ಪುಟ:ವಿದ್ಯಾರ್ಥಿ ಕರಭೂಷಣ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೯೭ 4 * ವಾದ ಗ್ರಂಥಗಳ ಲೋಕೋತ್ತರವಾದ ಪ್ರಯೋಜನಗಳು ಎಂದಿಗೂ ದೊರೆಯುವುದಿಲ್ಲ, ಯಾವ ಕೆಲಸವನ್ನು "ಣವಾಗಿ ಮಾಡಬೇಕಾ ದಾಗ, ಏಕಾಗ್ರಚಿತ್ತದಿಂದ ತಪಸ್ಸು ಮಾಡಿದ ಹೊರತು ಆಗುವುದಿಲ್ಲ. ಪ್ರತಿಯೊಂದು ಕೆಲಸವೂ, ಉಪಕ್ರಮದಲ್ಲಿ ಬಹಳ ಬೇಸರಿಕೆಯನ್ನು ಹುಟ್ಟಿಸು ವದು, ಅತ್ಯಂತ ಸ್ಟೈಲ್ಯವೂ ಸಾಹಸವೂ ಯಾರಿಗೆ ಇರುವುವೋ, ಅವರು ಮಾತ್ರ ಉದ್ಯೋಗದ ಆರಂಭದಲ್ಲಿ ಉಂಟಾಗತಕ್ಕ ಜುಗುಪ್ಪೆಯನ್ನೂ ಬೇಸರಿಕೆಯನ್ನೂ ಗೆಲ್ಲುವರು. ಇವುಗಳನ್ನು ಗೆದ್ದ ಕೂಡಲೆ, ಉದ್ಯೋಗದ ಫಲವು ಹಸ್ತಗತವಾಗುವುದು ಲೋಕೋತ್ತರವಾದ ಉದ್ಯೋಗವನ್ನು ಉಪಕ್ರಮಿಸತಕ್ಕವರು, ಚಂಚಲಚಿತ್ತರಾಗಿರಕೂಡದು ; ತಾವು ಉಪಕ್ರ ಮಿಸಬೇಕೆಂದು ಯೋಚಿಸಿರುವ ಕೆಲಸಗಳ ಪೂರ್ವಾಪರಗಳನ್ನು ಚೆನ್ನಾಗಿ ಪರಾಲೋಚಿಸಬೇಕು, ಫಲಪ್ರಾಪ್ತಿಯಾಗುವವರೆಗೂ, ಎಷ್ಟು ವಿಘ್ನ ಗಳು ಬಂದಾಗ್ಯೂ, ಸೈಯ್ಯದಿಂದ ಹಿಡಿದ ಕೆಲಸವನ್ನು ಮಾಡುವುದು ಸಾಧ್ಯವೇ ಅಲ್ಲವೇ ಎಂದು ಪರಾಲೋಚಿಸಿ, ನಿಷ್ಕರ್ಷೆಮಾಡಬೇಕು ; ಅನಂತರ, ಅದನ್ನು ಸಕ್ರಮಿಸಬೇಕು, ಉಪಕ್ರಮಿಸಿದಮೇಲೆ ಎಷ್ಟು ಪರಂ ಪರೆಗಳು ಎಷ್ಟು ಒಂದಾಗೂ ಲಕ್ಷ್ಯಮಾಡದೆ, ಫಲಪ್ರಾಪ್ತಿಯಾಗುವವ ರೆಗೂ ಕೆಲಸಮಾಡಬೇಕು, ಹಾಗೆ ಮಾಡುವುದು ಅಸಾಧ್ಯವಾದರೆ, ಆ ಪ್ರಯತ್ನದಲ್ಲಿ ದೇಹವನ್ನಾದರೂ ಬಿಡಬೇಕು, ಈ ರೀತಿಯಲ್ಲಿ ಸಂಕಲ್ಪ ಮಾಡಿಕೊಂಡು ಮನಸ್ಸಿನ ಚಾಂಚಲ್ಯಕ್ಕೆ ಅವಕಾಶಕೊಡದೆ ಯಾರು ಕೆಲಸಮಾಡುವರೋ, ಅವರು ಜಗದೇಕ ವೀರರಾಗುವರು. ಅಲೆಗ್ವಾಂಡರ್ ನೆಪೋಲಿರ್ಯ ಮೊದಲಾದವರು, ಈ ರೀತಿಯಾದ ಸ್ಥಿರಸಂಕಲ್ಪವುಳ್ಳ 13