ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೨೫. ಸಿದ್ದಾಶ್ರಮ ಮೊಗಲ್ ಸರಾಯ್ ಮತ್ತು ಪಾಟಣಾ ಈ ನಗರಗಳ ಸಂಪರ್ಕದ ರೈಲು ಮಾರ್ಗದಲ್ಲಿ ಬಕ್ಸರ್ ಎಂಬ ಒಂದು ನಿಲ್ದಾಣವಿದೆ. ತ್ರೇತಾಯುಗದಲ್ಲಿ ಈ ಸ್ಥಳವು ಸಿದ್ಧಾಶ್ರಮವೆಂದು ಪ್ರಸಿದ್ಧವಿತ್ತು. ಪೌರಾಣಿಕ ಕಾಲದಲ್ಲಿ ಇದಕ್ಕೆ ತಪೋವನ ವೆಂದೆನ್ನುತ್ತಿದ್ದರು. ಮಹಾತಪಸ್ವಿಯಾದ ವಿಷ್ಣು ಈ ಸ್ಥಳದಲ್ಲಿ ತಪೋಬಲದಿಂದ ಸಿದ್ದಿ ಪಡೆದ ಕಾರಣ ಇದು ಸಿದ್ದಾಶ್ರಮವೆಂದಾಯಿತು. ವಿಶ್ವಾಮಿತ್ರನು ಇಲ್ಲಿಯೇ ಇರುತ್ತಿದ್ದನು. ಇದು ಥೋರಾ ನದಿಯ ದಡದಲ್ಲಿದೆ. ಇದು ವಾಮನನ ನಿವಾಸ ಸ್ಥಾನವಾಗಿತ್ತು. ೨೬. ಹಿಮವಾನ ಭಾರತದ ಉತ್ತರ ಮೇರೆಯಲ್ಲಿ ಪ್ರಸಿದ್ಧವಾಗಿರುವ ಹಿಮಾಲಯಕ್ಕೆ ಪೌರಾಣಿಕ ಕಾಲದ ಹೆಸರು. ಇದಲ್ಲದೇ ಹಿಮವತ್, ಹಿಮಾಚಲ, ಹಿಮಾದಿ, ಹೈಮವತ ಮುಂತಾದ ಹೆಸರುಗಳೂ ಬೇರೆ ಬೇರೆ ಗ್ರಂಥಗಳಲ್ಲಿದೆ. ಇದರ ಎತ್ತರ ಹತ್ತು ಸಾವಿರ ಯೋಜನಗಳಷ್ಟಿದೆ. ಇದು ಇಲಾವೃತ್ತದ ದಕ್ಷಿಣಕ್ಕೆ ಪೂರ್ವ-ಪಶ್ಚಿಮವಾಗಿ ಹಬ್ಬಿಕೊಂಡಿದೆ. ಇದರ ವಿಸ್ತಾರವು ಪೂರ್ವಸಮುದ್ರ ದಿಂದ ಪಶ್ಚಿಮಸಮುದ್ರದವರೆಗೆ ಇದೆ ಎಂದು ಮಾರ್ಕಂಡೇಯ ಪುರಾಣ ದಲ್ಲಿದೆ. ಕೂರ್ಮ ಪುರಾಣದಲ್ಲಿ ಇದರ ಉದ್ದಳತೆಯು ಒಂದು ಸಾವಿರದ ಎಂಬತ್ತು ಯೋಜನವೆಂದು ಬರೆದಿದೆ. ಋಗೈದ, ಅಥರ್ವವೇದ, ಯಜುರ್ವೇದ, ಐತರೇಯ ಬ್ರಾಹ್ಮಣ ಇತ್ಯಾದಿ ಗ್ರಂಥಗಳಲ್ಲಿ ಇದರ ಉಲ್ಲೇಖ ಕಂಡುಬರುತ್ತದೆ. ತೈತ್ತರೀಯ ಶತಪಥಬ್ರಾಹ್ಮಣ, ಪ್ರಾಣಿನಿಯ ಅಷ್ಟಾಧ್ಯಾಯಿ ಈ ಗ್ರಂಥಗಳಲ್ಲೂ ಹಿಮಾಲಯ ಪರ್ವತದ ಮಾಹಿತಿ ದೊರಕುತ್ತದೆ. `ಸ್ಥಾವರಾಣಾಂ ಹಿಮಾಲಯಃ' ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ನುಡಿದಿದ್ದಾನೆ. ಕಾಳಿದಾಸನ ರಘುವಂಶದಲ್ಲಿ ಹಿಮಾಲಯದ ಬಗ್ಗೆ ಬಹು ಸುಂದರವಾದ ವರ್ಣನೆಯಿದೆ. ಅನೇಕಾನೇಕ ಋಷಿಗಳು ಈ ಪರ್ವತದ ಮೇಲೆ ತಮ್ಮ ತಮ್ಮ ಆಶ್ರಮಗಳನ್ನು ಕಟ್ಟಿಕೊಂಡಿದ್ದರು. ಗೌರೀ ಶಂಕರ, ಕಾಂಚನಗಂಗಾ, ಧವಲಗಿರಿ ಎಂಬ ಈ ಪರ್ವತದ ಉತ್ತುಂಗಶಿಖರಗಳು ಹಾಗು ಗಂಗಾ, ಯಮುನಾ, ಕಾಲಿ, ಗಂಡಕಿ, ಕೋಸಿ, ಬ್ರಹ್ಮಪುತ್ರಾ ಸರಿಯೂ, ಝಲಮ್ ಎಂಬ ನದಿಗಳ ಉಗಮ ಸ್ಥಾನವಾಗಿದೆ. ಹಿಮಾಲಯದ ಅರಣ್ಯದಲ್ಲಿ ಅನೇಕ ಆಯುರ್ವೇದ ಔಷಧೀಯ ವನಸ್ಪತಿಗಳು ಸಿಗುತ್ತವೆ. ಕೇದಾರನಾಥ, ಪಶುಪತಿನಾಥ, ಬದರೀ