ಪುಟ:ವಿದ್ಯಾರ್ಥಿ ಕರಭೂಷಣ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ ಕರಭೂಷಣ ಚ್ಛಿನ್ನವಾಗಿ ಮಾಡುವ ಶಕ್ತಿಯನ್ನು ಸಂಪಾದಿಸಿಕೊಳ್ಳಬೇಕು, ಪ್ರಪಂಚ ದಲ್ಲಿ ಅನೇಕರು ಬಹಳ ಚಂಚಲವಾದ ಬುದ್ಧಿಯುಳ್ಳವರಾಗಿರುವರು. ಇವರು, ಯಾವುದಾದರೊಂದು ಕೆಲಸವನ್ನು ಯಾರಾದರೂ ಮಾಡಿ ಅದರ ಫಲವನ್ನು ಹೊಂದಿದರೆಂದು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತಿಳಿದಕೂಡಲೆ, ತಾವೂ ಆ ಕೆಲಸವನ್ನು ಉಪಕ್ರಮಿ ಸುವರು, ಕೆಲವು ದಿವಸ ಕೆಲಸವನ್ನೂ ಮಾಡಿ ಬೇಸರಪಟ್ಟು, ಆಮೇಲೆ ಆ ಕೆಲಸಕ್ಕೆ ತಾವು ಅನರ್ಹರೆಂದು ತಿಳಿದುಕೊಂಡು, ಎಮ್ಮ ಗಳಿಗೆ ಭಯಪಟ್ಟು ಕೆಲಸವನ್ನು ಬಿಟ್ಟು, ಅದುವರೆಗೂ ತಾವು ಮಾಡಿದ ವ್ಯವಸಾಯವೆಲ್ಲ ವ್ಯರ್ಥವಾಗು ವಂತೆ ಮಾಡಿಕೊಳ್ಳುವರು. ಅನೇಕ ಪಂಡಿತರು, ಅನೇಕ ಶಾನ್ಯಗಳ ವಿಷಯ ದಲ್ಲಿ ಯ, ಉದ್ಯೋಗಗಳ ವಿಷಯದಲ್ಲಿ ಯ, ಲೋಕ ವ್ಯವಹಾರದ ವಿಷಯದಲ್ಲಿಯೂ, ಇಹಪರಸಾಧನಗಳಿಗೆ ಅತ್ಯಂತ ಅನುಕೂಲವಾದ ಧರ್ಮದ ವಿಚಾರದಲ್ಲಿಯೂ, ಅನೇಕಗ್ರಂಧಗಳನ್ನು ಬರೆದಿರುತ್ತಾರೆ ಅವು ಗಳನ್ನು ವ್ಯಾಸಂಗಮಾಡಿ, ಬಹುಜನಗಳು ಅತ್ಯಂತ ವಿಕಾಸವಾದ ಬುದ್ಧಿ ಯುಳ್ಳವರಾಗಿ ಪರಿಣಮಿಸಿರುತ್ತಾರೆ. ಆ ಗ್ರಂಥಗಳ ಪ್ರಯೋಜನವನ್ನು ಹೊಂದುವುದಕ್ಕೆ, ಆ ಗ್ರಂಧಗಳನ್ನು ವ್ಯಸಂಗಮಾಡಿದವರು, ಅವುಗಳನ್ನ ವಲೋಕಿಸುವುದಕ್ಕೂ ಅವುಗಳು ಸ್ವಾಧೀನವಾಗುವವರೆಗೂ ಚಿಂತಿಸುವು ದಕ್ಕೂ ಅನೇಕಾವೃತ್ತಿ ಚಿಂತಿಸಿ ಸ್ವಾಧೀನಪಡಿಸಿಕೊಳ್ಳುವುದಕ್ಕೂ ಎಷ್ಟು ವ್ಯವಸಾಯಮಾಡಿರುವರೋ-ಅಷ್ಟು ವ್ಯವಸಾಯಮಾಡುವುದಕ್ಕೆ ಶಕ್ತಿ ಯಿಲ್ಲದೆ, ಉಪರಿಪ್ಲವವಾಗಿ ವ್ಯಾಸಂಗಮಾಡಿ, ಅದರ ತತ್ವಾರ್ಧವನ್ನು ತಿಳಿದುಕೊಳ್ಳದಿರತಕ್ಕ ವರು ಅನೇಕರಿರುವರು. ಅಂಧವರಿಗೆ, ಲೋಕೋಕ್ಕೆ