ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ವಿದ್ಯಾರ್ಧಿ ಕರಭೂಷಣ ಎಳು ಘಂಟೆಗಳ ನಿದ್ದೆ ಸಾಕು ; ಕೆಲವರಿಗೆ ಮಾತ್ರ ಎಂಟುಘಂಟೆ ನಿದ್ದೆ ಬೇಕಾಗುತ್ತದೆ. ಅಂಧವರು ರಾತ್ರಿ ಯೆಂಟು ಘಂಟೆಗೇ ಮಲಗಬೇಕು. ಅದು ಅಸಾಧ್ಯವಾದರೆ, ಬೆಳಗ್ಗೆ ಏಳುಘಂಟೆಗೆ ಏಳುವ ಅಭ್ಯಾಸವನ್ನು ಮಾಡ ಬೇಕು , ನಿದ್ರೆಗೆ ಕೊಡತಕ್ಕೆ ಕಾಲವನ್ನು ಕಡಮೆ ಮಾಡಿದರೆ, ಗ್ರಹಣಶಕ್ತಿ ಕಡಮೆಯಾಗುವುದು. ಚೆನ್ನಾಗಿ ವಿಶ್ರಾಂತಿಯಾಗುವುದಕ್ಕೆ ಮುಂಚೆ ಹತ್ತು ಘಂಟೆಗಳಲ್ಲಿ ಗ್ರಹಿಸಲ್ಪಡತಕ್ಕ ವಿಷಯವನ್ನು, ಸಂಪೂರ್ಣವಾದ ವಿಶ್ರಾಂತಿಯನ್ನು ಹೊಂದಿದಮೇಲೆ ಅರ್ಧಘಂಟೆಯಲ್ಲಿ ಸ್ವಾಧೀನಪಡಿಸಿ ಕೊಳ್ಳಬಹುದು. ಈ ಮರ್ಮವನ್ನು ತಿಳಿದುಕೊಳ್ಳದೆ, ಅನೇಕವಿದ್ಯಾರ್ಥಿ ಗು, ನಿದ್ರೆಗೆ ಬಹಳ ಸ್ವಲ್ಪ ಕಾಲವನ್ನು ಕೊಟ್ಟು, ಉಳಿದ ಕಾಲವನ್ನೆಲ್ಲ ವ್ಯಾಸಂಗಕ್ಕಿಟ್ಟು ಕೊಳ್ಳುವುದುಂಟು. ಇಂಧವನ್ನು ವ್ಯಾಸಂಗಕ್ರಮದ ರಹಸ್ಯವನ್ನು ತಿಳಿಯದವರೆಂದು ಧಾರಾಳವಾಗಿ ಹೇಳಬಹುದು. ಪಾಶ್ಚಾತ್ಯಪಂಡಿತರಲ್ಲಿ, ಸಕಲಶಾಸ್ತ್ರವಿಶಾರದನಾದ (6 ಬರ್ಫ 12 ಎಂಬ ಪ್ರ್ರಾಸ್ ದೇಶಸ್ಸನೊಬ್ಬನಿದ್ದನು ಇವನು, ಬಹಳ ದರಿದ್ರಾವಸ್ಥೆ ಯಲ್ಲಿದ್ದು, ತನ್ನ ವ್ಯಾಸಂಗದ ಮಹಿಮೆಯಿಂದ ಫ್ರ್ರಾಸ್ ಚಕ್ರಾಧಿಪ ತ್ಯದ ರಾಯಲ್ ಇಂಜನೀಯರಾದನು, ಸಂಪತ್ತು ಬಂದ ಮೇಲೆ, ಸೋಮಾರಿ ತನವೂ ನಿದ್ರೆಯಲ್ಲಿ ಆಸಕ್ತಿಯ ಹೆಚ್ಚಾದುವು. ಹೊತ್ತಿಗೆಮುಜೆ ಎದ್ದು * ನ್ಯಾಚುರಲ್ ಹಿಸ್ಟರಿ' ಎಂಬ ಪ್ರಾಣಿಚರಿತ್ರೆಯನ್ನು ಬರೆಯಬೇಕೆಂದು ಉದ್ದೇಶಮಾಡಿದನು. ಎಷ್ಟು ಪ್ರಯತ್ನ ಮಾಡಿದಾಗ, ಹೊತ್ತಿಗೆಮುಂಚೆ ಎದ್ದು ಬೆಳಗ್ಗೆ ಎಂಟುಘಂಟೆಯೊಳಗಾಗಿ ಕೆಲಸವನ್ನು ಪೂರಯಿಸಬೇಕೆಂಬ ಇವನ ಸಂಕಲ್ಪವು ನಡೆಯಲಿಲ್ಲ. ಜೋಸಪ್ ಎಂಬ ಒಬ್ಬ ಆಳನ್ನು