ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೫೩

ಆಗಲಿಲ್ಲ; ಬದಲಾಗಿ ಆತನ ವಧೆಯಾಯಿತು. ವರವಾಗಿ ದೊರೆತ ತ್ರಿಶೂಲವು, ಸದಾವಕಾಶವೂ ತನ್ನ ವಂಶದಲ್ಲಿಯೇ ಇರಬೇಕೆಂದು 'ಮಧು' ದೈತ್ಯನು ರುದ್ರನಿಗೆ ಪ್ರಾರ್ಥಿಸಿದ್ದನು. ರುದ್ರನು 'ಹೀಗೆ ಸಾಧ್ಯವಿಲ್ಲ!'ವೆಂದು ತುಸುಮಟ್ಟಿಗೆ ಆತನ ಬೇಡಿಕೆಯನ್ನು ಮನ್ನಿಸಿದ್ದನು. 'ಅಯಾಚಿತ' ವರಗಳಲ್ಲಿ ಯಾಚಕನಿಗೆ ಇಚ್ಛೆಯನ್ನು ವ್ಯಕ್ತಗೊಳಿಸುವ ಅವಕಾಶವೇ ಇರುವುದಿಲ್ಲ; ವರದಾತನ ಇಚ್ಛೆಯೇ ಪ್ರಮಾಣವಾಗಿರುತ್ತದೆ. ಕೊಟ್ಟ ವರವನ್ನು ಸ್ವೀಕರಿಸುವ ಇಲ್ಲವೇ ನಿರಾಕರಿಸುವುದು. ವರ ಪಡೆಯುವವರಿಗೆ ಸೇರಿದ್ದು; ವರವನ್ನು ಒಮ್ಮೊಮ್ಮೆ ಬೇಡವೆನ್ನ ಲಾಗಿದೆ. ವರಗಳನ್ನು ಸ್ವೀಕೃತ ವರಗಳು, ಅಸ್ವೀಕೃತ ವರಗಳೆಂದು ವಿಂಗಡಿಸಬಹುದು. ಅಸ್ವೀಕೃತ ವರಗಳು ಕೇವಲ ಅಯಾಚಿತ ವರಗಳಲ್ಲಿರುವುದು ಸಾಧ್ಯ; ಯಾಚಿತ ವರವೆಂದ ಬಳಿಕ ಅದರ ಸ್ವೀಕಾರ ನಿಶ್ಚಿತವಿರುತ್ತದೆ. ಅನಸೂಯೆಯು ಕೊಡಬಯಸಿದ ವರಗಳನ್ನು ಸೀತೆಯು ಸ್ವೀಕರಿಸಲಿಲ್ಲ. ಶರಭಂಗ ಋಷಿಯು ತನ್ನ ತಪೋಬಲದಿಂದ ಸಂಪಾದಿಸಿದ ಬ್ರಹ್ಮಲೋಕ, ಸ್ವರ್ಗಲೋಕಗಳನ್ನು, ರಾಮನಿಗೆ ಕೊಡಬಯಸಿದಾಗ ರಾಮನು 'ನಾನೇ ತಪಶ್ಚರ್ಯೆ ಮಾಡಿ ಅವನ್ನೆಲ್ಲ ಗಳಿಸುವೆ” ಎಂದು ಹೇಳಿ ವಿನಯದಿಂದ ವರವನ್ನು ಬೇಡವೆಂದನು. ಶಾಪವನ್ನು ಎಂದೂ ನಿರಾಕರಿಸುವಂತಿಲ್ಲ. ಹೀಗಿರುವುದರಿಂದ ಎಲ್ಲ ಶಾಪಗಳೂ ಸ್ವೀಕೃತವಾಗಲೇಬೇಕು. ಶಾಪವನ್ನು ಕೊಡಬೇಕೆಂಬ ವಿಚಾರವು ಮನಸ್ಸಿನಲ್ಲಿ ಬಂದರೂ ಅದನ್ನು ತಡೆಹಿಡಿದ ಉದಾಹರಣೆಗಳಿವೆ. ಈ ರೀತಿ ಕೊಡದೇ ತಡೆಹಿಡಿದ ವರಗಳ ಉದಾಹರಣೆಗಳಿಲ್ಲ. ವರಗಳನ್ನು ಕೊಡುವುದರಿಂದ ತಪೋಬಲವು ಕಡಿಮೆಯಾಗದು; ಪುಣ್ಯಕ್ಷಯವೂ ಆಗದು. ಮನಸ್ಸಿನಲ್ಲಿ ಮೂಡಿಬಂದ ವರದ ವಿಚಾರವನ್ನು ಪ್ರಕಟಿಸಿದಲ್ಲಿ ಯಾವ ಅನಿಷ್ಟ ಪರಿಣಾಮಗಳೂ ಆಗುವುದಿಲ್ಲ. ಹೀಗಿದ್ದರೂ ಒಮ್ಮೊಮ್ಮೆ ವರವನ್ನು ಕೊಟ್ಟ ಬಗ್ಗೆ ಇಲ್ಲವೇ ಬೇಡಿದ ಬಗ್ಗೆ ಪಶ್ಚಾತ್ತಾಪವಾಗುವುದುಂಟು. ಮರ್ಯಾದಿತ ಸ್ವರೂಪದ ಅಮರತ್ವದ ವರವನ್ನು ರಾವಣನಿಗೆ ಕೊಟ್ಟು ಬ್ರಹ್ಮದೇವನು ಸಮಸ್ಯೆಯನ್ನು ಎದುರಿಸಬೇಕಾಯಿತು; ದೀರ್ಘನಿದ್ರೆಯ ವರವನ್ನು ಬೇಡಿಕೊಂಡ ಬಗ್ಗೆ ಕುಂಭ ಕರ್ಣನಿಗೆ ನಂತರ ಪಶ್ಚಾತ್ತಾಪವಾಯಿತು.

ವರವನ್ನು ಕೊಡಬೇಕೆಂಬ ಉತ್ಕಟ ಇಚ್ಛೆಗಿಂತ ಅದರ ಉಚ್ಚಾರಣೆಯಲ್ಲಿಯ ಅಭಿವ್ಯಕ್ತಿಯು ತುಂಬಾ ಮಹತ್ವದ್ದಿರುತ್ತದೆ. Blessing by Words is more powerful than blessing by thought. ಮರಣೋನ್ಮುಖನಾದವನ ನುಡಿಗಳು ತುಂಬಾ ಪರಿಣಾಮಕಾರಿಯಾಗಿರುತ್ತವೆಂಬ ನಂಬಿಕೆ ಇದೆ. ಕೊನೆಯ ಗಳಿಗೆಯಲ್ಲಿ