ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೮೫

ಹೇಳಿಕೆಯಂತೆ ರಾಮನು ಈ ಮುನಿಯನ್ನು ಭೇಟಿಯಾದನು. ರಾಮನು ತನ್ನ
ಪರಿಚಯವನ್ನು ಮಾಡಿಕೊಟ್ಟ ನಂತರ ಸುತೀಕ್ಷ್ಣನು ರಾಮನನ್ನು ಆಲಿಂಗಿಸಿ
ಸ್ವಾಗತಿಸಿದನು. ಅಗಸ್ತ್ಯ ಮುನಿಯ ಆಶ್ರಮವಿರುವ ಸ್ಥಳದ ಮಾಹಿತಿಯನ್ನು
ರಾಮನಿಗೆ ಅರುಹಿದನು.


೧೫೦. ಸುಂದ-ಉಪಸುಂದ

ವಾಲ್ಮೀಕಿ ರಾಮಾಯಣದಲ್ಲಿ ಸುಂದೋಪಸುಂದರ ಪಿತನ ಹೆಸರು ಜಂಭ
ಎಂದು ಕೊಡಲಾಗಿದೆ. ಇವರು ಯಕ್ಷರಾಗಿದ್ದರು. ಅಗಸ್ತ್ಯನ ಶಾಪದಿಂದ
ರಾಕ್ಷಸರಾದರು. ಮಹಾಭಾರತದಲ್ಲಿ ಸುಂದೋಪಸುಂದರು ಹಿರಣ್ಯ ಕಶಿಪುವಿನ
ವಂಶಜನಾದ ನಿಕುಂಭ ಎಂಬ ದೈತ್ಯನ ಪುತ್ರರಾಗಿದ್ದರೆಂಬ ಉಲ್ಲೇಖವಿದೆ. ಇವರು
ವಿಂಧ್ಯಪರ್ವತದಲ್ಲಿ ಉಗ್ರತಪಸ್ಸನ್ನಾಚರಿಸಿ ಬ್ರಹ್ಮದೇವನನ್ನು ಪ್ರಸನ್ನಗೊಳಿಸಿದರು.
ಬ್ರಹ್ಮದೇವನು ಇವರಿಗೆ ಮಾಯಾವಿದ್ಯೆಯನ್ನು, ಅಸ್ತ್ರಗಳನ್ನು, ತುಲನೆಯಿಲ್ಲದಷ್ಟು
ಶಕ್ತಿಯನ್ನು ಇಷ್ಟವಿದ್ದ ರೂಪವನ್ನು ತಾಳುವ ಕ್ಷಮತೆಯನ್ನು, ಇದಲ್ಲದೇ
ಒಬ್ಬರನ್ನೊಬ್ಬರು ಕೊಲ್ಲದಿದ್ದರೆ ಇಬ್ಬರೂ ಅಮರರಾಗಿರುವ ವರವನ್ನು ಕೊಟ್ಟನು.
ಹೀಗೆ ಇದ್ದುದರಿಂದ ಯಾರೂ ಇವರನ್ನು ಕೊಲ್ಲುವಂತಿರಲಿಲ್ಲ. ವರವನ್ನು
ದೊರಕಿಸಿಕೊಂಡ ನಂತರ ಇವರಿಬ್ಬರೂ ಯಜ್ಞಗಳಲ್ಲಿ ವಿಘ್ನಗಳನ್ನುಂಟು
ಮಾಡಹತ್ತಿದರು. ಋಷಿಗಳನ್ನು ನಿಶ್ಚಿಂತೆಯಿಂದ ಇರಲು ಬಿಡುತ್ತಿರಲಿಲ್ಲ. ಇವರ
ಕಾಟ ಅತಿ ಹೆಚ್ಚಾದ ಬಗ್ಗೆ ಬ್ರಹ್ಮದೇವನ ಬಳಿಗೆ ದೂರುಬಂದಿತು. ಆಗ ಸುಂದೋಪ
ಸುಂದರಲ್ಲಿ ಮುನಿಸುಂಟಾಗಬೇಕೆಂದು ಬ್ರಹ್ಮದೇವನು ಓರ್ವ ತುಂಬಾ
ಲಾವಣ್ಯವತಿಯಾದ ಸ್ತ್ರೀಯನ್ನು ನಿರ್ಮಿಸಲು ವಿಶ್ವಕರ್ಮನಿಗೆ ಹೇಳಿದರು.
ಸೃಷ್ಟಿಯಲ್ಲಿಯ ಸೌಂದರ್ಯದ ಕಣಕಣಗಳೆಲ್ಲವನ್ನೂ ಒಟ್ಟುಗೂಡಿಸಿ, ವಿಶ್ವಕರ್ಮನು
ಓರ್ವ ಮನಸೂರೆಗೊಳ್ಳುವ ಲಾವಣ್ಯವತಿಯನ್ನು ನಿರ್ಮಿಸಿದನು. ಇವಳೇ
ತಿಲೋತ್ತಮಾ. ಇವಳ ಸೌಂದರ್ಯಕ್ಕೆ ಮರುಳಾದ ಸುಂದೋಪ ಸುಂದರು ಇವಳ
ಪ್ರಾಪ್ತಿಗಾಗಿ ತಮ್ಮತಮ್ಮಲ್ಲಿಯೇ ಕಾದಾಡಿ ಕೊನೆಗೆ ಇಬ್ಬರೂ ಮಡಿದರು.
ತಾರಕಾ ಎಂಬಾಕೆಯು ಸುಂದನ ಪತ್ನಿಯಾಗಿದ್ದಳು.


೧೫೧. ಸುಮತಿ

ಇವಳು ವಿದರ್ಭದ ರಾಜಕನ್ಯೆ; ಸಗರರಾಜನ ಎರಡನೆಯ ಹೆಂಡತಿ.
ಈಕೆಗೆ ಔರ್ವನ ಕೃಪೆಯಿಂದ ಅರವತ್ತುಸಾವಿರ ಮಕ್ಕಳಾದರೆಂದು ಪದ್ಮಪುರಾಣ