೧೦೦ ೧೦೦ ವಿದ್ಯಾರ್ಥಿ ಕರಭೂಷಣ ಪ್ರಾಯಕವಾಗಿ ಅಲಸರು, ಆಲಸ್ಯದಿಂದ ಅಮೃತವೂ ವಿಷವಾಗುವುದೆಂಬ ವಿಷಯವು ಇವರಿಗೆ ತಿಳಿದಿದ್ದಾಗ್ಯೂ, ಅದನ್ನು ಆಚರಣೆಯಲ್ಲಿಟ್ಟು ಕೊಳ್ಳುವ ಶಕ್ತಿಯಿವರಿಗಿರುವುದಿಲ್ಲ. ವಿಹಾರಗಳಿಗೆ ಮನಸ್ಸು ಕೊಟ್ಟು, ಮಾಡಬೇಕಾದ ಕೆಲಸಗಳನ್ನು ನಾಳೆಮಾಡೋಣವೆಂದು ಹೇಳಿಕೊಳ್ಳುತ ಕಾಲಹರಣಮಾಡುತ್ತಾರೆ. ಒಂದಾವೃತ್ತಿ ನಾಳೆ ಮಾಡೋಣವೆಂದು ಆಲಸ್ಯ ಮಾಡಿದರೆ, ಅನೇಕರಿಗೆ ಅನುಕೂಲವಾದ ನಾಳೆ ಬರುವುದೇ ಅಪೂರ್ವ ವಾಗುತ್ತದೆ ; ಪ್ರಾಯಕವಾಗಿ ಬರುವುದೇ ಇಲ್ಲ, ಅವರು ಭಗ್ನ ಮನೋ ರಧರಾಗುವುದೇ ನಿಜ. ಕ್ಷೇಶವನ್ನುಂಟುಮಾಡತಕ್ಕ ಕರ್ತವ್ಯವನ್ನು ಪ್ರಧ. ಮತಃ ಮಾಡಿ, ಆ ಕೆಲಸ ಪೂರಯಿ ಸಿದಮೇಲೆ ವಿಹಾರಗಳಲ್ಲಿ ಆಸಕ್ತರಾ ಗುವುದುತ್ತಮವು, ಹಾಗೆ ಕೆಲಸಮಾಡತಕ್ಕವರೇ ಕೃತಕೃತ್ಯರಾಗುವರು. ಹಾಗೆ ಮಾಡದವರಿಗೆ ಇಷ್ಟ ಸಿದ್ಧಿಯೇ ಆಗುವುದಿಲ್ಲ, ಪ್ರತಿಯೊಬ್ಬರೂ, ತಮ್ಮ ಕಾಲವನ್ನು ವಿನಿಯೋಗಿಸುವುದಕ್ಕೆ ಪಟ್ಟಿಯನ್ನು ಹಾಕಿ ಕೊಳ್ಳ ಬೇಕು, ಆ ಪಟ್ಟಿಯ ಪ್ರಕಾರ, ಯಾವ ಕಾಲದಲ್ಲಿ ಯಾವ ಕೆಲಸ ಮಾಡ ಲ್ಪಡಬೇಕೆಂದು ಗೊತ್ತುಮಾಡಲ್ಪಟ್ಟಿರುವುದೋ, ಆ ಕಾಲದಲ್ಲಿ ಆ ಕೆಲಸ ವನ್ನು ತಪ್ಪದೆ ಮಾಡಬೇಕು ; ಎಷ್ಟು ನಿನ್ನಗು ಒಂದಾಗ್ಯೂ ಬಿಡ ಬಾರದು. ವಿಹಾರಕ್ಕೋಸ್ಕರ ನಿಯತವಾದ ಕಾಲದಲ್ಲಿ ವಿಹಾರವಿಚಾರ ವನ್ನು ಮಾಡಬೇಕೇ ಹೊರತು, ಕೆಲಸದ ವೇಳೆಯಲ್ಲಿ ಆ ವಿಷಯವನ್ನು ಪರಾಲೋಚಿಸಲೂಬಾರದು. ಈ ನಿಷಯದಲ್ಲಿ ಸ್ಥಿರಸಂಕಲ್ಪರಾದವರು, ಯಾವ ಕೆಲಸವನ್ನು ಹಿಡಿದಾಗ್ಯೂ ಅದರಲ್ಲಿ ಅಗ್ರಗಣ್ಯರಾಗುತ್ತಾರೆ. ಅವರ ಸಂಕಲ್ಪವೂ ಸಾಹಸವೂ ಆಶ್ಚರವನ್ನುಂಟುಮಾಡುವುವು.
ಪುಟ:ವಿದ್ಯಾರ್ಥಿ ಕರಭೂಷಣ.djvu/೧೦೮
ಗೋಚರ