ಪರಿಚ್ಛೇದ ೨ ೧೦೧ 12 ನೆಯ ಛಾರಲ್ಸ್ ಎಂಬ ಚಕ್ರವರ್ತಿಯು, ದುಷ್ಟನಿಗ್ರಹ ಶಿಷ್ಟ ಪರಿಪಾಲನಾರ್ಧವಾಗಿ ಸುಟು ಮಾಡಬೇಕಾಯಿತು, ತನ್ನ ಪರಿವಾರಕ್ಕೆ ಸೇರಿದ ಕೆಲವು ಜನರನ್ನು ಕರೆದುಕೊಂಡು ಅವನು ಹೊರಟನು. ಹೋದ ಕಡೆಗಳಲ್ಲೆಲ್ಲ ಸರಿಯಾಗಿ ಏರ್ಪಾಡುಗಳನ್ನು ಮಾಡುತ, ಒಂದುದಿನ ಇಪ್ಪತ್ತನಾಲ್ಕು ಘಂಟೆಗಳೂ ಕುದುರೆಯಮೇಲೆಯೇ ಇದ್ದನು. ಅವನ ಜತೆಯಲ್ಲಿ ಬಂದವರೆಲ್ಲರೂ ಆಯಾಸಪಟ್ಟು, ಮುಂದಕ್ಕೆ ಹೊರಡುವುದಕ್ಕೆ ಶಕ್ತಿಯಿಲ್ಲದೆ, ಅಲ್ಲಲ್ಲಿಯೇ ನಿಂತುಬಿಟ್ಟರು. ಹಿಡಿದ ಕೆಲಸ ಪೂರಯಿಸುವ ವರೆಗೂ ನಿಲ್ಲ ಕೂಡದೆಂಬ ಸಂಕಲ್ಪದಿಂದ ಇವನೊಬ್ಬನೇ ಪ್ರಯಾಣಮಾಡಿ ದನು, ಮಧ್ಯದಲ್ಲಿ ಕುದುರೆಯು ಸತ್ತು ಬಿದ್ದಿತು ; ಇದರಿಂದಲೂ ಭಗ್ನ ಮನೋರಧನಾಗದೆ, ಈ ಪ್ರಭುವು, ಜೀನನ್ನೂ ಕಡಿವಾಣವನ್ನೂ ಕುದುರೆ ಯಿಂದ ತೆಗೆದು ತನ್ನ ತಲೆಯ ಮೇಲಿಟ್ಟುಗೊಂಡು ಮುಂದಕ್ಕೆ ಪ್ರಯಾಣ ಮಾಡಿದನು ಸ್ವಲ್ಪ ದೂರ ಹೋದಮೇಲೆ, ಅಲ್ಲಿ ಒಂದು ಮುಸಾಫರಖಾನೆ ಸಿಕ್ಕಿತು, ಅಲ್ಲಿ ಕಟ್ಟಲ್ಪಟ್ಟಿದ್ದ ಒಂದು ಕುದುರೆಯನ್ನು ಬಿಚ್ಚಿಕೊಂಡು, ಅದಕ್ಕೆ ಚೇನನ್ನೂ ಲಗಾಮನ್ನೂ ಹಾಕಿ, ಅದರಮೇಲೆ ಕುಳಿತುಕೊಂಡು ಹೊರಟನು, ಕುದುರೆಯ ಯಜಮಾನನು ಇವನನ್ನು ತರಿಸಿಕೊಂಡು ಬಂದು, ನಾನಾವಿಧವಾಗಿ ನಿಂದಿಸಿ, ಶಿಕ್ಷೆಗೆ ಗುರಿಮಾಡುವುದಾಗಿ ಹೇಳಿ ದನು, ಈ ಪ್ರಭುವು, ಅವನನ್ನು ಕುರಿತು « ಅಯ್ಯಾ ! ಕ್ಷಮಿಸಬೇಕು. ನಾನು ಕಾರ್ ಗೌರವದಿಂದ ಹೊರಟಿದ್ದೇನೆ, ನನ್ನ ಕೆಲಸ ಪೂರಯಿಸಿದ ಕೂಡಲೆ ನಿನ್ನ ಕುದುರೆಯನ್ನು ನಿನಗೆ ಹಿಂದಿರುಗಿ ಕೊಡುವುದಲ್ಲದೆ, ಇಂತಹ ನಾಲ್ಕು ಕುದುರೆಗಳನ್ನು ಕೊಂಡುಕೊಳ್ಳುವುದಕ್ಕೆ ಸಾಕಾದಷ್ಟು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೦೯
ಗೋಚರ