನು ಕೂಡ ಸುಗ್ರೀವನನ್ನು ತರಾಟೆಗೆ ತೆಗೆದುಕೊಂಡನು. ಸೀತೆಯ ಪತ್ತೆ ಹಚ್ಚಿ ಹನುಮಾನನು ಮರಳಿ ಬಂದನಂತರ ಸೀತೆಯ ಬಿಡುಗಡೆಗಾಗಿ ಸುಗ್ರಿವನು ತನ್ನ ಸರ್ವಸ್ವವನ್ನು ಮುಡುಪಾಗಿಟ್ಟನು. ವಾನರರ ಪ್ರಚಂಡ ಸೈನ್ಯವನ್ನು ಒಗ್ಗೂಡಿಸಿ ರಾಮನ ನೆರವಿಗೆ ಮುಂದಾದನು. ವಿಭೀಷಣನು ರಾಮನ ಆಸರೆಯನ್ನು ಕೋರಿ ಬಂದಾಗ ಆತನಿಗೆ ಆಶ್ರಯ ಕೊಡಬಾರದೆಂದು ಸುಗ್ರೀವನು ವಿನಂತಿಸಿದನು. ವಿಭೀಷಣನ ಬಗ್ಗೆ ಸುಗ್ರೀವನ ಮನಸ್ಸಿನಲ್ಲಿ ಸಂದೇಹವಿದ್ದುದೇ ಈ ವಿನಂತಿಗೆ ಕಾರಣವಾಗಿತ್ತು. ರಾವಣನು ಕಣ್ಣಿಗೆ ಬೀಳುತ್ತಲೇ ಸುಗ್ರೀವನು ಹಿಂದುಮುಂದಿನ ವಿಚಾರ ಮಾಡದೇ, ಆತನ ಮೇಲೆ ಏರಿಹೋಗಿ ರಾವಣನ ಮುಕುಟವನ್ನು ಕೆಳಗೆ ಕೆಡವಿದನು. ರಾವಣನನ್ನು ಚೆನ್ನಾಗಿ ತೊಂದರೆಗೀಡುಮಾಡಿದನು. ರಾಮಲಕ್ಷಣರು ಮೂರ್ಛ ಹೊಂದಿದಾಗ ಭಯಗೊಂಡು ದಿಕ್ಕಾಪಾಲಾಗಿ ಓಡುತ್ತಿದ್ದ ವಾನರರ ಸೇನೆಗೆ ಧೈರ್ಯ ಹೇಳಿ ಹುರುಪನ್ನು ತುಂಬಿದನು. ಯುದ್ಧದಲ್ಲಿ ರಾವಣಕುಂಭಕರ್ಣರ ಶರಗಳಿಂದ ಸುಗ್ರೀವನು ಮೂರ್ಛಗೊಂಡನು. ಕುಂಭ ಕರ್ಣನಿಂದ ಈತನು ಸೆರೆಹಿಡಿಯಲ್ಪಟ್ಟಿದ್ದನು. ಆದರೆ ಸುಗ್ರೀವನು ಅಲ್ಲಿಂದ ಪಾರಾದನು. ಕುಂಭಕರ್ಣನ ವಧೆಯಾದನಂತರ ಸುಗ್ರೀವನ ಹೇಳಿಕೆಯಿಂದ ಹನುಮಾನನು ಲಂಕೆಗೆ ಬೆಂಕಿಯಿಟ್ಟನು. ಉರಿಯುತ್ತಿದ್ದ ಲಂಕೆಯಿಂದ ತಲ್ಲಣಿಸಿ ಓಡುತ್ತಿದ್ದ ರಾಕ್ಷಸರು ಆಚೆ ಓಡಿಹೋಗದಂತೆ ವಾನರರಿಂದ ಎಲ್ಲ ದ್ವಾರಗಳನ್ನು ಮುಚ್ಚಿಸಿದನು. ಕುಂಭಕರ್ಣನ ಮಗನಾದ ಕುಂಭನನ್ನು ಈತನು ವಧಿಸಿದನು. ವಿರೂಪಾಕ್ಷನನ್ನು ಕೊಂದನು. ಮಹೋದರನ ಶಿರಚ್ಛೇದವನ್ನು ಮಾಡಿದನು. ರಾವಣನ ವಧೆಯಾದ ನಂತರ ಸುಗ್ರೀವನು ರಾಮನೊಡನೆ ಅಯೋಧ್ಯೆಗೆ ಹೋದನು. ರಾಜ್ಯಾಭಿಷೇಕ ಸಮಯದಲ್ಲಿ ರಾಮನು ಈತನಿಗೆ ಯೋಗ್ಯ ಸತ್ಕಾರಗಳನ್ನು ಸಲ್ಲಿಸಿ ಕಿಷ್ಕಂಧೆಗೆ ಕಳುಹಿಕೊಟ್ಟನು. ರಾಮನು ಅನೇಕ ವರ್ಷಗಳ ಕಾಲ ರಾಜ್ಯವನ್ನಾಳಿ ನಿಜಧಾಮಕ್ಕೆ ತೆರಳುತ್ತಿದ್ದಾಗ ಸುಗ್ರೀವನು ಕೂಡ ತನ್ನ ರಾಜ್ಯವನ್ನು ಅಂಗದನಿಗೆ ಒಪ್ಪಿಸಿ ರಾಮನೊಡನೆ ತಾನೂ ಸೂರ್ಯಮಂಡಲವನ್ನು ಪ್ರವೇಶಿಸಿದನು. ೧೪೯. ಸುತೀಕ್ಷ್ಯ ಈತನು ಅಗಸ್ಯನ ಒಬ್ಬ ಶಿಷ್ಯನಾಗಿದ್ದನು. ರಾಮಕುಂಡದಲ್ಲಿ ತಪವನ್ನಾಚರಿಸಿ ತ್ರಿಲೋಕಸಂಚಾರವನ್ನು ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡನು. ಇವನ ಆಶ್ರಮದಲ್ಲಿ ರಾಮನು ಎರಡು ಸಲ ಉಳಿದುಕೊಂಡಿದ್ದನು. ಶರಭಂಗ ಋಷಿಯ