ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೧೦೫ www ಕೋರ್ಟಿಗೆ ಬಂದು ಛೇಂಬರಿನಲ್ಲಿ ಕೆಲಸಮಾಡುತ್ತಿದ್ದರು. ಹನ್ನೊಂದು ಘಂಟೆ ಹೊಡೆಯುವುದಕ್ಕೆ ಉಪಕ್ರಮವಾದಕೂಡಲೆ ಮೇಲಕ್ಕೆದ್ದು, ತಮ್ಮ ಕೊಟ್ಟಡಿಯ ಬಾಗಿಲನ್ನು ತೆಗೆದು ಕೋರ್ಟಿಗೆ ಹೊರಡುತ್ತಿದ್ದರು. ಹನ್ನೊಂದು ಹೊಡೆದು ಪೂರಯಿಸುವಾಗ್ಗೆ ಸರಿಯಾಗಿ ಸೀಟಿನ ಮೇಲೆ ಇರು ತಿದ್ದರು. ಅವರು ಈ ವೂರಿನಲ್ಲಿರುವವರೆಗೂ, ಪ್ರತಿಯೊಂದು ದಿವಸವೂ, ಒಂದು ನಿಮಿಷವೂ ಹೆಚ್ಚು ಕಡಿಮೆಯಿಲ್ಲದಂತೆ ಕೃಷ್ಣ ಕಾಲಕ್ಕೆ ಸರಿಯಾಗಿ ಕೆಲಸಕ್ಕೆ ಉಪಕ್ರಮಮಾಡಿ, ಆ ದಿವಸದ ಕೆಲಸ ಪೂರಯಿಸುವವರೆಗೂ ಸೀಟಿನಿಂದ ಈಚೆಗೆ ಬರುತ್ತಿರಲಿಲ್ಲ. ಮುಂದಕ್ಕೆ ಬರಬೇಕೆಂಬ ಅಪೇಕ್ಷೆ ಯುಳ್ಳವರಿಗೆ, ಈ ರೀತಿಯಲ್ಲಿ ಕಾಲನಿಬಂಧನೆಯನ್ನು ಮಾಡಿ ಕೊಂಡು ಕೆಲಸಮಾಡುವುದು ಅತ್ಯಂತ ಶ್ರೇಯಸ್ಕರವಾದುದು. ನಮ್ಮ ಹಿರಿಯರು, ಬೆಳಗ್ಗೆ ನಾಲ್ಕು ಘಂಟೆಗೆ ಏಳುವ ಪದ್ದತಿಯನ್ನಿಟ್ಟು ಕೊಂಡಿದ್ದರು. ಈಗ ಅನೇಕ ವಿದ್ಯಾರ್ಥಿಗಳೂ ಹೊತ್ತಿಗೆ ಮುಂಚೆ ಏಳುವ ಅಭ್ಯಾಸವನ್ನು ಇಟ್ಟು ಕೊಂಡಿರುತ್ತಾರೆ. ಬೆಳಗ್ಗೆ ವ್ಯಾಸಂಗಮಾಡತಕ್ಕೆ ವರಿಗೆ, ಪಾಠಗಳನ್ನು ಕಲಿಯಲು ಇದು ಅತ್ಯುತ್ತಮವಾದ ಕಾಲವು. ಆಗ ಯಾವ ತೊಂದರೆಯೂ ಇರುವುದಿಲ್ಲ, ನಾವು ಮಾಡುವ ವ್ಯಾಸಂಗವು ವಿಶೇಷ ಫಲಕಾರಿಯಾಗಬೇಕಾದರೆ, ನಮಗೆ ಸಂಪೂರ್ಣವಾದ ವಿಶ್ರಾಂತಿ ಯಿರಬೇಕು, ಸಾಯಂಕಾಲ ಏಳು ಘಂಟೆಗೆ ಊಟಮಾಡಿ ಒಂಒತ್ತು ಘಂಟೆಯೊಳಗಾಗಿ ಮಲಗಿಕೊಂಡರೆ, ನಾಲ್ಕು ಘಂಟೆಯವರೆಗೆ ಸಂಪೂರ್ಣ ವಾದ ವಿಶ್ರಾಂತಿಯ ಆಗಿರುವುದು ; ಓದಿದುದನ್ನು ಮರೆಯದಂತೆ ಇಟ್ಟು ಕೊಳ್ಳುವ ಶಕ್ತಿಯ ಬರುವುದು, ವಿದ್ಯಾರ್ಥಿಗಳಿಗೆ ಪ್ರಾಯಕವಾಗಿ 14