ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ವಿದ್ಯಾರ್ಧಿ ಕರಭೂಷಣ MM ಕೂಡ ಕೃಷ್ಣ ಕಾಲವನ್ನು ಮಾರಿ ನಡೆಯಲಿಲ್ಲ, ಆ ದಿನ ಇವರೂ ಕೂಡ ಕಾಲತಪ್ಪಿ ಬಂದರೆಂದು ಕೆಲವರು ತಿಳಿದುಕೊಂಡರು. ಕೊಂಚ ಹೊತ್ತಾದ ಮೇಲೆ ಅವರು ಬಂದರು, ಅಲ್ಲಿದ್ದ ಜನಗಳು ಇವರು ಹೊತ್ತು ಮಾಡಿ ಕೊಂಡು ಬಂದುದಕ್ಕೆ ಕಾರಣವನ್ನು ಕೇಳಿದರು, ನಾನು ಕೃತ್ಯವಾದ ಹೊತ್ತಿಗೆ ಸರಿಯಾಗಿ ಬಂದಿರು ನೆನೆಂಬುದಾಗಿಯೂ, ಈ ದೇಹವು ಬಿಡ ಲ್ಪಟ್ಟಾಗ ನನ್ನ ಕಾಲದ ಪಟ್ಟಿಗೆ ವ್ಯತ್ಯಾಸವುಂಟಾಗುವುದೇ ಹೊರತು.. ಪ್ರಾಣವೂ ಆರೋಗ್ಯವೂ ಶಕ್ತಿಯೂ ಇರುವಾಗ ಇಂಥ ವ್ಯತ್ಯಾಸಕ್ಕೆ ಅವಕಾಶವೆಂದಿಗೂ ಉಂಟಾಗುವುದಿಲ್ಲವೆಂದೂ, ಇವರು ಅಸ್ಪಣೆ ಕೊಡಿಸಿ ದರು. ಆಗ ಕಾಲವು ಪರೀಕ್ಷಿಸಲ್ಪಟ್ಟಿತು ದೇವಸ್ಥಾನದ ಗಡಿಯಾರ ದಲ್ಲೂ ಇತರರ ಗಡಿಯಾರದಲ್ಲೂ ತಪ್ಪಿರುವುದೇ ಹೊರತು, ಅವರು ಒಂದು ನಿಮಿಷವೂ ವ್ಯತ್ಯಾಸವಿಲ್ಲದೆ ಕಾಲಕ್ಕೆ ಸುಯಾಗಿ ಬಂದರೆಂದು ಗೊತ್ತಾಯಿತು, ಸೂಕ್ಯನ ಗತಿಯಲ್ಲಿ ಹೇಗೆ ವ್ಯತ್ಯಾಸ ಒರುವುದಿಲ್ಲವೋ ಹಾಗೆ ಇವರ ಕಾಲಕ್ರಮದಲ್ಲಿ ವ್ಯತಾಸವುಂಟಾಗುವುದಿಲ್ಲ ವೆಂಬು ದಾಗಿಯೂ, ಇವರ ಕೈ ಕಾಲವೇ ನಿಜವಾದ ಕಾಲವೆಂಬುದಾಗಿಯ ಗೊತ್ತಾಯಿತು, ಬ್ರಿಟಿಷ್ ಜನಗಳಲ್ಲಿ ಈ ಗುಣಾತಿಶಯವು ವಿಶೇಷವಾಗಿರು ತದೆ. ಒಂದು ನಿಮಿಷವೂ ಹೆಚ್ಚು ಕಡಮೆಯಾಗದೆ, ನಿಯತವಾದ ಕಾಲ ದಲ್ಲಿ ಕೆಲಸಮಾಡುವುದನ್ನು ಮೊದಲು ಕಲಿತು, ಆಮೇಲೆ ಇವರು ಉದ್ದಿಷ್ಟ ವಾದ ಕೆಲಸವನ್ನು ಉಪಕ್ರಮಿಸುವರು, ನಮ್ಮ ಜನಗಳಲ್ಲಿಯ ಅನೇಕರು ಇವರ ಮೇಲುಪಂಕ್ತಿಯನ್ನು ಅನುಸರಿಸುವರು. ಈ ರಾಜಧಾನಿಯಲ್ಲಿ ಒಬ್ಬರು ಜಡ್ಡಿಗಳಿದ್ದರು. ಕೃಷ್ಣವಾಗಿ ಪ್ರತಿದಿನವೂ ಹತ್ತೂವರೆಘಂಟೆಗೆ